ಧರ್ಮಸ್ಥಳದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ

ಧರ್ಮಸ್ಥಳ, ನ.೫- ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದರು.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಮಿಯ ದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿ, ಆಶೀರ್ವಾದ ಪಡೆದರು.

ಕ್ಷೇತ್ರದ ಪರವಾಗಿ ಡಾ. ಹೆಗ್ಗಡೆಯವರು ಸಿ.ಟಿ.ರವಿ ಅವರನ್ನು ಗೌರವಿಸಿದರು. ಈ ಸಂದರ್ಭ ಹೇಮಾವತಿ ವೀ ಹೆಗ್ಗಡೆ ಉಪಸ್ಥಿತರಿದ್ದರು. 

ಧರ್ಮಸ್ಥಳಕ್ಕೆ ಆಗಮಿಸಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು ಸ್ವಾಗತಿಸಿದರು. ಕ್ಷೇತ್ರದ ಪರವಾಗಿ ದೇವಳದ ಕಚೇರಿ ಪ್ರಬಂಧಕ ಪಾರ್ಶ್ವನಾಥ್ ಜೈನ್ ಮತ್ತು ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಸಾಂಪ್ರದಾಯಿಕವಾಗಿ ಬರಮಾಡಿಕೊಂಡರು.

ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ರಾವ್,  ಸಿ.ಟಿ.ರವಿ ಅವರ ಆಪ್ತ ಕಾರ್ಯದರ್ಶಿ ಸಂದೀಪ್ ಶೆಟ್ಟಿ, ಮುಗೆರೋಡಿ ಉಪಸ್ಥಿತರಿದ್ದರು .

ಅಲಹಾಬಾದ್ ಹೈಕೋರ್ಟ್ ತೀರ್ಪಿನ ಆಧಾರದಲ್ಲಿ   ಕರ್ನಾಟಕ ಸರಕಾರ ಮದುವೆ ಉದ್ದೇಶಕ್ಕೆ ಮತಾಂತರ ಮಾಡುವುದನ್ನು ನಿಷೇಧಿಸಲು ಕಾಯ್ದೆ ತರಲಿದೆ. ಜೆಹಾದಿಗಳಿಂದ ನಮ್ಮ ಸಹೋದರಿಯರ ಗೌರವ ಕಾಪಾಡುವ ವಿಚಾರದಲ್ಲಿ ಮೌನವಾಗಿರಲು ಸಾಧ್ಯವಿಲ್ಲ.ಬಲವಂತದ ಮತಾಂತರ ದಲ್ಲಿಯಾರೇ ತೊಡಗಿದ್ದರೂ ಕಠಿಣ ಶಿಕ್ಷೆಗೆ ಒಳಪಡಿಸಲಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಟ್ವೀಟರ್‌ನಲ್ಲಿ ಟ್ವೀಟ್ ಮಾಡಿದ್ದರು. ಅದರ ಕುರಿತು ಬುಧವಾರ ಬೆಳ್ತಂಗಡಿಗೆ ಆಗಮಿಸಿದ ಸಂದರ್ಭ ಮಾಧ್ಯಮದವರು ಕೇಳಿದ ಪ್ರಶ್ನೆಗೆ  ಉತ್ತರಿಸಿ ಮಾತನಾಡಿದ ಅವರು, ಸಮಾಜ ಶುದ್ದ ಪ್ರೇಮವನ್ನು ಗೌರವಿಸುತ್ತದೆ. ರಾಧಾ ಕೃಷ್ಣರ ಪ್ರೇಮ  ಶುದ್ದ ಪ್ರೇಮ. ಶುದ್ದವಾದ ಪ್ರೇಮದ ಜಾಗದಲ್ಲಿ ಮೋಸ ಮತ್ತು ಮತಾಂತರ ಸೇರಿಕೊಂಡಾಗ ಎಚ್ಚರ ವಹಿಸಬೇಕಾಗಿರೋದು ಪ್ರತಿ ಕುಟುಂಬ, ಪ್ರತಿ ವ್ಯಕ್ತಿಯ ಜವಾಬ್ದಾರಿ. ವ್ಯಕ್ತಿಯೂ ಮೈ ಮರೆತಾಗ ಕುಟುಂಬವೂ ಮೈಮರೆತಾಗ ಆಗ ಒಂದು ಸಮಾಜ ಸುಸ್ಥಿತಿಯಲ್ಲಿ ಇಡೋದಕ್ಕೆ ಕಾನೂನಿನ ದಾರಿಯನ್ನು ಹುಡುಕಬೇಕಾಗುತ್ತದೆ. ಇದರ ಕುರಿತು ಬಹಳಷ್ಟು ಸಾಮಾಜಿಕ ಸಂಸ್ಥೆಗಳು ಲವ್ ಜಿಹಾದ್, ಅದರ ಪರಿಣಾಮ ಕುರಿತು ರಿಪೋರ್ಟ್ ಕೊಟ್ಟಿದ್ದಾರೆ. ಅವೆಲ್ಲವನ್ನೂ ಆಧರಿಸಿ ಸರಕಾರ ಒಂದು ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದರು.