ಧರ್ಮಸ್ಥಳದಲ್ಲಿ ಕೊರೊನಾ ಆರೈಕೆ

ಉಜಿರೆ, ಜೂ.೧- ನೆರಿಯಾಗ್ರಾಮದ ಗಂಡಿಬಾಗಿಲು ಸಿಯೋನ್ ಆಶ್ರಮದ ೧೩೫ ಮಂದಿ ಕೊರೊನಾ ಸೋಂಕಿತರನ್ನುಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜರವರ ಉಸ್ತುವಾರಿಯಲ್ಲಿ ಭಾನುವಾರ ಧರ್ಮಸ್ಥಳಕ್ಕೆ ಕರೆ ತಂದು ಶ್ರೀ ಕ್ಷೇತ್ರದರಜತಾದ್ರಿ ವಸತಿ ಛತ್ರದ ಕೊರೊನಾ ಆರೈಕೆ ಕೇಂದ್ರದಲ್ಲಿ ಶುಶ್ರೂಷೆ ಸೌಲಭ್ಯ ಕಲ್ಪಿಸಲಾಗಿದೆ.
ಧರ್ಮಸ್ಥಳದ ವತಿಯಿಂದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಕೇಂದ್ರದಲ್ಲಿ ಸೋಂಕಿತರಿಗೆ ಊಟೋಪಚಾರ, ಮತ್ತಿತರ ಎಲ್ಲಾ ಸೌಲಭ್ಯಗಳನ್ನು ಉಚಿತವಾಗಿ ನೀಡಿದ್ದು ಹೆಚ್ಚುವರಿಯಾಗಿ ಸೋಮವಾರಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯಿಂದಎಲ್ಲರಿಗೂ ಬೇಕಾದ ವಸ್ತ್ರಗಳನ್ನು ವಿತರಿಸುವ ವ್ಯವಸ್ಥೆ ಮಾಡಿದರು.
ಕೊರೊನಾ ಆರೈಕೆ ಕೇಂದ್ರದ ಮಾರ್ಗದರ್ಶಿ ಅಧಿಕಾರಿ ಡಾ.ಜಯಕೀರ್ತಿ ಜೈನ್, ಸಿರಿ ಸಂಸ್ಥೆಯ ಮಾರುಕಟ್ಟೆ ಮೇಲ್ವಿಚಾರಕ ಸುಧಾಕರ್, ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮೋಹನ್, ಸಿಯೋನ್ ಆಶ್ರಮದ ಮೇಲ್ವಿಚಾರಕಿ ಸಂಧ್ಯಾ ಮತ್ತುದಾದಿಯರು ಉಪಸ್ಥಿತರಿದ್ದರು.