ಧರ್ಮರಕ್ಷಣೆಗೆ ಪ್ರತಿಯೊಬ್ಬರೂ ಶ್ರಮಿಸಬೇಕು ನಾಗರಾಜ

ದೇವದುರ್ಗ.ಜ.೧೪-ರಾಜ್ಯ ಹಾಗೂ ದೇಶದಲ್ಲಿ ನಡೆಯುತ್ತಿರುವ ಮತಾಂತರವನ್ನು ತಡೆಯುವ ಮೂಲಕ ಪ್ರತಿಯೊಬ್ಬರು ತಮ್ಮ ಮೂಲ ಧರ್ಮರಕ್ಷಣೆಗೆ ಶ್ರಮಿಸಬೇಕು ಎಂದು, ನಾಗರಾಜ ಅಕ್ಕರಿಕಿ ಆಡಳಿತ ಮಂಡಳಿ ಸದಸ್ಯ ಹಂಪಿ ಕನ್ನಡ ವಿಶ್ವವಿದ್ಯಾಲಯ ಅವರು ಅಭಿಪ್ರಾಯಪಟ್ಟರು.
ಮತಾಂತರ ನೀಷೇದ ಕಾಯ್ದೆ ಹಾಗೂ ಗಿರಿಜನ ಸುರಕ್ಷ ವೇದಿಕೆ ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಕ್ರವಾರ ಮಾತನಾಡಿದರು, ತಮ್ಮನ್ನು ತಾವು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ,ಎನ್ನುವುದು ಸಮಾಜ ನಂಬಿರುವ ಮೌಲ್ಯ. ಧಾರ್ಮಿಕ ಆಚರಣೆ ಎನ್ನುವುದು ಪ್ರತಿಯೊಬ್ಬ ಮನುಷ್ಯನ ಮೂಲಭೂತ ಹಕ್ಕಾಗಿದೆ,ಆದರೆ ಹಕ್ಕನ್ನು ಯಾರು ಕಸಿದುಕೊಳ್ಳಲು ಬಿಡಬಾರದು,ಅನಕ್ಷರತೆ,ಮತ್ತು ಅಸಹಾಯಕತೆಯ ಸುಳಿಯಲ್ಲಿ ಒಂದು ಧರ್ಮ ಸಿಲುಕಿಕೊಂಡಾಗ, ಆ ಪರಿಸ್ಥಿತಿಯಿಂದ ತಾತ್ಕಾಲಿಕವಾಗಿ ಹೊರಬರುವ ವಿವಿಧ ಆಮಿಷ ತೋರಿಸಿ ತಮ್ಮ ಧರ್ಮಕ್ಕೆ ಮತಾಂತರಿಸಿಕೊಳ್ಳುವ ಪ್ರಯತ್ನವನ್ನು ಯಾರು ಮಾಡಬಾರದು,ಇದು ಸಂವಿಧಾನಿಕ ವಿರೋಧ ನೀತಿಯಾಗಿದೆ. ಇಂತಹ ಕೆಟ್ಟ ನಿಲುವುಗಳನ್ನು ಯಾವುದೇ ಜಾತಿ ಧರ್ಮದ ವ್ಯಕ್ತಿತ್ವವುಳ್ಳವರು ಮಾಡಬಾರದು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಗಿರಿಜನ ಸುರಕ್ಷಾ ವೇದಿಕೆಯ ವೆಂಕಟೇಶ ಚಿಂತಲಕುಂಟಿ, ರಾಜ್ಯ ಸಂಚಾಲಕರಾದ ಆರ್.ಶ್ರೀನಿವಾಸ್ ಮೈಸೂರ,ಗಂಗಾಧರ ನಾಯಕ ತಿಂತೀಣಿ, ತಾಲೂಕಿನ ಜಿಲ್ಲೆಯ ಮುಖಂಡರು ಸೇರಿದಂತೆ ಇತರರಿದ್ದರು.