ಧರ್ಮಪಾಲನೆಯಿಂದ ಜೀವನ ಯಶಸ್ಸು – ಕಣ್ವಕುಪ್ಪೆ ಶ್ರೀಗಳು.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಆ. 5: – ಧರ್ಮಪಾಲನೆಯಿಂದ ಜೀವನದಲ್ಲಿ ಯಶಸ್ಸು, ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನು ರಕ್ಷಿಸಲಿದೆ ಎಂದು ಕಣ್ವಕುಪ್ಪೆ ಗವಿಮಠದ ಷ.ಭ್ರ. ಶ್ರೀ ನಾಲ್ವಡಿ ಶಾಂತಲಿಂಗ ಸ್ವಾಮಿಜಿ ಹೇಳಿದರು.
ಅವರು ಗುರುವಾರ ತಾಲೂಕಿನ  ಹಾರಕಭಾವಿ ಸಮೀಪದ ವ್ಯಾಪ್ತಿಯ ಪೆನ್ನಳಿ ಬಸವೇಶ್ವರ ದೇವಸ್ಥಾನ ಉದ್ಘಾಟನಾ ಹಾಗೂ ಬಸವೇಶ್ವರ ಮೂರ್ತಿಯ ಪ್ರತಿಷ್ಠಾಪನಾ  ಕಾರ್ಯಕ್ರಮವನ್ನು ನೆರವೇರಿಸಿ ಅವರು ಆಶೀರ್ವಚನ‌ ನೀಡಿ ಮಾತನಾಡುತ್ತ ಕಾಯಕ ನಿಷ್ಠೆಯ ಜೊತೆಗೆ ಸಹಾಭಾಳ್ವೆಯೊಂದಿಗೆ ಪ್ರತಿಯೊಬ್ಬರು ಜೀವನ ನಡೆಸಬೇಕು ಸಿಹಿ-ಕಹಿ ಸಮಾನವಾಗಿ ಕೋಡು ಎಂದು ಬೇಡುವ ಭಕ್ತ ಶಿವನಿಗೆ ಇಷ್ಟ,ಕಷ್ಟ ದುಃಖಗಳನ್ನು ಸಮಾನಾಗಿ ಸ್ವೀಕರಿಸಿ ಎಂದರು.
ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಗುಂಡುಮುಣುಗು ಕೆ.ತಿಪ್ಪೇಸ್ವಾಮಿ, ದೇವಸ್ಥಾನ ಸಮಿತಿಯ ಅಧ್ಯಕ್ಷ ಕೊಟ್ರೇಶ್ ಮಾತನಾಡಿದರು.
ಶಾಸಕ ಎನ್.ವೈ.ಗೋಪಾಲಕೃಷ್ಣ,  ಪಂಚಾಮಸಾಲಿ ಸಮಾಜದ ತಾಲ್ಲೂಕು ಅಧ್ಯಕ್ಷ ಎಚ್. ರೆವಣ್ಣ, ಗ್ರಾಮ ಪಂಚಾಯತಿ ಅಧ್ಯಕ್ಷೆ ಮೂಗಮ್ಮ, ಹುಲಿಕೆರೆ ರಮೇಶ್ ಗೌಡ್ರು, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಡಿ.ಶೇಖರಪ್ಪ, ವಾಣಿಜ್ಯ ತೆರಿಗೆ ಅಧಿಕಾರಿ ಶ್ವೇತಾ ಎಸ್.ಸಿ,  ನಿವೃತ್ತ ಉಪಪ್ರಾಚಾರ್ಯ ಸಿ  ಮಹಾಲಿಂಗಪ್ಪ, ಮಾಜಿ ಸದಸ್ಯ ಹಾಲಿಮನೆ ಸಿದ್ದ ಲಿಂಗಪ್ಪ, ಸದಸ್ಯರಾದ ಕೋಟಿಲಿಂಗನಗೌಡ್ರು,  ಇತರರಿದ್ದರು.