ಧರ್ಮದ ಉಳಿವಿಗೆ ಹಬ್ಬಗಳ ಆಚರಣೆಯ ಮಹತ್ವವನ್ನ ಯುವಪೀಳಿಗೆಗೆ ತಿಳಿಸುವುದು ಅಗತ್ಯ

ಸಂಜೆವಾಣಿ ನ್ಯೂಸ್
ಮೈಸೂರು: ಸೆ.05- ತಾಯಂದಿರನ್ನೆಲ್ಲಾ ತೊಡಗಿಸಿಕೊಂಡು ನಡೆಸಿಕೊಂಡು ಬರುವಂತಹ ಅತಿ ದೊಡ್ಡ ಹಬ್ಬ ಶ್ರೀ ವರಮಹಾಲಕ್ಷ್ಮಿ ವ್ರತ , ಹಿಂದೂ ಧರ್ಮ ಉಳಿಯಬೇಕೆಂದರೆ ಇಂತಹ ಹಬ್ಬಗಳು ಎಲ್ಲಾ ಕಡೆಗಳಲ್ಲಿ ಒಟ್ಟುಗೂಡಿ ನಡೆಸಲ್ಪಡುವುದು ಅತಿ ಮುಖ್ಯವಾಗಿದೆ ಎಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್ ಕೆಎಂಪಿ ಕೆ ಟ್ರಸ್ಟ್ ಆಯೋಜಿಸಿದ ಶ್ರೀ ವರಮಹಾಲಕ್ಷ್ಮಿ ಹಬ್ಬದ ಅಂಗವಾಗಿ ವರಮಹಾಲಕ್ಷ್ಮಿ ಜೊತೆ ಫೆÇೀಟೋ ಸ್ಪರ್ಧೆಯಲ್ಲಿ ಆನ್ಲೈನ್ ಮೂಲಕ 250ಕ್ಕೂ ಹೆಚ್ಚು ಸ್ಪರ್ಧಿಗಳು ತಮ್ಮ ತಮ್ಮ ಮನೆಯಲ್ಲಿ ಅಲಂಕರಿಸಿ ಕೂರಿಸಿರುವ ಶ್ರೀ ವರಮಹಾಲಕ್ಷ್ಮಿ ಜೊತೆ ಫೆÇೀಟೋವನ್ನು ಆನ್ಲೈನ್ ಮೂಲಕ ಕಳಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಸ್ಪರ್ಧಾಳುಗಳಿಗೆ ಬಹುಮಾನ ನೀಡಿ ಮಾತನಾಡಿದ ಅವರು ಮಕ್ಕಳಿಗೆ ಆಸ್ತಿಯನ್ನು ಮಾಡದೆ ಮಕ್ಕಳನ್ನೇ ಆಸ್ತಿ ಮಾಡಬೇಕು. ಮಾತ್ರವಲ್ಲದೆ ನಮ್ಮ ಧರ್ಮದಜಾಗೃತಿಯನ್ನು ಎಲ್ಲರಲ್ಲೂ ಮೂಡಿಸಬೇಕು ಎಂದು ತಿಳಿಸಿದರು ಮಂದಿನ ಪೀಳಿಗೆಯ ಮಕ್ಕಳನ್ನು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು. ಈ ಮೂಲಕ ಹಿಂದೂ ಸನಾತನ ಸಂಸ್ಕೃತಿ ರಕ್ಷಿಸಬೇಕು ಎಂದರು.
ವರಮಹಾಲಕ್ಷ್ಮಿ ಫೆÇೀಟೋ ಸ್ಪರ್ಧೆಯಲ್ಲಿ 12 ಅತ್ಯುತ್ತಮ ಅಲಂಕರಿಸಿದ ಚಿತ್ರಗಳ ವಿಜೇತರಾದ ಶೃತಿ ಹರೀಶ್,ಚಂಚಲ, ಎಂ ಎಸ್ ಸುಮಾ,ಅಶ್ವಿನಿ ದಿನೇಶ್,ವರ್ಷ ಪ್ರದೀಪ್,ದೀಪಿಕಾ,ಮಾನಸ,ಸೌಮ್ಯಶ್ರೀ ಮಂಜುನಾಥ, ಸುಶ್ಮಿತಾ ನವೀನ್,ಇಂದ್ರಾಣಿ,ರವರಿಗೆ ಬಹುಮಾನ ವಿತರಿಸಲಾಯಿತು, ಆನಂತರ ಸ್ಪರ್ಧಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ ಟಿ ಪ್ರಕಾಶ್,ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಅರ್ಥ ಶಾಸ್ತ್ರದ ವಿಭಾಗದ ಪ್ರಾಧ್ಯಾಪಕರಾದ ಡಾ.ಆರ್.ಹೆಚ್ ಪವಿತ್ರ, ಹೋಟೆಲ್ ಮಾಲೀಕರ ಸಂಘದ ರಾಜ್ಯ ಉಪಾಧ್ಯಕ್ಷ ರವಿ ಶಾಸ್ತ್ರಿ, ಉದ್ಯಮಿ ಸುಬ್ರಮಣ್ಯ ತಂತ್ರಿ, ಕೃಷ್ಣದಾಸ ಪುರಾಣಿಕ್, ಎನ್ ಎಂ ನವೀನ್ ಕುಮಾರ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾದ ಹೇಮ ನಂದೀಶ್, ನಾಗಮಣಿ, ಜೀವದರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಮೃಗಾಲಯ ಪ್ರಾಧಿಕಾರ ಮಾಜಿ ನಿರ್ದೇಶಕರಾದ ಜ್ಯೋತಿ ರೇಚಣ್ಣ,ಸವಿತಾ ಘಾಟ್ಕೆ, ರೇಖಾ ಶ್ರೀನಿವಾಸ್ , ದೀಪ, ಅಶ್ವಿನಿ ಗೌಡ, ಗೌರಿ ಶ್ರೀನಾಥ್, ರೂಪ, ನಾಗಶ್ರೀ , ಕೆ ಎಂ ಪಿ ಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಸಂಘಟನ ಕಾರ್ಯದರ್ಶಿ ಅಜಯ್ ಶಾಸ್ತ್ರಿ, ಸುಚೇಂದ್ರ, ಚಕ್ರಪಾಣಿ, ಹಾಗೂ ಇನ್ನಿತರರು ಹಾಜರಿದ್ದರು