
ಪ್ರತಿಭೆ ಜೊತೆಗೆ ಅದೃಷ್ಟ,ಯೋಗವೂ ಮುಖ್ಯ. ಹಾಗೆ ಜೀವನದಲ್ಲಿ ರಾಜಯೋಗ ಬಂದರೆ ಆತ ಮುಟ್ಟಿದ್ದೆಲ್ಲ ಚಿನ್ನ. ಹಾಸ್ಯ ಕಲಾವಿದನಾಗಿ ಗುರುತಿಸಿಕೊಂಡಿರುವ ಧರ್ಮಣ್ಣ ಕಡೂರುಗೆ ನಾಯಕನಾಗುವ “ರಾಜಯೋಗ” ಬಂದಿದೆ.
ನಿರ್ದೇಶಕ ಲಿಂಗರಾಜ ಉಚ್ಚಂಗಿದುರ್ಗ ಆಕ್ಷನ್ ಕಟ್ ಹೇಳಿರುವ ಚಿತ್ರ ಇದು.ಕುಮಾರ ಕಂಠೀರವ, ದೀಕ್ಷಿತ್ ಕೃಷ್ಣ, ಪ್ರಭು ಚಿಕ್ಕನಾಯ್ಕನಹಳ್ಳಿ, ಲಿಂಗರಾಜು ಕೆಎನ್, ಅರ್ಜುನ್ ಅಣತಿ ಅಲ್ಲದೆ ಧರ್ಮಣ್ಣ ಸಹೋದರ ಹೊನ್ನಪ್ಪ ಕಡೂರು ಸೇರಿ ಆರು ಜನ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.
ಸದ್ದುಗದ್ದಲವಿಲ್ಲದೆ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ. ಹೀಗಾಗಿ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ವೇಳೆ ಮಾತಿಗಿಳಿದ ಧರ್ಮಣ್ಣ ಪಾತ್ರದಲ್ಲಿ ಕಾಮಿಡಿ, ಎಮೋಷನ್ ಇದೆ. ಗ್ರಾಮೀಣ ಭಾಗದಲ್ಲಿ ನಡೆಯುವ ಕಥೆ. ಎಲ್ಲ ಪಾತ್ರಗಳಿಗೂ ಸಮಾನ ಅವಕಾಶವಿದೆ. ನನ್ನನ್ನು ನಂಬಿ ಇಂಥ ಪಾತ್ರವನ್ನು ಕೊಟ್ಟಿದ್ದಾರೆ ಎಂದು ಹೇಳಿದರು,
ನಾಯಕಿ ನಿರೀಕ್ಷಾರಾವ್ ಮೂಢನಂಬಿಕೆ, ನಂಬಿಕೆಗಳ ಮಧ್ಯೆ ನಡೆಯುವ ಕಥೆ. ನನ್ನದು ಕುಟುಂಬದ ಗೃಹಿಣಿಯ ಪಾತ್ರ ಎಂದರು.
ನಿರ್ದೇಶಕ ಲಿಂಗರಾಜು ಮೊದಲ ಚಿತ್ರ. ಎಲ್ಲರಿಗೂ ಒಂದಲ್ಲ ಒಂದು ದಿನ ರಾಜಯೋಗ ಬಂದೇ ಬರುತ್ತದೆ ಎನ್ನುವುದು ತಿರುಳು.ಧರ್ಮಣ್ಣ ಅವರನ್ನು ರಾಮ ರಾಮ ರೇ ಚಿತ್ರದಲ್ಲಿ ನೋಡಿದ್ದೆ, ಅಭಿನಯ ಇಷ್ಟವಾಗಿತ್ತು. ಚಿತ್ರದ ಮೂಲಕ ನಾಯಕನ್ನಾಗಿ ಮಾಡಿದ್ದೇನೆ. ತಂದೆ, ಪತ್ನಿ, ಚಿಕ್ಕಪ್ಪ ದೊಡ್ಡಪ್ಪ ಹೀಗೆ ಎಲ್ಲಾ ಪಾತ್ರಗಳು ಬರುತ್ತವೆ. ತಂದೆ ಮಗನ ಸುತ್ತ ನಡೆಯುವ ಕಥೆ. ಜೋತಿಷ್ಯ ಸುಳ್ಳಲ್ಲ, ಅದನ್ನು ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ, ಅಂಥ ಕಥೆಯನ್ನು ಚಿತ್ರದಲ್ಲಿ ತೋರಿಸಿದ್ದೇವೆ .ಮಗನ ಪಾತ್ರದ ಮೂಲಕ ತಂದೆಗೆ ಬುದ್ದಿ ಕಲಿಸುವ ಕಥೆಯಿದೆ. ಗಂಬೀರ ವಿಷಯವನ್ನು ಹಾಸ್ಯದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ ಎಂದರು
ಅಕ್ಷಯ್ ರಿಶಭ್ ಸಂಗೀತ , ವಿಷ್ಣುಪ್ರಸಾದ್ ಕ್ಯಾಮರಾ ಚಿತ್ರಕ್ಕಿದೆ. ನಾಗೇಂದ್ರ ಶಾ ನಾಯಕನ ತಂದೆಯ ಪಾತ್ರ ನಿರ್ವಹಿಸಿದ್ದು, ಕೃಷ್ಣ ಮೂರ್ತಿ ಕವುತಾರ್ , ದಾರಿ ತಪ್ಪಿಸುವ ಜೋತಿಷಿ ಪಾತ್ರ ಮಾಡಿದ್ದಾರೆ. ಶ್ರೀನಿವಾಸಗೌಡ್ರು, ಉಷಾ ರವಿಶಂಕರ್, ಮಹಾಂತೇಶ ಹಿರೇಮಠ್ ಮತ್ತಿತರಿದ್ದಾರೆ.