ಧರ್ಮಚಿಂತನಾ ಸಭೆ

ಇಂಡಿ :ಜು.21:ಮೌನಕ್ರಾಂತಿಯ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ಏಕೈಕ ಮಠ ಗೊಳಸಾರದ ಪುಂಡಲಿಂಗ ಮಹಾಶಿವಯೋಗಿಗಳ ಮಠ.ತಾಯಿಯ ಮುಖದಲ್ಲಿ ಕಾಣುವ ಕರುಣೆಯ ಭಾವನೆ ಇಂದಿನ ಮಠದ ಪೀಠಾಪತಿ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳ ಮುಖದಲ್ಲಿ ಕಾಣುತ್ತದೆ.ಸಮಾಜ ಪರಿವರ್ತನೆಯಲ್ಲಿ ಗೊಳಸಾರ ಶ್ರೀ ಪುಂಡಲಿಂಗ ಮಹಾಶಿವಯೋಗಿಗಳ ಮಠ ಕೊಡುಗೆ ಅನನ್ಯ ಎಂದು ಆನಂದ ಶಾಸ್ತ್ರಿ ಬರೂರ ಹೇಳಿದರು.

ಅವರು ಬುಧವಾರ ಇಂಡಿ ತಾಲೂಕಿನ ನಾದ ಕೆಡಿ ಗ್ರಾಮದಲ್ಲಿ ಶ್ರೀ ಸದ್ಗುರು ಪುಂಡಲಿಂಗ ಮಹಾಶಿವಯೋಗಿಗಳ ಪುಣ್ಯಾರಾಧನೆ ಮಹೋತ್ಸವದ ನಿಮಿತ್ಯ ಹಮ್ಮಿಕೊಂಡ ಧರ್ಮಚಿಂತನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಮಾನವೀಯ ಮೌಲ್ಯ, ತತ್ವ ಸಿದ್ದಾಂತ,ನೀತಿ ಸದಾಚಾರಗಳನ್ನು ಹೊಂದಿ, ಬದುಕಿನ ಪರಮ ಸತ್ಯವನ್ನು ತಿಳಿಯುವುದೇ ಧರ್ಮವೆಂದು ನಂಬಿದ ಬಿಜಾಪೂರ ಜಿಲ್ಲೆಯ ಇಂಡಿ ತಾಲೂಕಿನ ಗೋಳಸಾರ ಗ್ರಾಮದ ಸದ್ಗುರು ಪುಂಡಲಿಂಗ ಮಹಾಶಿವಯೋಗಿಗಳು.ಬಡವ,ಬಲ್ಲಿದವರಿಗೆ ಬೇಕಾಗಿ,ಸಂಸಾರದಲ್ಲಿದ್ದು ಯೋಗಿಯಾಗಿ ಮೆರೆದವರು.ನಡೆ,ನುಡಿ ಒಂದಾಗಿ,ಕಾಯಕ ದಾಸೋಹದ ಪ್ರತಿರೂಪವಾಗಿ ಆಶೆ,ಆಮೀಷಗಳಿಗೆ ಅತೀತವಾಗಿ,ಭಾವುಕ ಭಕ್ತರಿಗೆ ಲೀಲಾಮೂರ್ತಿಯಾಗಿ ಬದುಕಿದವರು ಪುಂಡಲಿಂಗ ಶ್ರೀಗಳು ಎಂದು ಹೇಳಿದರು.

ಜಗವೆಲ್ಲ ನಗುತ್ತಿರಲಿ ಜಗದ ದುಖ ನನಗಿರಲಿ ಎಂದು ಹೇಳಿದ ತ್ರೀಧರೇಶ್ವರ ಮಹಾಶಿವಯೋಗಿಗಳು,ನನಗೆ ಕಷ್ಟವನ್ನು ನೀಡುವುದಾದರೆ ಶಕ್ತಿಮಿರಿ ಕಷ್ಟ ನೀಡು,ಆದರೆ ನನ್ನ ಬಳಿ ಬರುವ ಭಕ್ತಸಮೂಹಕ್ಕೆ ಸಿರಿಸಂಪತ್ತು ನೀಡು ಎಂದು ಭಗವಂತನಲ್ಲಿ ಪ್ರಾರ್ಥಿಸಿದ ಏಕೈಕ ಶರಣ ತ್ರೀಧರೇಶ್ವರ ಶ್ರೀಗಳು ಎಂದು ಹೇಳಿದರು.ಸಾಮಾಜಿಕ ಕಳಕಳಿಯನ್ನು ಇಟ್ಟುಕೊಂಡು ಸಾಮೂಹಿಕ ವಿವಾಹ,ಉಚಿತ ನೇತ್ರತಪಾಸಣೆ,ಕಿವಿ ತಪಾಸಣೆ ಹಾಗೂ ಶ್ರವಣ ಸಾಧನಗಳನ್ನು ನೀಡುವ ಮೂಲಕ ಭಕ್ತರ ಹಿತ ಕಾಪಾಡುವ ಸಮಾಜಮುಖಿ ಕಾರ್ಯದಲ್ಲಿ ತೊಡಿಗಿರುವ ಇಂದಿನ ಪೀಠಾಪತಿ ಅಭಿನವ ಪುಂಡಲಿಂಗ ಮಹಾಶಿವಯೋಗಿಗಳ ಕಾರ್ಯ ಶ್ಲಾಘನೀಯವಾದುದ್ದು ಎಂದು ಹೇಳಿದರು.

12 ನೇ ಶತಮಾನದಲ್ಲಿ ಮಾತನಾಡಿದನ್ನು ಬದುಕಿನಲ್ಲಿ ಆಚರಣೆಯಲ್ಲಿ ತಂದವರು ಮೊಟ್ಟಮೊದಲು ಬಸವಣ್ಣವನರು,ಅವರ ನಂತರದಲ್ಲಿ ಆಡಿದ ಮಾತು ಬದುಕಿನಲ್ಲಿ ಆಚರಣೆಯಲ್ಲಿ ತಂದವರು ಪುಂಡಲಿಂಗ ಮಹಾಶಿವಯೋಗಿ ಹಾಗೂ ತ್ರೀಧರೇಶ್ವರ ಮಹಾಶಿವಯೋಗಿಗಳು ಎಂದು ಹೇಳಿದರು.ಪ್ರತಿಯೊಬ್ಬರು ಸತ್ಯ,ಶಾಂತಿ,ನೀತಿಯಿಂದ ಜೀವನ ಸಾಗಿಸಬೇಕು.ಜೀವನ ಪಾವನಗೊಳಿಸಲು ಮಠ,ಮಂದಿರ,ಶರಣರ ದರ್ಶನ ಮಾಡಬೇಕು ಎಂದು ಹೇಳಿದರು.

ಅಭಿನವ ಪುಂಡಲಿಂಗ ಮಹಾಶಿವಯೋಗಿಗಳು ಸಾನಿಧ್ಯ ವಹಿಸಿದ್ದರು.ರೋಡಗಿ ವೀರಕ್ತಮಠದ ಅಭಿನವ ಶಿವಲಿಂಗೇಶ್ವರ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು.ಸಿದ್ದರಾಜ ಮಹಾರಾಜ,ವೈ.ಬಿ.ಕೊಳ್ಳೂರ ಶಾಸ್ತ್ರಿ ಮಾತನಾಡಿದರು.ನಿಂಗಣ್ಣ ಐರೋಡಗಿ,ಪೈಗಂಬರ ದೇಸಾಯಿ, ಭೂತಾಳಿ ತಾವರಖೇಡ,ಆರ್.ಕೆ.ಪಾಟೀಲ,ಮಲ್ಲಿಕಾರ್ಜುನ ಬಂಡಿ,ಮಹಾದೇವ ಕೆರುಟಗಿ,ಉಮೇಶ ಬಡಿಗೇರ,ಸಿದ್ದರಾಯ ಐರೋಡಗಿ,ಸಿದ್ದರಾಮ ತಳವಾರ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು.ರುದ್ರಗೌಡ ಬಿರಾದಾರ ಸ್ವಾಗತಿಸಿದರು.ರವೀಂದ್ರ ಕೆರುಟಗಿ ನಿರೂಪಿಸಿದರು.