
ತಾಳಿಕೊಟೆ:ಮೇ.15: ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಅಧರ್ಮವು ತಾಂಡವವಾಡುತ್ತಿತ್ತು ಅದನ್ನು ತೆಗೆದು ಹಾಕುವದರೊಂದಿಗೆ ಮತದಾರರು ಧರ್ಮಕ್ಕೆ ಜೈ ಎಂದಿದ್ದಾರೆಂದು ಅಸ್ಕಿ ಪೌಂಡೇಶನ್ ಅಧ್ಯಕ್ಷ ಕಾಂಗ್ರೇಸ್ ಮುಖಂಡ ಸಿ.ಬಿ.ಅಸ್ಕಿ ಅವರು ಹೇಳಿದರು.
ಪಟ್ಟಣದಲ್ಲಿ ಮುದ್ದೇಬಿಹಾಳ ಮತಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ಗೆಲವು ಸಾಧಿಸಿದ್ದರ ಕುರಿತು ಆಯೋಜಿಸಲಾದ ವಿಜಯೋತ್ಸವದಲ್ಲಿ ನೇತೃತ್ವವವಹಿಸಿ ಮಾತನಾಡುತ್ತಿದ್ದ ಅವರು ಮುದ್ದೇಬಿಹಾಳ ಕ್ಷೇತ್ರದಲ್ಲಿ 5 ವರ್ಷಗಳ ಕಾಲ ದುರಾಡಳಿತ ಎಂಬುದು ತುಂಬಿ ತುಳಕುತ್ತಿತ್ತು ಅದರ ಜೊತೆಯಾಗಿ ಅಭಿವೃದ್ದಿ ಹೆಸರಿನ ಮೇಲೆ ಹಣ ಗಳಿಕೆಯೇ ವ್ಯವಹಾರವನ್ನಾಗಿ ಮಾಡಿಕೊಳ್ಳಲಾಗಿತ್ತು ಇಂತಹ ದುರಾಡಳಿತ ಆಡಳಿತವನ್ನು ತೆಗೆದು ಹಾಕಲು ಮತದಾರ ಬಂದುಗಳು ಸ್ವಾಭಿಮಾನಿ ಕಾಂಗ್ರೇಸ್ ಅಭ್ಯರ್ಥಿ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರನ್ನು ಗೆಲ್ಲಿಸಿದ್ದಾರೆಂದರು.
ಈ ಸಮಯದಲ್ಲಿ ಕಾಂಗ್ರೇಸ್ ಮುಖಂಡರುಗಳಾದ ಸುರೇಶ ನಾಡಗೌಡ, ವಿಜಯಸಿಂಗ್ ಹಜೇರಿ, ಮಲ್ಲಿಕಾರ್ಜುನ ಪಟ್ಟಣಶೆಟ್ಟಿ, ಪರಶುರಾಮ ತಂಗಡಗಿ, ಗಟ್ಟು ಅಗರವಾಲಾ, ಒಳಗೊಂಡು ನೂರಾರು ಜನ ಕಾಂಗ್ರೇಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.