ಧರಿನಾಡು ಕನ್ನಡ ಸಂಘದ ಉದ್ಘಾಟನೆ: ಬಹುಭಾಷಾ ಕವಿಗೋಷ್ಟಿ

ಬೀದರ:ನ.10: ನಗರದ ಆರ್. ಹೆಚ್. ಬಲ್ಲೂರ ಪ್ರೌಢ ಶಾಲೆಯಲ್ಲಿ ಧರಿನಾಡು ಕನ್ನಡ ಸಂಘ ಕೇಂದ್ರ ಸಮಿತಿ ಬೀದರ ಹಾಗೂ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಬೀದರ ಇವರುಗಳ ಸಂಯುಕ್ತಾಶ್ರಯದಲ್ಲಿ ಧರಿನಾಡು ಕನ್ನಡ ಸಂಘದ ನಗರ ಸಮಿತಿ ಉದ್ಘಾಟನೆ ಹಾಗೂ ಬಹುಭಾಷಾ ಕವಿ ಸಮ್ಮೇಳನ ಜರುಗಿತು.

ಪ್ರಾರಂಭದಲ್ಲಿ ಜಿಲ್ಲೆಯ ಹಿರಿಯ ಹಾಗೂ ಮೊದಲ ಕಾದಂಬರಿಕಾರ ನಮ್ಮನಗಲಿದ ಸುಬ್ಬಣ್ಣ ಅಂಬಿಸಂಗೆ ಅವರ ಆತ್ಮಶಾಂತಿಗೆ ಎರಡು ನಿಮಿಷ ಮೌನಾಚರಣೆ ಆಚರಿಸಲಾಯಿತು.

ಜಾನಪದ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ಕನ್ನಡಾಂಬೆ ಭುವನೇಶ್ವರಿಗೆ ಮಾಲಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿ, ಇಂದಿನ ಯುವ ಕವಿಗಳು ಹಿರಿಯ ಕವಿಗಳ ಪುಸ್ತಕಗಳನ್ನು ಓದಿಕೊಂಡು ಅವರ ಸಾಹಿತ್ಯದ ಪ್ರಕಾರಗಳು, ಶೈಲಿಗಳು, ಶಬ್ದಗಳ ಬಳಕೆ ಹೇಗೆ ಮಾಡುತ್ತಾರೆಂದು ಅರ್ಥೈಸಿಕೊಳ್ಳಬೇಕು. ರನ್ನ, ಪಂಪ, ಕುವೆಂಪು, ದ. ರಾ. ಬೇಂದ್ರೆ ಮುಂತಾದ ಕವಿಗಳನ್ನು ಸ್ಮರಿಸಿದರು. ಸಾಹಿತ್ಯದಲ್ಲಿ ಜನಪರ, ಮಾನವೀಯತೆಗಳು ಇರಬೇಕು. ಆವಾಗ ಮಾತ್ರ ಸಾಹಿತ್ಯ ರಚಿಸಿದವರ ಹೆಸರು ಅಜರಾಮರವಾಗಿ ಉಳಿಯುತ್ತದೆ ಎಂದು ಹೇಳಿದರು.

ಜಗದೇವಿ ದುಬುಲಗುಂಡೆ ಮಾತನಾಡಿ, ಸ್ಥಳೀಯ ಸಾಹಿತಿಗಳನ್ನು ಗುರುತಿಸಿ ಅವರನ್ನು ವೇದಿಕೆ ಕಲ್ಪಿಸಿಕೊಡುವ ಕೆಲಸ ಆಗಬೇಕಿರುವುದು ಅವಶ್ಯಕವಾಗಿದೆ ಎಂದರು. ಶಾಂತಮ್ಮ ಬಲ್ಲೂರ್ ತಮ್ಮ ಸ್ವರಚಿತ ಚುಟುಕು ವಾಚನ ಮಾಡಿದರು.

ಇದೇ ಸಂದರ್ಭದಲ್ಲಿ ನೂತನ ನಗರ ಸಮಿತಿಯ ಅಧ್ಯಕ್ಷ ಬಾಬುರಾವ ಗಾದಗಿಯವರನ್ನು ಸನ್ಮಾನಿಸಲಾಯಿತು. ಕವಿಗಳಾದÀ ಸಾಧನಾ ರಂಜೋಳಕರ, ರಮೇಶ ಬಿರಾದಾರ, ಚನ್ನಮ್ಮ ವಲ್ಲೇಪುರೆ, ಡಾ. ನಿಜಲಿಂಗ ರಗಟೆ, ವೀರಶೆಟ್ಟಿ ಮೂಲಗೆ, ಸ್ವರ್ಣಮಾಲಾ ದಿಕ್ಷಿತ್, ಪ್ರೊ. ಮಂಗಲಾ ಪಾಟೀಲ, ಚನ್ನಬಸವ ನೌಬಾದೆ, ಓಂಕಾರ ಪಾಟೀಲ, ಪುಷ್ಪಾ ಜಿ. ಕನಕ, ಅವಿನಾಶ ಸೋನೆ, ದಿಲೀಪ ತರನಳ್ಳಿ, ಚೆನ್ನಪ್ಪ ಸಂಗೋಳಗೆ, ಪರಮ್ ಸಂಗ್ರಾಮ್ ಮುಂತಾದವರು ಕವನ ವಾಚನ ಮಾಡಿದರು.

ಧರಿನಾಡು ಕನ್ನಡ ಸಂಘದ ಕೇಂದ್ರ ಸಮಿತಿಯ ಅಧ್ಯಕ್ಷ ಚಂದ್ರಪ್ಪ ಹೆಬ್ಬಾಳಕರ ಅಧ್ಯಕ್ಷತೆ ವಹಿಸಿದ್ದರು.

ನಗರ ಸಮಿತಿಯ ಅಧ್ಯಕ್ಷರಾಗಿ ಬಾಬುರಾವ ಗಾದಗಿ, ಉಪಾಧ್ಯಕ್ಷರಾಗಿ ಡ್ಯಾನಿಯಲ್ ಮೇತ್ರೆ ಅಲಿಯಾಬಾದ, ಸಹ ಕಾರ್ಯದರ್ಶಿ ಶಿವಾನಂದ ಅಟ್ಟೂರ, ಸಂಚಾಲಕರಾಗಿ ಚೆನ್ನಬಸಪ್ಪ ನೌಬಾದೆ, ಅಂಬಿಕಾ ಸಿದ್ದೇಶ್ವರೆ, ನಿಜಲಿಂಗ ರಗಟೆ ಅವರನ್ನು ಆಯ್ಕೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ ಗಿಟ್ಟಿಸಿದ ಜಿಲ್ಲೆಯ ಹಿರಿಯ ಸಾಹಿತಿ ಹಂಶಕವಿ ಹಾಗೂ ಕರೋನಾ ವಾರಿಯರ್ಸ್‍ಗಳಾಗಿ ಸೇವೆ ಸಲ್ಲಿಸಿದ ಡಾ|| ಸ್ವಾತಿ ವಲ್ಲೇಪುರೆ ಅವರಿಗೆ ಸನ್ಮಾನಿಸಲಾಯಿತು.
ಕು.ಅಂಬಿಕಾ ಸಿದ್ಧೇಶ್ವರೆ ಪ್ರಾಥ್ರ್ನಿಸಿ, ಲು.ಸುರೇಖಾ ಚೊಂಡಿ ಸ್ವಾಗತ ಗೀತೆ ಹಾಡಿದರು. ನಿರ್ಹಂಕಾರ ಬಂಡಿ ಕಾರ್ಯಕ್ರಮ ನಿರೂಪಿಸಿ, ಶಿವಾನಂದ ಅಟ್ಟೂರ ವಂದಿಸಿದರು.