ಧರಾಮ ವಿಜ್ಞಾನ ಕಾಲೇಜಿನಿಂದ ಕಾಡಜ್ಜಿಯಲ್ಲಿ ಎನ್ ಎಸ್ ಎಸ್ ಶಿಬಿರ

ದಾವಣಗೆರೆ. ಜೂ.೧೦; ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ಸೇವೆಯ ಮೂಲಕ ಸಮಾಜದ ಅರಿವು ಮೂಡಲು ಸಾಧ್ಯ ಎಂದು ಬಾಪೂಜಿ ವಿದ್ಯಾಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ ಡಾ.ಎಂ.ಜಿ ಈಶ್ವರಪ್ಪ ಹೇಳಿದರು.ತಾಲ್ಲೂಕಿನ ಕಾಡಜ್ಜಿ ಗ್ರಾಮದಲ್ಲಿ ಧರಾಮ ವಿಜ್ಞಾನ ಕಾಲೇಜು ವತಿಯಿಂದ ಆಯೋಜಿಸಿರುವ ೨೦೨೨-೨೩ ನೇ ಸಾಲಿನ ಎನ್ ಎಸ್ ಎಸ್  ವಿಶೇಷ ಶಿಬಿರ ಉದ್ಘಾಟನೆ ನೆರವೇರಿಸಿ ಮಾತನಾಡಿ ರಾಷ್ಟ್ರೀಯ ಸೇವಾ ಯೋಜನೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವುದರಿಂದ ಸೇವೆಯ ಮೂಲಕ ಸಮಾಜದ ಅರಿವು ಹಾಗೂ ಸಾಮಾಜಿಕ ಪ್ರಜ್ಞೆ ಜಾಗೃತ ಗೊಂಡು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಆಶಯದಂತೆ ದೇಶದ ಒಳಿತಿಗಾಗಿ ಯಾವುದೇ ಫಲಾಪೇಕ್ಷೆ ಇಲ್ಲದೇ ಅರ್ಪಣಾ ಮನೋಭಾವದಿಂದ ಕಾರ್ಯೋನ್ಮುಖರಾಗಲು  ಶಿಬಿರ ಪ್ರೇರೇಪಿಸುತ್ತದೆ ಜೊತೆಗೆ ಗ್ರಾಮಗಳಲ್ಲಿ ಸಾಮರಸ್ಯದ ಕಲ್ಪನೆ ಶ್ರಮದಾನದ ಮಹತ್ವ ಹಾಗೂ ಸಮಾಜಮುಖಿಯಾಗಿ ಬದುಕುವ ಕಲೆ ರೂಢಿಸುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಧರಾಮ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ  ಡಾ.ಆರ್ ವನಜಾ ಮಾತನಾಡಿ ಇಂತಹ ವಿಶೇಷ ಶಿಬಿರದಲ್ಲಿ ಭಾಗಿಯಾಗುವುದರಿಂದ ವಿದ್ಯಾರ್ಥಿಗಳಿಗೆ ಶ್ರಮದಾನ ದ ಮಹತ್ವ ದ ಅರಿವು ಮೂಡಿಸಲು‌ಸಾಧ್ಯ ಹಾಗೂ ಸ್ವಾವಲಂಭನೆ ಬದುಕು ಕಲಿಸುತ್ತದೆ ಎಂದರು.ಮುಖ್ಯ ಅತಿಥಿಳಾಗಿ ಗ್ರಾ.ಪಂ ಅಧ್ಯಕ್ಷೆ ಗೀತಾ, ಮಾಜಿ ಸದಸ್ಯ ನಾಗರಾಜಯ್ಯ ಕಾಡಜ್ಜಿಯಲ್ಲಿ ಶ್ರಮದಾನಕ್ಕೆ ಸಹಕಾರ ನೀಡುವುದಾಗಿ ಇದೇ ವೇಳೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಡಜ್ಜಿ ಎನ್ ಎಸ್ ಎಸ್ ಶಿಬಿರದ ಕಾರ್ಯಕ್ರಮಾಧಿಕಾರಿ ಮಂಜುರಾಜ ಹಾಗೂ ಬೋಧಕ ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.