
ಸಂಜೆವಾಣಿ ವಾರ್ತೆ
ದಾವಣಗೆರೆ. ಸೆ.೯; 2023-24 ರಲ್ಲಿ ಪ್ರವೇಶ ದಾಖಲಾತಿ ಪಡೆದ ಪ್ರಥಮ ಬಿ.ಎಸ್ಸಿ., ವಿದ್ಯಾರ್ಥಿಗಳಿಗೆ “ಅಭಿವಿನ್ಯಾಸ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ವನಜಾ.ಆರ್. ಅವರು ಕಾಲೇಜಿನಲ್ಲಿರುವ ಮೂಲ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಸರ್ವತೋಮುಖ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಅಣಿಯಾಗಬೇಕೆಂದು ಕಿವಿ ಮಾತುಗಳನ್ನು ಹೇಳುವುದರ ಜೊತೆಗೆ ವಿದ್ಯಾರ್ಥಿಗಳ ಓದುವಿಕೆಗೆ ಪಾಲಕರು ಸಹ ಗಮನ ಹರಿಸಬೇಕೆಂದು ತಿಳಿ ಹೇಳಿದರು. ಐ.ಕ್ಯು.ಎ.ಸಿ. ಸಂಯೋಜಕರಾದ ಡಾ.ರೋಹಿತ್.ಎಲ್.ಎಸ್. ಕಾಲೇಜಿನ ಶೈಕ್ಷಣಿಕ ಮಾಹಿತಿಯನ್ನು ಸಮಗ್ರವಾಗಿ ತಿಳಿಪಡಿಸಿದರು. ನಂತರ ಎಲ್ಲಾ ವಿಭಾಗಗಳ ಮುಖ್ಯಸ್ಥರುಗಳು ತಮ್ಮ ವಿಭಾಗಗಳ ಬಗ್ಗೆ ಪರಿಚಯ ಮಾಡಿದರು ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ಕುರಿತು ಸಂಬಂಧಪಟ್ಟ ಸಂಚಾಲಕರು ಕಾಲೇಜಿನಲ್ಲಿ ನಡೆಯುವ ವಿವಿಧ ಚಟುವಟೆಕೆಗಳನ್ನು ಕುರಿತು ಸುದೀರ್ಘವಾಗಿ ತಿಳಿಸಿದರು. ಕಾರ್ಯಕ್ರಮಕ್ಕೆ ಪಾಲಕರುಗಳು, ಬೊಧಕ,ಬೋಧಕೇತರ ಸಿಬ್ಬಂದಿಯವರು ಹಾಗೂ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಡಾ.ಸೌಮ್ಯ.ಹೆಚ್.ಬಿ.ವಿ. ಇವರು ಕಾರ್ಯಕ್ರಮವನ್ನು ನಿರೂಪಿಸಿದರು. ಡಾ.ವಸಂತ ನಾಯ್ಕ್.ಟಿ.ವಂದಿಸಿದರು.