ಧರಣಿ ಎನ್.ಶೆಟ್ಟಿಗೆ 16 ಚಿನ್ನದ ಪದಕ

ಕೋಲಾರ,ಜು.೪:ಕೋಲಾರ ತಾಲೂಕಿನ ಸುಗಟೂರು ಗ್ರಾಮದ ಬಿಎಸ್ಸಿ ಪದವೀಧರೆ ಧರಣಿ ಎನ್.ಶೆಟ್ಟಿ ಅವರು ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ೧೬ ಚಿನ್ನದ ಪದಕಗಳನ್ನ ಪಡೆದು ಕೋಲಾರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ರಾಜ್ಯಪಾಲರಾದ ಥಾವರ್‌ಚಂದ್ ಗೆಹಲೋತ್ ಅವರು ಪದಕಗಳನ್ನ ಪ್ರದಾನ ಮಾಡಿದರು.
ತೋಟಗಾರಿಕೆ ಬಿಎಸ್‌ಸ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ಬಾಗಲಕೋಟೆಯ ತೋಟಗಾರಿಕೆ ವಿವಿಗೆ ಮೊದಲ ರ್‍ಯಾಂಕ್ ಪಡೆದ ಕೋಲಾರ ತಾಲೂಕಿನ ಸುಗಟೂರು ಗ್ರಾಮದಲ್ಲಿ ಚಿಕ್ಕದಾದ ಕಿರಾಣಿ ಅಂಗಡಿ ನಡೆಸುತ್ತಿರುವ ವರ್ತಕ ಟಿ.ಎನ್.ನಾಗೇಂದ್ರಶೆಟ್ಟಿ ಮತ್ತು ಸವಿತಾ ಎನ್.ಶೆಟ್ಟಿ ಅವರು ಹಿರಿಯ ಪುತ್ರಿ ಧರಣಿ ಎನ್.ಶೆಟ್ಟಿ ೧೬ ಚಿನ್ನದ ಪದಕಗಳನ್ನ ಗಳಿಸಿದ್ದಾರೆ.
ಧರಣಿ ಎನ್.ಶೆಟ್ಟಿ ಮೊದಲಿನಿಂದಲೂ ಓದು, ಆಟ,ಬರಹದಲ್ಲೂ ವಿಶೇಷ ವ್ಯಕ್ತಿತ್ವ ರೂಪಿಸಿಕೊಂಡಿದ್ದಾರೆ. ಕೋಲಾರದಲ್ಲಿ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಣ ಪಡೆದ ಪ್ರತಿಭಾವಂತೆ ಧರಣಿ ಎನ್.ಶೆಟ್ಟಿ. ಎಸ್‌ಎಸ್‌ಎಲ್‌ಸಿಯಲ್ಲಿ ಶೇ.೯೭, ದ್ವಿತೀಯ ಪಿಯುಸಿಯಲ್ಲಿ ಶೇ.೯೫ರಷ್ಟು ಅಂಕಗಳನ್ನು ಗಳಿಸಿದ್ದಾರೆ.
ಐಎಎಸ್ ಮಾಡುವಾಸೆ: ಮುಂದಿನ ದಿನಗಳಲ್ಲಿ ಸಾರ್ವಜನಿಕ ಸೇವೆ ಮಾಡುವ ಆಸೆಯೊಂದಿಗೆ ಬೆಂಗಳೂರಿನ ವಾಸವಿ ಕೋಚಿಂಗ್ ಸೆಂಟರ್‌ನಲ್ಲಿ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುವುದಾಗಿ ಹೇಳಿದ ಧರಣಿ ಎನ್.ಶೆಟ್ಟಿ ಅವರು ಈ ೧೬ ಚಿನ್ನದ ಪದಕಗಳನ್ನು ತಂದೆ-ತಾಯಿ ಹಾಗೂ ಸುಗಟೂರಿನ ಗ್ರಾಮಸ್ಥರಿಗೆ ಅರ್ಪಿಸುವೆ ಎಂದು ಹೇಳಿದ್ದಾರೆ.
ಧರಣಿ ಎನ್.ಶೆಟ್ಟಿ ತಂದೆ ಟಿ.ಎನ್. ನಾಗೇಂದ್ರಶೆಟ್ಟಿ ಮತ್ತು ತಾಯಿ ಸವಿತಾ ಎನ್.ಶೆಟ್ಟಿ ಅವರ ಮಗಳ ಸಾಧನೆಯನ್ನ ನೋಡಿ ಖುಷಿ ಪಟ್ಟಿದ್ದಾರೆ. ಮಗಳ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ಕೊರತೆಯಾಗದಂತೆ ನೋಡಿಕೊಂಡಿದ್ದೇವೆ. ಮೊದಲಿನಿಂದಲೂ ಓದಿನಲ್ಲಿ ಚುರುಕಾಗಿರುವ ಧರಣಿಗೆ ನಾವು ಯಾವುದೇ ಒತ್ತಡಗಳನ್ನ ಹಾಕಲಿಲ್ಲ. ಮುಂದಿನ ದಿನಗಳಲ್ಲಿ ಐಎಎಸ್ ಮಾಡುವ ಆಸೆಯನ್ನಿಟ್ಟುಕೊಂಡಿರುವುದರಿಂದ ಧರಣಿಗೆ ನಮ್ಮ ಕುಟುಂಬದವರು ಮತ್ತು ಸುಗಟೂರಿನ ಗ್ರಾಮಸ್ಥರು ಸಹಕಾರ ಇದ್ದೆ ಇರುತ್ತದೆ ಎಂದು ಹೇಳಿದರು.
ಕೋಲಾರ ತಾಲೂಕಿನ ಸುಗಟೂರು ಗ್ರಾಮದ ಬಿಎಸ್ಸಿ ಪದವೀಧರೆ ಧರಣಿ ಎನ್.ಶೆಟ್ಟಿ ಅವರು ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ೧೬ ಚಿನ್ನದ ಪದಕಗಳನ್ನ ಪಡೆದು ಸುದ್ದಿಯನ್ನ ನೋಡಿ ಸುಗಟೂರು ಗ್ರಾಮದ ಅವರ ಮನೆಗೆ ಬಂದ ಸಂಸದ ಎಸ್.ಮುನಿಸ್ವಾಮಿ ಅವರು ಧರಣಿ ಎನ್.ಶೆಟ್ಟಿ ಹಾಗೂ ಅವರ ತಂದೆ-ತಾಯಿಯನ್ನು ಗ್ರಾಮಸ್ಥರ ಸಮ್ಮುಖದಲ್ಲಿ ಸನ್ಮಾನಿಸಿದರು.
ಂಸದ ಎಸ್.ಮುನಿಸ್ವಾಮಿ ಮಾತನಾಡಿದ ಧರಣಿ ಎನ್.ಶೆಟ್ಟಿ ಅವರು ತೋಟಗಾರಿಕೆ ವಿವಿಯಲ್ಲಿ ೧೬ ಚಿನ್ನದ ಪದಕಗಳನ್ನ ಗಳಿಸಿರುವ ಮೂಲಕ ಇಡೀ ಕೋಲಾರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಅಲ್ಲದೆ ಕೋಲಾರ ಜಿಲ್ಲೆಯಲ್ಲಿ ಚಿನ್ನಕ್ಕೆ ಕೊರೆ ಇರಬಹುದು ಆದರೆ ಚಿನ್ನದಂತ ವಿದ್ಯಾರ್ಥಿಗಳಿದ್ದಾರೆ ಎಂದು ಹೇಳಿದರು.
ಕೋಲಾರ ಜಿಲ್ಲೆ ಮೊದಲಿನಿಂದಲೂ ಐಎಎಸ್-ಕೆಎಎಸ್ ಅಧಿಕಾರಿಗಳನ್ನ ಕೊಟ್ಟಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು
ಕೋಲಾರದ ಕೂಡ ಮಾಜಿ ಅಧ್ಯಕ್ಷ ವಿಜಯಕುಮಾರ್, ಕೋಲಾರ ನಗರಸಭೆ ಮಾಜಿ ಉಪಾಧ್ಯಕ್ಷ ಪ್ರವೀಣ್‌ಗೌಡ, ಅಪ್ಪಿ ನಾರಾಯಸ್ವಾಮಿ, ರಾಜೇಶ್‌ಸಿಂಗ್, ಸಂಪತ್, ಸಾಮಾ ಅನಿಲ್, ನಿವೃತ್ತ ನ್ಯಾಯಾಂಗ ಇಲಾಖೆಯ ನೌಕರ ಸುಗಟೂರಿನ ಬಿ.ಕೃಷಪ್ಪ, ಚಲಪತಿ, ಭೂಪತಿಗೌಡ, ಶ್ರೀಗಂಧರಾಜೇಶ್, ಗ್ರಾಮಸ್ಥರಾದ ಶಿಕ್ಷಕ ರಮೇಶ್, ವೆಂಕಟಾಚಲ, ಸಿರಾಜ್‌ಸಾಬ್, ಆರ್ಯವೈಶ್ಯ ಸಮುದಾಯ ಮಂಡಳಿಯವರು ಉಪಸ್ಥಿತರಿದ್ದರು.