ಧರಣಿಗೆ ಮಣಿದ ಚೆಸ್ಕಾಂ: ಚೆಕ್ ಹಸ್ತಾಂತರ

ಸಂಜೆವಾಣಿ ವಾರ್ತೆ
ತಿ.ನರಸೀಪುರ: ಸೆ.11:- ತುರ್ತು ಸೇವಾ ವಾಹನಗಳ ಬಾಡಿಗೆ ಬಾಕಿ ಉಳಿಕೊಂಡಿದ್ದ ಗುತ್ತಿಗೆ ಕಂಪೆನಿ ಅಂಜನಾದ್ರಿ ಏಜನ್ಸಿ ವಿರುದ್ಧ ದಲಿತ ಸಂಘರ್ಷ ಸಮಿತಿಯು ಧರಣಿ ನಡೆಸಿದ ಹಿನ್ನೆಲೆಯಲ್ಲಿ ಚೆಸ್ಕಾಂ ಅಧಿಕಾರಿಗಳು ಧರಣಿಗೆ ಮಣಿದು 1.86 ಲಕ್ಷ ರೂಗಳ ಮೊತ್ತದ ಚೆಕ್ ಅನ್ನು ಸಂತ್ರಸ್ತರಿಗೆ ಹಸ್ತಾಂತರಿಸಿದರು.
ಪಟ್ಟಣದ ಚೆಸ್ಕಾಂ ಕಚೇರಿ ಮುಂದೆ ಬಾಡಿಗೆ ಹಣ ಬಾಕಿ ಉಳಿಸಿಕೊಂಡಿದ್ದ ಅಂಜನಾದ್ರಿ ಟ್ರಾನ್ಸ್ ಪೆÇೀರ್ಟ್ ಸಲ್ಯೂಷಮ್ ವಿರುದ್ಧ ಕಳೆದ ಮೂರು ದಿನಗಳಿಂದ ನಡೆದ ಧರಣಿ ನಡೆದಿತ್ತು.ಇಂದು ಸ್ಥಳಕ್ಕೆ ಆಗಮಿಸಿದ ಚೆಸ್ಕಾಂ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸಂತ್ರಸ್ತ ಬಸವಣ್ಣ ಅವರಿಗೆ 1.86ರೂಗಳ ಚೆಕ್ ಅನ್ನು ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ವಿತರಿಸಿದರು.ಉಳಿಕೆಯ ಹಣವನ್ನು ದಾಖಲೆ ಪರಿಶೀಲಿಸಿ ಮುಂದಿನ ದಿನಗಳಲ್ಲಿ ಬಟಾವಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಇದೇ ವೇಳೆ ಮಾತನಾಡಿದ ಜಿಲ್ಲಾ ಸಂಚಾಲಕ ಡಾ. ಆಲಗೂಡು ಚಂದ್ರಶೇಖರ್,ಏಜನ್ಸಿ ಮಾಲೀಕರು ಮಾಧ್ಯಮಗಳ ಮುಂದೆ ದೂರುದಾರ ಬಸವಣ್ಣರ ಯಾವುದೇ ಬಾಕಿ ಹಣವನ್ನು ಏಜನ್ಸಿ ಉಳಿಸಿಕೊಂಡಿಲ್ಲ ಎಂದು ಹೇಳಿಕೆ ನೀಡಿದ್ದರು.ನಾವು ಹಣ ಬಟಾವಡೆ ಆಗದ ಬಗ್ಗೆ ಸಂಪೂರ್ಣ ದಾಖಲಾತಿ ಪಡೆದು ಪ್ರತಿಭಟನೆ ನಡೆಸಿದ್ದೆವು.ಹಾಗಾಗಿ ಧರಣಿಯನ್ನು 3 ದಿನಗಳ ಕಾಲ ಮುಂದುವರೆಸಿದೆವು. ಇಂದು ಚೆಸ್ಕಾಂ ಅಧಿಕಾರಿಗಳು ಮತ್ತು ಏಜನ್ಸಿ ಜೊತೆಗೂಡಿ 1.86 ರೂಗಳ ಚೆಕ್ ನೀಡಿದ್ದು,ಉಳಿಕೆ ಹಣವನ್ನು ಶೀಘ್ರದಲ್ಲಿ ಬಿಡುಗಡೆಗೊಳಿಸಬೇಕು. ಇಲ್ಲವಾದಲ್ಲಿ ಮತ್ತೆ ಪ್ರತಿಭಟನೆ ನಡೆಸಲಾಗುವುದು ಎಂದರು.
ಸಂದರ್ಭದಲ್ಲಿ ದಸಂಸ ತಾಲೂಕು ಸಂಚಾಲಕ ರಾಜು ಕೆಂಪಯ್ಯನಹುಂಡಿ,ವಿಭಾಗೀಯ ಸಂಚಾಲಕ ಕನ್ನಾಯಕನಹಳ್ಳಿ ಮರಿಸ್ವಾಮಿ,ಸಂಘಟನಾ ಸಂಚಾಲಕ ನೆರಗ್ಯಾತನಹಳ್ಳಿ ಮನೋಜ್,ಯದಡೋರೆ ಚಂದ್ರಪ್ಪ, ಚೌಹಳ್ಳಿ ಪರಶುರಾಮ್,ನಿಲಸೊಗೆ ಕುಮಾರ್, ಕೊಳತ್ತೂರು ಪ್ರಭಾಕರ್,ಮಾರನಪುರ ಕೇಶವಮೂರ್ತಿ,ಉಮೇಶ್ ಇತರರು ಹಾಜರಿದ್ದರು.