ಧಮ್ಮ ಚಕ್ರ ಪ್ರವರ್ತನ ದಿನಾಚರಣೆ ಸಂಪನ್ನ

ಬೀದರ, ಜು. 16 ಃ ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಲಹಳ್ಳಿ (ಕೆ) ಗ್ರಾಮದ ದೇವನಾಮ ಪ್ರೀಯ ಬುದ್ಧವಿಹಾರದಲ್ಲಿ ಭಾರತೀಯ ಬೌದ್ಧ ಧಮ್ಮ ಚಾರಿಟೇಬಲ್ ಟ್ರಸ್ಟ ವತಿಯಿಂದ 2532ನೇ ಧಮ್ಮ ಚಕ್ರ ಪ್ರವರ್ತನ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಳಯಿತು. ವಿಹಾರದ ಪೂಜ್ಯಭಂತೆ ಧಮ್ಮದೀಪ ರವರ ಸಾನಿಧ್ಯದಲ್ಲಿ ಪೂಜೆ ವಿಧಿವಿಧಾನಗಳು ನೆರವೇರಿದವು.

ಸಾನಿಧ್ಯವಹಿಸಿದ ಭಂತೆಯವರು ಚುರಾರ್ಯಸತ್ಯ ಮತ್ತು ಅಷ್ಟಾಂಗ ಮಾರ್ಗಗಳ ಕುರಿತು ಧಮ್ಮ ದೇಶನಾ ನೀಡಿದರು. ಕಾರ್ಯಕ್ರಮ ಅಧ್ಯಕ್ಷತೆಯು ಟ್ರಸ್ಟಿನ ಅಧ್ಯಕ್ಷರಾದ ಶಿವರಾಜ ಕುದರೆ ವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ಮಾತನಾಡಿದ ಸಾಹಿತಿ ಎಸ್.ಎಮ್. ಜನವಾಡಕರ್ ರವರು ಬೋಧಿಸತ್ವನ ಸುರ್ಧೀಘÀ ಪ್ರಯಣದ ಬಗ್ಗೆ ಮಾತನಾಡುತ ಹತ್ತು ಪಾರಮಿತ್ಯಗಳನ್ನು ಮೂರು ಹಂತದಲ್ಲಿ ಪೂರ್ಣಗೋಳಿ ದೀಪಾಂಕರ ಬುದ್ಧನಿಂದ ಆರ್ಶಿವಾದ ಹೊಂದಿ ನಂತರ ಆರು ವರ್ಷ ಉಗ್ರತಪಸ್ಸು ಮಾಡಿದರು ಜ್ಞಾನೋದಯ ಆಗದ ಕಾರಣ ವಿಪ್ಪಸನ ಮುಖಾಂತರ ವೈಶಾಖ ಶುದ್ಧ ಹುಣ್ಣಿಮೆಯೆಂದು ಜ್ಞಾನೋದಯ ಹೊಂದಿದನು ನಂತರ ಏಳು ಸಪ್ತಹಾಗಳವರೆಗೆ ಬೋದ್ಧಿವೃಕ್ಷಕ್ಕೆ ವಿವಿಧ ರೀತಿಯಲ್ಲಿ ಕೃತಜ್ಞೆತೆ ಸಲ್ಲಿಸುತ್ತ ಅಷ್ಠಾಂಗ ಮಾರ್ಗ ಮತ್ತು ಮಧ್ಯಮ ಮಾರ್ಗಗಳನ್ನು ರೂಪಿಸಿ ಅಲ್ಲಿಂದ ವಾರಣಾಸಿಯ ಹತ್ತಿರವಿರುವ ಸಾರನಾಥದಲ್ಲಿ ಆಷಾಡ ಹುಣ್ಣಿಮೆಯೆಂದು ಪಟಿಚ್ಚ ಸಮುಪ್ಪಾದ ಕುರಿತು ಪ್ರಥಮವಾಗಿ ಐದು ಜನ ಪ್ರವಾರ್ಜಕರಿಗೆ ಬೋಧನೆಮಾಡಿ, ಧಮ್ಮ ಚಕ್ರಕ್ಕೆ ಚಾಲನೆ ನೀಡಿದ ಈ ದಿನದ ಮಹತ್ವವಾಗಿದೆ ಎಂದರು.

ಭೀಮಶಾ ನಾಟೀಕರ ರವರು ಸ್ವಾಗತದೊಂದಿಗೆ ನಿರೂಪಿಸಿದರು. ವಿದ್ಯಾವತಿ ಕೆ. ರಾಮಬಾಣ ರವರು ವಂದಿಸಿದರು ಕಾರ್ಯಕ್ರಮದಲ್ಲಿ ಹಿರಿಯ ನಿರ್ದೇಶಕರಾದ ಕಾಶಿನಾಥರಾವ ಫುಲೆ ಕೆ.ಎಸ್.ಮಳ್ಳಿ ನೀಲಕಂಠರಾವ ಸಿಂಧೆ, ಕೆ.ಎಸ್.ರಾಮಬಾಣ, ಸುಭಾಷ ಬಿರಾದಾರ, ಮಾಣಿಕರಾವ ಜನವಾಡಕರ್ ಹಾಗೂ ಹಾಲಹಳ್ಳಿಯ ಇತರ ಉಪಾಸಕರು ಉಪಸ್ಥಿತರಿದ್ದರು.