ಧಮ್ಮಿದ್ದರೆ ಇಸ್ಲಾಂ, ಕ್ರೈಸ್ತರ ಬಗ್ಗೆ ಮಾತನಾಡಲಿ

ಯತ್ನಾಳ್ ಸವಾಲು
ರಾಯಚೂರು,ಸೆ.೮:ಸನಾತನ ಧರ್ಮದ ವಿರುದ್ಧ ಮಾತನಾಡುವವರು ಧಮ್ಮಿದ್ದರೆ ಇಸ್ಲಾಂ ಮತ್ತು ಕ್ರೈಸ್ತ ಧರ್ಮದ ಬಗ್ಗೆ ಮಾತನಾಡಲಿ ಎಂದು ವಿeಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದರು.
ರಾಯಚೂರು ನಗರದಲ್ಲಿ ಏರ್ಪಡಿಸಿರುವ ’ನನ್ನ ಮಣ್ಣು ನನ್ನ ದೇಶ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿ ಸನಾತನ ಧರ್ಮ ಕುರಿತಂತೆ ಮಾತನಾಡುವವರಿಗೆ ಕುಷ್ಠರೋಗ ಕಾಡುತ್ತಿದೆ. ಔರಂಗಜೇಬ್‌ನಂತಹ ಕ್ರೂರ ಮತಾಂಧ ರಾಜನಿಂದಲೂ ಭಾರತವನ್ನು ಇಸ್ಲಾಮಿಕರಣ ಮಾಡಲು ಸಾಧ್ಯವಾಗಲಿಲ್ಲ. ಸಾವಿರಾರು ವರ್ಷದ ಭಾರತದ ಇತಿಹಾಸದಲ್ಲಿ ಸಾಕಷ್ಟು ಜನ ದಾಳಿ ಮಾಡಿದ್ದರು. ಭಾರತದ ಧಾರ್ಮಿಕ ಸ್ಥಿತಿಗತಿಯನ್ನು ಬದಲಿಸಲು ಸಾಧ್ಯವಾಗಿಲ್ಲ ಎಂದ ಅವರು, ಹುಟ್ಟೇ ಗೊತ್ತಿಲ್ಲದ ಸಚಿವರೊಬ್ಬರು ಸನಾತನ ಧರ್ಮ ಹುಟ್ಟಿದ್ದು ಎಲ್ಲಿ?ಯಾವಾಗ? ಎನ್ನುತ್ತಾರೆ ಎಂದು ಪ್ರಶ್ನಿಸಿದ್ದಾರೆ ಎಂದು ಗೃಹಸಚಿವ ಪರಮೇಶ್ವರ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ರೈತರ ಆತ್ಮಹತ್ಯೆ ಬಗ್ಗೆ ಹಗುರವಾಗಿ ಕಾಂಗ್ರೆಸ್ ಸರ್ಕಾರ ಮಾತನಾಡುತ್ತಿದೆ. ೫ ಲಕ್ಷ ಕೊಟ್ಟಿದ್ದರಿಂದ ಆತ್ಮಹತ್ಯೆ ಹೆಚ್ಚಾಗಿದೆ ಎಂದು ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ನಾನು ಸಚಿವರಿಎ ೫ ಕೋಟಿ ಕೊಡುತ್ತೇನೆ. ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧರಿದ್ದೀರಾ. ಶ್ರೀಮಂತ ಸಚಿವ ಡಿ.ಕೆ ಶಿವಕುಮಾರ್ ರವರಿಗೆ ೨೫ ಕೋಟಿ ಕೊಡಲು ಸಿದ್ದನಿದ್ದೇನೆ. ಆತ್ಮಹತ್ಯೆ ಮಾಡಿಕೊಳ್ಳುತ್ತೀರಾ ಎಂದು ಅವರು ೧೩೫ ಸ್ಥಾನಗಳನ್ನು ಗೆದ್ದ ಮೇಲೆ ಕಾಂಗ್ರೆಸ್ ಅಹಂನಿಂದ ವರ್ತಿಸುತ್ತಿದೆ.
ಎಂತೆಂಥಾ ಮಹಾನ್ ನಾಯಕರು ದೇಶದಲ್ಲಿ ಆಡಳಿತ ನಡೆಸಿ ಹೋಗಿದ್ದಾರೆ. ಇಂದಿರಾಗಾಂಧಿಯಂತಹ ಸರ್ವಾಧಿಕಾರಿ ಸಹ ಆಡಳಿತ ನಡೆಸಿದ್ದಾರೆ. ಆದರು ಏನು ಮಾಡಲು ಸಾಧ್ಯವಾಗಿಲ್ಲ. ರೈತರ ಬದುಕು ಬದಲಾಗಿಲ್ಲ ಎಂದು ಅವರು ಹೇಳಿದರು.
ಗಣೇಶ ಕೂರಿಸೋಕೆ ಅನುಮತಿ ಯಾಕೆ?
ಭಾರತದಲ್ಲಿ ಬಹಣ ಹಿಂದಿನಿಂದಲೂ ಗಣೇಶ ಚತುರ್ಥಿ ಅಂಗವಾಗಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮೂಲಕ ಹಬ್ಬ ಆಚರಿಸಲಾಗುತ್ತಿದೆ. ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಯಾಕೆ ತೆಗೆದುಕೊಳ್ಳಬೇಕು? ನಾವೇನು ಪಾಕಿಸ್ತಾನದಲ್ಲಿದ್ದೀವಾ ಎಂದು ಪ್ರಶ್ನಿಸಿದ ಅವರು, ಇದರಿಂದ ಕೋಮು ಗಲಭೆಯಾಗುತ್ತದೆಯೇ? ಭಾರತದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದರೂ ಕ್ರಮಕೈಗೊಳ್ಳಲಾರದ ಸರ್ಕಾರ ಮತ್ತೇನನ್ನು ಮಾಡಲು ಸಾಧ್ಯ ಎಂದರು.
ಕಾಂಗ್ರೆಸ್ ಯಾವಾಗಲು ಹಿಂದೂ ವಿರೋಧಿ ಮನಃಸ್ಥಿತಿ ಹೊಂದಿದೆ. ನಾವು ವಿಜಯಪುರದಲ್ಲಿ ಡಿಜಿನೂ ಆಗ್ತೀವಿ, ಡ್ಯಾನ್ಸೂ ಮಾಡ್ತೀವಿ, ರಾಮಮಂದಿರದ ಹಾಡನ್ನು ಹಾಡ್ತೀವಿ, ಗಣೇಶ ಚತುರ್ಥಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅದು ನಮ್ಮ ಸಂಪ್ರದಾಯ, ಯಾರ ಅನುಮತಿಯೂ ಬೇಕಿಲ್ಲ. ನಮ್ಮ ಮೇಲೆ ಎಷ್ಟು ಪ್ರಕರಣ ದಾಖಲಿಸುತ್ತೀರೋ ಎಂದು ಸರ್ಕಾರಕ್ಕೆ ಸವಾಲು ಹಾಕಿದರು.