ಧಬೆ ಧಬೆ ನೋಡಲು ತೆರಳಿದ್ದ ವ್ಯಕ್ತಿ ಶವವಾಗಿ ಪತ್ತೆ

ಗುರುಮಠಕಲ್ : ಧಬೆ ಧಬೆ ಜಲಪಾತದಲ್ಲಿ ಈಜಲು ತೆರಳಿದ್ದ ವ್ಯಕ್ತಿ ಇಂದು ಶವವಾಗಿ ಪತ್ತೆಯಾಗಿದ್ದಾನೆ.

ಗುರುಮಠಕಲ್ ತಾಲೂಕಿನ ನಜರಾಪುರ ಸಮೀಪದ ಧಬೆ ಧಬೆ ಜಲಪಾತದಲ್ಲಿ ನಿನ್ನೆ ಈಜಲು ತೆರಳಿದ್ದ ವ್ಯಕ್ತಿ ಇಂದು ಶವವಾಗಿ ಪತ್ತೆಯಾಗಿದ್ದಾನೆ. ನಿನ್ನೆ ಮಧ್ಯಾಹ್ನ ನಜರಾಪುರ ಬಳಿಯ ಜಲಾಪಾತಕ್ಕೆ ರಾಜಸ್ಥಾನ ಮೂಲದ ಪ್ರವಾಸಿಗ ಬಾಯರಾಮ್ ವಯಸ್ಸು 23 ಯಾದಗಿರಿಗೆ ಸಂಬಂಧಿಕರ ಮನೆಗೆ ಆಗಮಿಸಿದ, ಸಂಬಂಧಿಕರ ಊರಾದ ಸೈದಾಪುರದಿಂದ ನಿನ್ನೆ ಜಲಪಾತ ನೋಡಲು ಸಂಬಂಧಿಕರ ಜೊತೆ ಈಜಲು ತೆರಳಿದ್ದ.

ಭಾಯ್ ರಾಮ್ ಸಂಬಂಧಿಕರು ಸೈದಾಪುರ ಪಟ್ಟಣದಲ್ಲಿ ದಿನಸಿ ಅಂಗಡಿ ಹೊಂದಿದ್ದಾರೆ. ಸಂಬಂಧಿಕರೊಂದಿಗೆ ಸೇರಿ ಜಲಪಾದ ನೋಡಲು ಬಂದಿದ್ದ ವ್ಯಕ್ತಿ, ನೀರಿನಲ್ಲಿ ಇಳಿದಿದ್ದ. ಆಳ ನೀರಿನಲ್ಲಿ ಸುಳಿಯಲ್ಲಿ ಸಿಲುಕಿ ನಾಪತ್ತೆಯಾಗಿದ್ದ ಬಗ್ಗೆ ಪ್ರತ್ಯಕ್ಷ ದರ್ಶಿ ಹೇಳಿದ್ರು. ಅಗ್ನಿ ಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಭೇಡಿ ನೀಡಿದ್ದರಾದ್ರೂ, ನೀರಿನ ಹರಿವು ಹೆಚ್ಚಿದ್ದ ಕಾರಣ ರಕ್ಷಣಾ ಕಾರ್ಯ ಸಾಧ್ಯವಾಗಿರಲಿಲ್ಲ. ಆದ್ರೆ, ಬೆಳಗ್ಗೆ ಸ್ಥಳಕ್ಕೆ ಹೋಗಿದ್ದ ಸ್ಥಳೀಯರ ಕಣ್ಣಿಗೆ ಭಾಯ್ ರಾಮ್ ಶವ ಕಾಣಿಸಿಕೊಂಡಿದೆ.. ಕೂಡ್ಲೆ ವಿಷ್ಯ ತಿಳಿದು ಸ್ಥಳಕ್ಕೆ ಧಾವಿಸಿದ ಪಿ ಎಸ್ ಐ ಹಣಮಂತು ಬಂಕಳಗಿ ಮತ್ತು ಪೆÇಲೀಸರು ಸಿಬ್ಬಂದಿ ಸ್ಥಳೀಯರ ಸಹಾಯದಿಂದ ಶವ ಹೊರತೆಗೆದಿದ್ದಾರೆ. ನಂತ್ರ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.

ಗುರುಮಠಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.