ಧನುರ್ಮಾಸ : ಸಾಧಕರಿಗೊಂದು ಪುಣ್ಯಕಾಲ

ಸತ್ತೂರು,ಜ1: ಸೂರ್ಯನು ಧನು ರಾಶಿಯನ್ನು ಪ್ರವೇಶಿಸಿದ ದಿನದಿಂದ ಮಕರ ರಾಶಿಯವರಿಗೆ ಬರುವ ಒಂದು ತಿಂಗಳ ಕಾಲಕ್ಕೆ ಧನುರ್ಮಾಸ ಎಂದು ಕರೆಯುತ್ತಾರೆ. ಧನುರ್ಮಾಸ ದೇವತೆಗಳಿಗೆ ಅರುಣೋದಯ ಕಾಲ, ಬ್ರಾಹ್ಮಿ ಮುಹೂರ್ತದಲ್ಲಿ, ದೇವಾನುದೇವತೆಗಳು, ಋಷಿಮುನಿಗಳು, ಶ್ರೀಮನ್ನಾರಾಯಣನನ್ನು ಪ್ರಾರ್ಥಿಸುವ ಪುಣ್ಯಕಾಲ. ಸೂರ್ಯೋದಯದ ಒಳಗೆ ಎಷ್ಟೇ ಚಳಿ ಇದ್ದರು ಸಹ, ದೇಹವನ್ನು ದಂಡಿಸಿ, ಪರಮಾತ್ಮನ ಪೂಜಾ, ಕೈಂಕಯ9ಗಳನ್ನು ನೆರವೇರಿಸಲು, ವಿಶೇಷವಾಗಿ ಹುಗ್ಗಿಯನ್ನು ಶ್ರೀಹರಿಗೆ ಸಮರ್ಪಿಸಿ, ಬ್ರಾಹ್ಮಣ ಸುಹಾಸಿನಿಯರಿಗೆ ಸಂತರ್ಪಣೆ ಮಾಡುವುದರಿಂದ ವಿಶೇಷವಾದ ಅನಂತ ಫಲಗಳು ಲಭಿಸುತ್ತದೆ ಎಂದು ಧನುರ್ಮಾಸದ ಬಗ್ಗೆ ಪುರಾಣಗಳು ಕೊಂಡಾಡಿವೆ ಎಂದು ಹಲಗಣೇಶ ಸಂಸ್ಕೃತ ಪಾಠಶಾಲೆಯ ಪ್ರಾಚಾರ್ಯರಾದ ವಿದ್ವಾನ ಶ್ರೀಧರಾಚಾರ್ಯ ತಿಳಿಸಿದರು.

ಸತ್ತೂರಿನ ನಾರಾಯಣ ಪಾರಾಯಣ ಬಳಗದ ಆಶ್ರಯದಲ್ಲಿ, ವನಸಿರಿ ನಗರದಲ್ಲಿರುವ, ಸತ್ಯಜಿತ ಮನೋಳಿ ಇವರ ನಿವಾಸದಲ್ಲಿ ನಡೆದ ಧನುರ್ಮಾಸ ಕುರಿತು ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡುತ್ತಾ, ಭಗವಂತನ ನಾಮಸ್ಮರಣೆಯನ್ನು ಮಾಡಲೇಬೇಕು. ಶ್ರೀಹರಿಯ ನಾಮಸ್ಮರಣೆಯು ಎಲ್ಲ ವಿಧವಾದ ಪಾಪಗಳನ್ನು ಪರಿಹಾರ ಮಾಡುವ ಸಾಮರ್ಥ್ಯ ಹೊಂದಿದೆ. ಪೂಜೆ ಎಂದರೆ ಕೇವಲ ಭಗವಂತನ ಪ್ರತಿಮೆಯನ್ನು ಪೂಜಿಸುವುದು ಮಾತ್ರವಲ್ಲದೇ ನಾವುಗಳು ಪ್ರಾತಃ ಕಾಲದಿಂದ ರಾತ್ರಿಯ ತನಕ ಮಾಡುವ ಪ್ರತಿಯೊಂದು ಕರ್ಮವು ದೇವರ ಪೂಜೆ. ಪ್ರತಿಯೊಂದು ಜೀವಿಯಲ್ಲಿಯೂ, ವಸ್ತುವಿನಲ್ಲಿಯೂ, ವಿಶೇಷವಾಗಿ ಪ್ರಾಣಿಗಳಲ್ಲಿಯೂ ದಯೆಯನ್ನು ತೋರುವದೇ ದೊಡ್ಡ ಪೂಜೆಯಾಗಿದೆ. ಇಂತಹ ಪೂಜೆಯಿಂದ ಭಗವಂತ ಪ್ರಸನ್ನವಾಗುವದರಿಂದ ನಮಗೆ ಯಾವುದೇ ದುರ್ಲಭವಿಲ್ಲ. ಆದ್ದರಿಂದ ಇಂತಹ ಮಾನಸಿಕ ಪೂಜೆಯನ್ನು ನಾವೆಲ್ಲರೂ ಮಾಡಲೇಬೇಕು ಎಂದು ವಿವರಿಸಿದರು.
ಪ್ರವಚನ ನಂತರ ಬಳಗದ ಸದಸ್ಯರಿಂದ ಶ್ರೀ ವಿಷ್ಣು ಸಹಸ್ರನಾಮ, ಶ್ರೀರಾಮ ಸ್ತೋತ್ರ, ವೆಂಕಟೇಶ್ ಸ್ತೋತ್ರ, ಶ್ರೀ ಸೂಕ್ತ, ರಾಘವೇಂದ್ರ ಸ್ತೋತ್ರಗಳ ಪಾರಾಯಣ ನಡೆಯಿತು.
ತಾರತಮ್ಯ ಭಜನೆ, ಲಕ್ಷ್ಮಿ ಶೋಭಾನ ನಡೆಯಿತು. ಕಾರ್ಯಕ್ರಮದಲ್ಲಿ ರಘೋತ್ತಮ ಅವಧಾನಿ, ಕೃಷ್ಣ ಹುನಗುಂದ, ಡಿ.ಕೆ. ಜೋಶಿ, ವಾದರಾಜಾಚಾರ್ಯ, ಬದರಿನಾಥ ಬೆಟಿಗೇರಿ , ಪ್ರಕಾಶ ದೇಸಾಯಿ, ಹನುಮಂತ ಬಿಜಾಪುರ, ಎಸ್ ಎಂ ಜೋಶಿ, ಪೆÇ್ರ .ವಾಮನ ಬಾದ್ರಿ, ಗಿರೀಶ ಪಾಟೀಲ, ಬಹದ್ದೂರ ದೇಸಾಯಿ, ಆನಂದ ದೇಶಪಾಂಡೆ, ಸಿ.ಕೆ. ಕುಲಕರ್ಣಿ ಇದ್ದರು.