ಧನುರ್ಮಾಸದ ಪ್ರಯುಕ್ತ ಮಹಿಳೆಯರಿಂದ ಭಜನೆ

ಸಂಜೆವಾಣಿ ವಾರ್ತೆ

ಹಿರಿಯೂರು : ಜ.2-ಹಿರಿಯೂರಿನ ಶ್ರೀ ಕಾಳಿಕಾಂಬ ದೇವಾಲಯದಲ್ಲಿ ಧನುರ್ಮಾಸದ ಅಂಗವಾಗಿ ಮಂಗಳವಾರ ಬೆಳಿಗ್ಗೆ  ದೇವಾಲಯದ ಪ್ರಧಾನ ಅರ್ಚಕರಾದ ನಾಗರಾಜಚಾರ್ಯ ಇವರ ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅರ್ಚಕರಾದ ನವೀನ್ ಆಚಾರ್ಯ ಬಸವರಾಜ್ ಆಚಾರ್ಯ ಪಾಲ್ಗೊಂಡು  ಲೋಕಕಲ್ಯಾಣಾರ್ಥವಾಗಿ ವಿಶೇಷ ಪೂಜಾ ಕಾರ್ಯಕ್ರಮ ನೆರವೇರಿಸಿದರು. ನಂತರ ಶ್ರೀಮತಿ ಗೀತಾ ರಾಧಾಕೃಷ್ಣ ಇವರ ನೇತೃತ್ವದಲ್ಲಿ ಶ್ರೀಹರಿ ವಾಸವಿ ಭಜನಾ ಮಂಡಳಿ ವತಿಯಿಂದ ದೇವರ ಭಜನೆ ಕಾರ್ಯಕ್ರಮ ನಡೆಸಿದರು. ತಂಡದಲ್ಲಿ ಮಮತಾ ಶ್ರೀನಿವಾಸ್, ನಿರ್ಮಲ ಗೋವಿಂದರಾಜ್, ಲಕ್ಷ್ಮಿ ವಿಜಯ್, ಲತಾ ಸತ್ಯನಾರಾಯಣ್,ಜಯಶ್ರೀ ಲಕ್ಷ್ಮಿಪತಿ, ರೇಣುಕಾ  ಮಂಜುನಾಥ್ ವೇದ ವೆಂಕಟಾಚಲ  ಪಾಲ್ಗೊಂಡಿದ್ದರು