ವಿಜಯಪುರ ಸೆ.25: ಶಾಂತಿ ಸಹಬಾಳ್ವೆ ಸಾಂಘಿಕ ಜೀವನಕ್ಕೆ ಹಾಗೂ ಸಂತೃಪ್ತ ಬದುಕಿಗೆ ಕ್ರೀಡೆ ಹಾಗೂ ಸಾಂಸ್ಕøತಿಕ ಚಟುವಟಿಕೆಗಳು ಸಹಕಾರಿಯಾಗುತ್ತವೆ ಎಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳಾದ ರಾಜಶೇಖರ ಧೈವಾಡಿ ಹೇಳಿದರು.
ಜಿಲ್ಲಾಡಳಿತ ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ನಿವೃತ್ತ ನೌಕರರ ಸಂಘ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಶನಿವಾರ ನಗರದ || ಬಿ.ಆರ್.ಅಂಬೇಡ್ಕರ ಒಳಾಂಗಣ ಕ್ರೀಡಾಂಗಣದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ನಿಮಿತ್ಯ “ಬದಲಾಗುತ್ತಿರುವ ಜಗತ್ತಿನಲ್ಲಿ ಹಿರಿಯ ನಾಗರಿಕರ ಸ್ಥಿತಿಸ್ಥಾಪಕತ್ವ ಎಂಬ ಘೋಷವಾಕ್ಯದೊಂದಿಗೆ” ಹಮ್ಮಿಕೊಂಡ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಿರಿಯರು ಹಿರಿಯರನ್ನು ಗೌರವಪೂರ್ವಕವಾಗಿ ಹಾಗೂ ಹಿರಿಯರು ಕಿರಿಯರನ್ನು ಪ್ರೀತಿಯಿಂದ ಕಾಣಬೇಕು ಪ್ರಸ್ತುತ ಯುವ ಜನಾಂಗ ಹಿರಿಯರ ರೀತಿ ನೀತಿಗಳನ್ನು ಅನುಸರಿಸಿ ನಡೆಯುಲು ಸಂಸ್ಕøತಿ ಸಂಸ್ಕಾರಗಳನ್ನು ತಿಳಿಸುವ ಜವಾಬ್ದಾರಿ ಹಿರಿಯರ ಮೇಲಿದೆ ಎಂದು ಹೇಳಿದರು.
ಯುವಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಎಸ್.ಜಿ.ಲೋಣಿ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ನಿವೃತ್ತ ನೌಕರರ ಸಂಘದ ಅಧ್ಯಕ್ಷರಾದ ಎಸ್.ಪಿ.ಬಿರಾದಾರ (ಕಡ್ಲೇವಾಡ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ 5 ತಾಲೂಕಿನ ಎಂ.ಆರ್.ಡಬ್ಲೂ ಗಳಾದ ರವಿ ರಾಠೋಡ, ಮುತ್ತುರಾಜ ಸಾತಿಹಾಳ, ಎಸ್.ಕೆ.ಘಾಟಿ, ಪರಸುರಾಮ ಬೋಸಲೆ ಹಾಗೂ ಕು. ಶಿವಲೀಲಾ ಬಿರಾದಾರ ಇವರು ಭಾಗವಹಿಸಿದ್ದರು. ಜಿಲ್ಲೆಯ ನಿವೃತ್ತ ಹಿರಿಯ ಜೀವಿಗಳು, ವೃದ್ದರು ಹಾಗೂ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿಗಳು ಸೇರಿ ಒಟ್ಟು 200 ಜನ ಭಾಗವಹಿಸಿದ್ದರು.