ಧನರಾಜ ಮುಸ್ತಾಪುರೆಗೆ ಕಾಯಕ ರತ್ನ ಪ್ರಶಸ್ತಿ

ಸಂಜೆವಾಣಿ ವಾರ್ತೆ
ಔರಾದ್ :ನ.30: ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ, ಸಮಾಜ ಸೇವಕ ಧನರಾಜ ಮುಸ್ತಾಪುರ ಅವರಿಗೆ ರಾಜ್ಯ ಮಟ್ಟದ ಕಲ್ಯಾಣ ಕರ್ನಾಟಕ ಕಾಯಕ ರತ್ನ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗಿದೆ.
ವಿಶ್ವ ಕನ್ನಡಿಗರ ಸಂಸ್ಥೆ ಆಶ್ರಯದಲ್ಲಿ ಬೀದರನ ಡಾ. ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಸೋಮವಾರ ನಡೆದ ಕಲ್ಯಾಣ ಕರ್ನಾಟಕ ಅಮೃತ ಮಹೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಳೆದ ಅನೇಕ ದಶಕಗಳಿಂದ ಗಡಿ ಭಾಗದ ಅಭಿವೃದ್ಧಿಗಾಗಿ ಅನೇಕ ಹೋರಾಟ ಮಾಡಿದ ಕೀರ್ತಿ ಇವರಿಗಿದೆ. ಧನರಾಜ ಮುಸ್ತಾಪುರ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದು, ಶರಣಬಸಪ್ಪ ಕಾರಾಮುಂಗೆ, ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಸತೀಶ ವಗ್ಗೆ, ರಾಜಕುಮಾರ ಬಿರಾದಾರ, ಏವನಕುಮಾರ, ಸುಧಾಕರ್, ರತಿಕಾಂತ ಬಿರಾದಾರ, ಶಿವಕಾಂತ ಮುಚಳಂಬೆ, ಸಂತೋಷ, ಸಂಜುಕುಮಾರ ಕಾಳಕರ, ಬಸವರಾಜ ಲಾಧಾ, ಕಲಪ್ಪ ಮುಸ್ತಾಪುರ ಸೇರಿದಂತೆ ಮುಸ್ತಾಪೂರ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.