ಧಣಿವರಿಯದ ನಾಯಕ ಶ್ರೀರಾಮುಲು ಮಸ್ಕಿ ಮುಗಿಸಿ ಮಹಾನಗರ ಪಾಲಿಕೆಗೆ ಧುಮಿಕಿದರು

ಬಳ್ಳಾರಿ ಏ 16 : ಚುನಾವಣೆಗಳು ಬಂತೆಂದರೆ ಅದು ರಾಜ್ಯದ, ದೇಶದ, ಸ್ಥಳೀಯ ಯಾವುದೇ ಚುನಾವಣೆಗಳು ಇರಲಿ ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹಗಲು ರಾತ್ರಿ ಎನ್ನದೆ ಪ್ರಯಾನ ಮಾಡಿ ಪಕ್ಷದ ಅಭ್ಯರ್ಥಿಗಳ ಪ್ರಚಾರ ಸಭೆ, ಸಮಾರಂಭ, ಱ್ಯಾಲಿಗಳಲ್ಲಿ ಪಾಲ್ಗೊಳ್ಳುತ್ತಾರೆ.
ಇದೀಗ ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಅಭ್ಯರ್ಥಿಗಳೊಂದಿಗೆ ನಿನ್ನೆ ಪ್ರಚಾರ ಕಾರ್ಯ ಮುಗಿಸಿದ ಶ್ರೀರಾಮುಲು ಅವರು ಇಂದು ಬೆಳಿಗ್ಗೆಯಿಂದಲೇ ಇಲ್ಲಿನ ಮಹಾನಗರ ಪಾಲಿಕೆಯ ಚುನಾವಣೆಯ ಅಭ್ಯರ್ಥಿಗಳ ಪ್ರಚಾಋ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.
ಕೋವಿಡ್‍ನ ಎರಡನೇ ಅಲೆ ಹೆಚ್ಚುತ್ತಿದ್ದರೂ, ಮಾಸ್ಕನ್ನು ಎಡಬಿಡದೆ ಧರಿಸಿ, ಆದಷ್ಟು ಜನರಿಂದ ಅಂತರ ಕಾಯ್ದುಕೊಳ್ಳುತ್ತಲೇ ಪ್ರಚಾರ ಕಾರ್ಯ ನಡೆಸುತ್ತಿದ್ದು. ಇಂದು 15 ವಾರ್ಡು ವಡ್ಡರಬಂಡೆ, ಸಿಂದಗಿ ಕಾಮಪೌಂಡ್ ಮೊದಲಾದಡೆ, 19 ನೇ ವಾರ್ಡು ಸತ್ಯನಾರಾಯಣಪೇಟೆ, ಕೊಟ್ಟಾಲಪಲ್ಲಿ, ಪೊಲೀಸ್ ಲೈನ್ ಮೊದಲಾದೆಡೆ ಅಭ್ಯರ್ಥಿಗಳಾದ ಕವಿತಾ ನಾಗಭೂಷಣ, ಮತ್ತು ಕೆ.ಎಸ್. ಅಶೋಕ್ ಕುಮಾರ ಪರ ಪ್ರಚಾರ ಕಾರ್ಯ ನಡೆಸಿದರು.
ಈ ವಾರ್ಡುಗಳಲ್ಲಿನ ಓಣಿ ಓಣಿಗಳಲ್ಲಿ ಸಂಚರಿಸಿ, ಅಭ್ಯರ್ಥಿಗಳಿಗೆ ಮತ ಹಾಕುವಂತೆ ಕರ ಪತ್ರನೀಡಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು. ಈ ಹಿಂದೆ ಎರೆಡು ಅವಧಿಯಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ನಗರದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿತ್ತು, ರಸ್ತೆಗಳ ಅಗಲೀಕರಣ, ಕುಡಿಯುವ ನೀರಿನ ಕೆರೆಗಳ ಸಮಾಥ್ರ್ಯ ಹೆಚ್ಚಿಸಿದ್ದು, ಬೀದಿ ದೀಪಗಳ ಅಳವಡಿಕೆ, ಉದ್ಯಾನವನಗಳ ನಿರ್ಮಾಣ ಮೊದಲಾದವುಗಳ ಅಭಿವೃದ್ದಿ ಮಾಡಿತ್ತು. ಆದರೆ ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ಕೇವಲ ಕಾಲಹರಣ ಮಾಡಿತೇ ಹೊರತು ಜನರ ಅಭಿವೃದ್ದಿ ಮರೆಯಿತು. ಅದಕ್ಕಾಗಿ ಮತದಾದರರಾದ ನೀವು ಆ ಪಕ್ಷದ ಅಭ್ಯರ್ಥಿಗಳನ್ನು ಮರೆತು ಬಿಡಿ ಎಂದು. ಈ ಬಾರಿ ಮತ್ತೆ ಬಿಜೆಪಿ ಪಾಲಿಕೆಯಲ್ಲಿ ಅಧಿಕಾರಕ್ಕೆ ಬರಲಿದ್ದು ನಗರದ ಸರ್ವಾಣಗೀಣ ಅಭಿವೃದ್ದಿಗೆ ಶ್ರಮಿಶುವುದಾಗಿ ಭರವಸೆ ನೀಡಿದರು.
ಪ್ರಚಾರಕ್ಕೆ ಬಂದ ಅವರನ್ನು ವಾರ್ಡುಗಳಲ್ಲಿ ಜನತೆ ಪಟಾಕಿ ಸಿಡಿಸಿ ಸ್ವಾಗತಿಸಿದರು. ಹಲವರು ತಾವು ಎದಿರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತಂದರು. ಚುನಾವಣೇ ನಂತರ ಅಧಿಕಾರಿಗಳ ಜೊತೆ ಚರ್ಚಿಸಿ ಬಗೆಹರಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ…..ಇದ್ದರು.