ಧಂಗಾಪೂರದಲ್ಲಿ ಫಲಾನುಭವಿಗಳ ಮನೆ ಬಾಗಿಲಿಗೆ ಪಿಂಚಣಿ ಆದೇಶ ಪತ್ರ

ಆಳಂದ:ನ.15:ಸರಕಾರದ ವಿವಿಧ ಯೋಜನೆ ಪಿಂಚಣಿ ಫಲಾನುಭವಿಗಳ ಆದೇಶ ಪತ್ರವನ್ನು ಇಂದಿರಾ ಸ್ಮಾರಕ ಶಿಕ್ಷಣ ಸೇವಾ ಸಂಸ್ಥೆ ಮಂಜೂರಾತಿ ಮಾಡಿಸಿ ಉಚಿತವಾಗಿ ನೀಡಲಾಗುತ್ತಿದೆ ಎಂದು ಸಂಸ್ಥೆಯ ಅಧ್ಯಕ್ಷ ಶಿವಲಿಂಗ ಎಸ್. ತೇಲ್ಕರ್ ಅವರು ತಿಳಿಸಿದ್ದಾರೆ.

ಭಾನುವಾರ ಧಂಗಾಪುರ ಗ್ರಾಮದಲ್ಲಿ ಸಂಸ್ಥೆಯ ವತಿಯಿಂದ ಉಚಿತವಾಗಿ ಸೇವೆ ಸಲ್ಲಿಸುತ್ತಾ ಮಂಜೂರಾತಿ ಮಾಡಿಸಿದ ವಿಧವಾ ವೇತನ ಪಿಂಚಣಿ ಆದೇಶ ಪತ್ರವನ್ನು ಫಲಾನುಭವಿ ಶಾಂತಾಬಾಯಿ ಚಿಂಚೋಳಿ ಅವರಿಗೆ ವಿತರಿಸಿ ವಿಧವಾ, ವಿಕಚೇತನ, ಸಂಧ್ಯಾ ಸುರಕ್ಷಾ, ವೃದ್ಧಾಪ್ಪ, ಸೇರಿದಂತೆ ವಿವಿಧ ಪಿಂಚಣಿಗಳು ಸಂಸ್ಥೆಯ ಪರವಾಗಿ ತಹಶೀಲ ಕಚೇರಿಗೆ ಸಲ್ಲಿಸಿ ಮಂಜೂರಾತಿ ಪಡೆದು ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ. ಉದ್ದೇಶ ಇಷ್ಟೇ ಗ್ರಾಮೀಣ ಭಾಗದಲ್ಲಿ ಬಡವರು, ಕಡು ಬಡವರು, ನಿರ್ಗತಿಕರು, ದಲಿತರಿಗೆ ತಹಶೀಲ್ದಾರ , ನಾಡಕಚೇರಿಗಳಲ್ಲಿ ದಲ್ಲಾಳಿಗಳ ಹಾವಳಿ ಹೆಚ್ಚಾಗಿದ್ದು. ಬಡ ಜನರಿಂದ ವಿನಾಕಾರಣ ಹಣ ಸೂಲಿಗೆ ಮಾಡುತ್ತಿದ್ದಾರೆ. ಇದನ್ನು ತಡೆ ಗಟ್ಟುವ ಉದ್ದೇಶದಿಂದ ನಮ್ಮ ಸಂಸ್ಥೆಯಿಂದ ಆದೇಶ ಪತ್ರಗಳನ್ನು ಮಂಜೂರಾತಿ ಮಾಡಿಸಿ ಅವರಿಗೆ ತಲುಪಿಸಲಾಗುತ್ತಿದೆ. ಫಲಾನುಭಗಳು ವಿವಿಧ ಯೋಜನೆ ಪಿಂಚಣಿಗಾಗಿ ದಾಖಲಾತಿಗಳು ದಲ್ಲಾಳಿಗಳ ಕೈಯಲ್ಲಿ ಕೊಡದೇ ನಮ್ಮ ಸಂಸ್ಥೆಯಲ್ಲಿ ಹೆಸರು ನೋಂದಾಯಿಸಿದರೆ, ಯಾವುದೇ ಹಣದ ಖರ್ಚು ಇಲ್ಲದೇ ಪಿಂಚಣಿ ಆದೇಶ ಪತ್ರಗಳು ಕೊಡಿಸಲಾಗುವುದು ಎಂದು ಹೇಳಿದರು. ಸಂಸ್ಥೆಯ ಸಂಘಟನಾ ಕಾರ್ಯದರ್ಶಿ ಅರುಣಕುಮಾರ ತಳಕೇರಿ, ಗ್ರಾಮದ ಮುಖಂಡರಾದ ರಾಜಶೇಖರ ಶೇಗಜಿ, ಈರಣ್ಣಾ ಜವಳಿ , ಶಿವರೆಡ್ಡಿ ನಾಟೀಕರ, ಗ್ರಾಮ ಸೇವಕ ಸೂರ್ಯಕಾಂತ ತಳವಾರ ಉಪಸ್ಥಿತರಿದ್ದರು.