ಧಂಗಾಪುರದಲ್ಲಿ ಡಾ. ಸಿದ್ರಾಮಪ್ಪ ಮಾಲಿಪಾಟೀಲರವರಿಗೆ ಗ್ರಾಮಸ್ಥರಿಂದ ಸನ್ಮಾನ

ಆಳಂದ:ನ.3:ಕೃಷಿ ಸಂಶೋಧನೆಗಳು ವೈಜ್ಞಾನಿಕ ಉಪಕರಣ ಕೃಷಿ ಭಾಗ್ಯ ನಿಗಮದಿಂದ ರೈತರಿಗೆ ಕೊಡುವ ಸಹಾಯ ಧನ ಕಾರ್ಖಾನೆಗಳಲ್ಲಿ ಉತ್ಪತಿಯಾಗುವ ಮಾಲಕರ ಪಾಲಾಗುತ್ತಿದೆ ಕೃಷಿ ವಿಶ್ವವಿದ್ಯಾಲಗಳಲ್ಲಿ ಸಂಗ್ರಹಿಸಿ ಇಡಲಾದ ಡ್ರೋಣ ಯಂತ್ರಗಳು ರೈತರಿಗೆ ಕೊಡಿ ಎಂದು ಖಜೂರಿ ಶ್ರೀ ಮುರುಘೇಂದ್ರ ಕೋರಣೇಶ್ವರ ವiಹಾ ಸ್ವಾಮಿಜೀ ಅವರು ಒತ್ತಾಯಿಸಿದ್ದಾರೆ.

ಧಂಗಾಪುರ ಗ್ರಾಮದ ಶ್ರೀ ಶರಣಬಸವೇಶ್ವರ ದೇವಾಲಯದ ಆವರಣಭದಲ್ಲಿ 65ನೇ ಕನ್ನಡ ರಾಜೋತ್ಸವದ ಪ್ರಶಸ್ತಿಗೆ ಭಾಜನರಾದ ಡಾ. ಸಿದ್ರಾಮಪ್ಪ ಮಾಲಿಪಾಟೀಲ್ ಅವರಿಗೆ ಏರ್ಪಡಿಸಿದ ಸನ್ಮಾನ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಅವರು ರೈತರಿಗೆ ಕೊಡ ಮಾಡುವ ಬೀಜ, ಗೊಬ್ಬರ, ಔಷಧ, ಮಾರುಕಟ್ಟೆ ದರಗಿಂತ ಹೆಚ್ಚಿಗೆ ಬರೆದು ಸರಕಾರದ ಸಹಾಯ ಧನ ವಜಾ ಮಾಡಿ ರೈತರಿಗೆ ಕೊಡುತ್ತಿದ್ದಾರೆ. ಧಾರವಾಡ ಮತ್ತು ರಾಯಚೂರು ಕೃಷಿ ವಿಶ್ವ ವಿದ್ಯಾಲಗಳಲ್ಲಿ ರೈತರಿಗೆ ನೀಡಬೇಕಾದೆ ಸಲಕರಣೆ ಮತ್ತು ಯಂತ್ರೋಪಕರಣಗಳು ಒಂದೇ ಜಾಗಕ್ಕೆ ಇಟ್ಟು ಹಾಳಾಗುತ್ತಿವೆ ಅವುಗಳನ್ನು ರೈತರ ಬಳಕೆಗೆ ಅನುಕೂಲ ಮಾಡಿ ಕೊಡಲು ಸರಕಾರದ ಗಮನಕ್ಕೆ ಸಿದ್ರಾಮಪ್ಪ ಪಾಟೀಲ್ ಅವರು ತರಬೇಕೆಂದು ಹೇಳಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಂiÀiದ ನಿವೃತ್ತ ಕುಲಪತಿ ಎಸ್. ಎ. ಪಾಟೀಲ್ ಅವರು ಸಭೆಯ ಮುಖ್ಯ ಅತಿಥಿಗಳಾಗಿ ಕೃಷಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಸಿದ್ರಾಮಪ್ಪ ಪಾಟೀಲ್ ಅವರ ಸಾಧನೆ ಗಮನಿಸಿದ ಸರಕಾರದ 65ನೇ ಕನ್ನಡ ರಾಜೋತ್ಸವದ ಪ್ರಶಸ್ತಿಗೆ ಆಯ್ಕೆ ಮಾಡಿದ್ದು ಸಂತಸ ಇವರ ಸಾಧನೆ ರಾಷ್ಟ್ರ ಮಟ್ಟದಲ್ಲಿ ಕೂಡಾ ಹರಡಲಿ ಎಂದು ಹಾರೈಸಿದರು.

ಮಾಜಿ ಉಪಸಭಾಪತಿ ಬಿ.ಆರ್.ಪಾಟೀಲ್ ಹಾಗೂ ಶಶೀಲ ನವೋಶಿ ಅವರು ಮಾತನಾಡಿ ಸಿದ್ರಾಮಪ್ಪ ಪಾಟೀಲ್‍ರ ಇಳಿವಯಸ್ಸು ಆದರೂ ನಿರಂತರವಾಗಿ ರೈತರ ಸಂಪರ್ಕದಲ್ಲಿ ಇದ್ದು. ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಿ ಸೇವೆ ಸಲ್ಲಿಸಿದಕ್ಕೆ ಈ ಪ್ರಶಸ್ತಿ ಅವರಿಗೆಧಕ್ಕಿದ್ದು. ಇಡೀ ತಾಲೂಕಿಗೆ ಕೀರ್ತಿ ತಂದಂತೆ ಆಗಿದೆ ಇವರ ಸೇವೆ ಇನ್ನೂ ಅಮರವಾಗಿರಲಿ ಎಂದು ಹೇಳಿದರು.

ನಿಂಬರ್ಗಾ ಗದ್ದಗೇಶ್ವರ ಮಠದ ನೀಲಕಂಠ ಶಿವಾಚಾರ್ಯರು, ಧಂಗಾಪುರದ ನಾಗಪ್ಪ ಮುತ್ಯಾ, ಜಿಲ್ಲಾ ಕೃಷಿ ಅಧಿಕಾರಿ ರಾಜು ಲೇಗಂಟಿ, ಸಿದ್ಧಣ್ಣಾ ಮಾಸ್ತರ ಶೇಗಜಿ, ಬಸವಂತರಾವ ಮಾಲಿಪಾಟೀಲ್ ವೇದಿಕೆಯಲ್ಲಿ ಇದ್ದರು. ಜಗನ್ನಾಥ ಶೇಗಜಿ ಸ್ವಾಗತ ಕೋರಿ ಪ್ರಾಸ್ಥವಿಕವಾಗಿ ಮಾತನಾಡಿದರು. ಮುಖಂಡರಾದ ಗುರುಶರಣ ಗೌಡ ಪಾಟೀಲ್ ಕೋರಳ್ಳಿ, ಶಂಕರರಾವ ದೇಶಮುಖ, ಮಲ್ಲಪ್ಪ ಹತ್ತರಕಿ, ವಿ.ಜಿ. ಹೋನ್ನಶಟ್ಟಿ, ಶಿವಶರಣಪ್ಪ ಬೆಳ್ಳಿ, ನಾಗಣ್ಣ ಕಲಶಟ್ಟಿ, ಗುರುಬೀಮರಾವ ಆಳಂದ, ಶಿವಶರಣಪ್ಪ ನಾಗೋಜಿ, ಲಕ್ಷ್ಮಣ ನಾಟೀಕರ ಗಣ್ಯರು ಸೇರಿದಂತೆ ಗ್ರಾಮz ಹಾಗೂ ಸಂಘ ಸಂಸ್ಥೆಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈರಣ್ಣಾ ಝಳಕಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಇದೇ ಸಂದರ್ಭದಲ್ಲಿ ಜಗನ್ನಾಥ ಶೇಗಜಿ ಅವರು ವೈಯಕ್ತಿಕವಾಗಿ ಗ್ರಾಮಸ್ಥರಿಗೆ ಸಿಹಿ ಹಂಚಿ ಸಂಭ್ರಮಿಸಿದರು.