ಕಲಬುರಗಿ,ಮಾ.27-ದೇಶದ ಸ್ವಾತಂತ್ರ್ಯ ಸಂಗ್ರಾಮದ ಧೀರ ಕ್ರಾಂತಿಕಾರಿಗಳಾದ ಭಗತ್‍ಸಿಂಗ್, ಸುಖದೇವ್ ಹಾಗೂ ರಾಜ್‍ಗುರು ಬ್ರಿಟಿಷರ ದಬ್ಬಾಳಿಕೆಯ ವಿರುದ್ದ ಸಮರಶೀಲ ಹೋರಾಟವನ್ನು ನಡೆಸಿ, ನಗುತ್ತಲೇ ಗಲ್ಲುಗಂಭಕ್ಕೆ ಮುತ್ತಿಟ್ಟು ಹುತಾತ್ಮರಾದ ಕೆಚ್ಚೆದೆಯ ದಿನದ ಪ್ರಯುಕ್ತ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗ್‍ನೈಜೇಷನ್, ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗ್‍ನೈಜೇಷನ್ ಹಾಗೂ ಅಖಿಲ ಭಾರತ ಮಹಿಳಾ ಸಾಂಸ್ಕøತಿಕ ಸಂಘಟನೆ ಜಿಲ್ಲಾ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಈಶ್ವರಚಂದ್ರ ವಿದ್ಯಾಸಾಗರ ಭವನದಲ್ಲಿ “ದ ಲೆಜೆಂಡ್ ಆಫ್ ಭಗತ್‍ಸಿಂಗ್ ಸಿನೆಮಾ ಪ್ರದರ್ಶನ ಹಾಗೂ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಸರಕಾರಿ ಐಟಿಐ ಕಾಲೇಜಿನ ಉಪನ್ಯಾಸಕರಾದ ಸತೀಶ ಸಜ್ಜನ್‍ರವರು ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಎಐಡಿಎಸ್‍ಓ ಜಿಲ್ಲಾ ಉಪಾಧ್ಯಕ್ಷ್ಷರಾದ ಸ್ನೇಹಾ ಕಟ್ಟಿಮನಿ ಮಾಡಿದರು. ವೇದಿಕೆಯ ಮೇಲೆ ಎಐಎಮ್‍ಎಸ್‍ಎಸ್ ಸಂಘಟನೆಯ ರಾಧಾ ಜಿ., ಗೌರಮ್ಮ ಸಿ.ಕೆ. ಉಪಸ್ಥಿತರಿದ್ದರು.