ದ.ಕ ಸಂಘ ಮಹಾಸಭೆ: ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಪಡೆದ ನಾಯಕ್ ರಿಗೆ ಸನ್ಮಾನ

ಕಲಬುರಗಿ:ಫೆ.25:ದಕ್ಷಿಣ ಕನ್ನಡ ಸಂಘದ ಮಹಾಸಭೆಯು ಕಲ್ಬುರ್ಗಿಯ ಡಿಸಿ ಕ್ಯಾಂಟೀನ್ ನಲ್ಲಿ ಗೌರವಾಧ್ಯಕ್ಷರಾದ ಪ್ರಶಾಂತ ಶೆಟ್ಟಿ ಇನ್ನಾ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಗೌರವಕ್ಕೆ ಪಾತ್ರರಾದ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ ಎಸ್ ಐ ದಕ್ಷಿಣ ಕನ್ನಡ ಸಂಘ ಸದಸ್ಯರಾದ ಪುಂಡಲೀಕ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಕೇಂದ್ರ ನಾಗರಿಕ ವಿಮಾನಯಾನ ಖಾತೆಯು ಕಲಬುರ್ಗಿಯಲ್ಲಿ ರಾತ್ರಿ ವಿಮಾನ ಇಳಿಯುವ ಸೇವೆ ಪ್ರಾರಂಭಿಸಿದ್ದಕ್ಕೆ ಕಲ್ಬುರ್ಗಿ ವಿಮಾನ ನಿಲ್ದಾಣ ಪ್ರಾಧಿಕಾರದ ಸದಸ್ಯ ನರಸಿಂಹ ಮೆಂಡನ್ ಅಭಿನಂದನೆ ಸಲ್ಲಿಸಿದರು. ಕೆಕೆಆರ್‌ಟಿಸಿ ಸಂಸ್ಥೆ ಮಂಗಳೂರಿಗೆ ಅಮೋಘವರ್ಷ ಪ್ರಾರಂಭ ಮಾಡಿರುವುದಕ್ಕೆ ಸಂಘದ ಪರವಾಗಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಎಂ ರಾಚಪ್ಪ ಅವರನ್ನು ಸಲ್ಲಿಸ.
ಸಭೆಯಲ್ಲಿ ಕಳೆದ ಐದು ವರ್ಷಗಳಲ್ಲಿ ಅಧ್ಯಕ್ಷನಾಗಿ ಸೇವೆ ನಿರ್ವಹಿಸಿದ ಸಮಾಜ ಮುಖಿ ಯೋಜನೆ ಗಳ ಕುರಿತು ಅಧ್ಯಕ್ಷರಾದ ಡಾ. ಸದಾನಂದ ಪೆರ್ಲ ಮಾಹಿತಿ ನೀಡಿದರು. ನೂತನ ಸಮಿತಿ ರಚನೆಯ ಪ್ರಸ್ತಾಪವನ್ನು ಮುಂದೂಡಲಾಗಯಿತು. ಸಂಘದ ಮುಂದಿನ ಚಟುವಟಿಕೆಗಳಿಗೆ ಸದಸ್ಯರು ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಗೌರವಾಧ್ಯಕ್ಷರಾದ ಪ್ರಶಾಂತ ಶೆಟ್ಟಿ ಇನ್ನಾ ಹೇಳಿದರು ಸಂಘದ ಕಾರ್ಯದರ್ಶಿ ಪುರಂದರ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.