ದ.ಕ. ನಿರ್ಮಿತಿ ಕೇಂದ್ರ – ಇಂಜಿನಿಯರ್ಸ್ ಡೇ ಕಾರ್ಯಕ್ರಮ

ಮಂಗಳೂರು ಸೆಪ್ಟೆಂಬರ್ 16 (ಕರ್ನಾಟಕ ವಾರ್ತೆ):- ದ.ಕ. ನಿರ್ಮಿತಿ ಕೇಂದ್ರದಲ್ಲಿ ಸೆಪ್ಟೆಂಬರ್ 15 ರಂದು ಡಾ.ಸರ್.ಎಂ.ವಿಶ್ವೇಶ್ವರಯ್ಯ ರವರ 160ನೇ ಜನ್ಮ ದಿನದ ಸ್ಮರಣಾರ್ಥ “ಇಂಜಿನಿಯರ್ಸ್ ಡೇ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ಜಿ.ಎಂ. ಟೆಕ್ ಮಂಗಳೂರು ಸ್ಮಾರ್ಟ್ ಸಿಟಿ ಮತ್ತು ಎಸಿಸಿಇಐ ಅಧ್ಯಕ್ಷ ಅರುಣ್ ಪ್ರಭಾ, ಮಂಗಳೂರು ಕ್ರೆಡೈ ಅಧ್ಯಕ್ಷ ನವೀನ್ ಕಾರ್ಡೋಜಾ ಹಾಗೂ ಸುರತ್ಕಲ್ ಎನ್.ಐ.ಟಿ.ಕೆ ಮಾಜಿ ಡೀನ್ ಡಾ.ಬಿ.ಆರ್. ಸಮಾಗಾ ಆಗಮಿಸಿದ್ದರು. ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ರಾಜೇಂದ್ರ ಕಲ್ಬಾವಿ ಪ್ರಾಸ್ತವಿಕ ನುಡಿಗಳನ್ನಾಡಿದರು. ನಿರ್ಮಿತಿ ಕೇಂದ್ರದ ಸಹಾಯಕ ಇಂಜಿನಿಯರ್ ಹರೀಶ್ ಸ್ವಾಗತಿಸಿದರು.
ನಿರ್ಮಿತಿ ಕೇಂದ್ರದಲ್ಲಿ 25 ವರ್ಷ ಸೇವೆ ಸಲ್ಲಿಸಿದ ಲೆಕ್ಕಾಧಿಕಾರಿ ಉಷಾ, ಪ್ರಧಾನ ತರಬೇತುದಾರ ಯೋಗೀಶ್ ಎಂ. ಹಾಗೂ ನಿರ್ಮಿತಿ ಕೇಂದ್ರದ ಉತ್ಪಾದನಾ ಘಟಕದ ಸಿಬ್ಬಂದಿಗಳಾದ ಗಂಗಯ್ಯ ಮತ್ತು ಶಿವಾನಂದ ಇವರುಗಳಿಗೆ ಶಾಲು, ಹಾರ, ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಅತಿಥಿಗಳು ನಿರ್ಮಿತಿ ಕೇಂದ್ರದಿಂದ ಇನ್ನೂ ಹೆಚ್ಚು ಹೆಚ್ಚು ಕಾರ್ಯಕ್ರಮಗಳು ನಡೆಯಲಿ ಹಾಗೂ ಸನ್ಮಾನಿತರು ಇನ್ನೂ ಹೆಚ್ಚು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಲಿ ಎಂದು ಹಾರೈಸಿದರು. ನಿರ್ಮಿತಿ ಕೇಂದ್ರದ ಕಾರ್ಯವೈಖರಿಯು ಇನ್ನೂ ಹೆಚ್ಚು ಸಾರ್ವಜನಿಕರಿಗೆ ತಲುಪುವಂತಾಗಲಿ ಎಂದು ಶುಭ ಹಾರೈಸಿದರು. ಸೌಮ್ಯ ವಂದಿಸಿದರು.