ದ.ಕ. ಜಿಲ್ಲೆಯಲ್ಲಿ ೭೮, ಉಡುಪಿ ಜಿಲ್ಲೆಯಲ್ಲಿ ೪೨ ಮಂದಿಗೆ ನಿನ್ನೆ ಕೊರೊನಾ ಪಾಸಿಟಿವ್

ಮಂಗಳೂರು, ನ.೯- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ರವಿವಾರದಂದು ೭೮ ಹೊಸ ಕೊರೋನಾ ವೈರಸ್ ಪ್ರಕರಣಗಳು ವರದಿಯಾಗಿದ್ದು, ಉಡುಪಿಯಲ್ಲಿ ೪೨ ಹೊಸ ಪ್ರಕರಣಗಳು ದಾಖಲಾಗಿವೆ.
ಇದರೊಂದಿಗೆ ದ.ಕ. ಜಿಲ್ಲೆಯಲ್ಲಿ ಈವರೆಗೆ ಒಟ್ಟು ಕರೋನಾ ವೈರಸ್ ಪ್ರಕರಣಗಳ ಸಂಖ್ಯೆ ೩೦,೮೯೭ಕ್ಕೆ ಏರಿಕೆಯಾಗಿದೆ. ೯೮ ರೋಗಿಗಳು ಚೇತರಿಸಿಕೊಂಡು ಭಾನುವಾರ ಆಸ್ಪತ್ರೆಗಳಿಂದ ಬಿಡುಗಡೆಗೊಂಡರು. ಜಿಲ್ಲೆಯಲ್ಲಿ ರವಿವಾರ ಒಬ್ಬರು ಸೋಂಕಿಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ ೬೮೮ಕ್ಕೆ ಏರಿಕೆಯಾಗಿದೆ.
ಉಡುಪಿ ಜಿಲ್ಲೆಯ ನಿನ್ನೆಯ ಕೊರೋನಾ ವರದಿ:
ಜಿಲ್ಲಾ ಆರೋಗ್ಯ ಬುಲೆಟಿನ್ ಪ್ರಕಾರ, ಈವರೆಗೆ ೧,೯೭,೬೨೦ ಮಂದಿ ಪರೀಕ್ಷೆಗೆ ಒಳಗಾಗಿದ್ದು, ಅದರಲ್ಲಿ ೧,೧೭೫,೪೧೭ ಮಂದಿಯ ವರದಿ ನೆಗೆಟಿವ್ ಆಗಿದೆ. ಭಾನುವಾರ ಒಟ್ಟು ೪೨ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ ೨೨,೨೦೩ ಕ್ಕೆ ತಲುಪಿದೆ. ಈ ಪೈಕಿ ೧೮೭ ಮಂದಿ ಮಾತ್ರವೇ ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಸ್ಪತ್ರೆಗಳಿಂದ ಭಾನುವಾರ ೪೧ ರೋಗಿಗಳನ್ನು ಬಿಡುಗಡೆ ಮಾಡಲಾಗಿದ್ದು, ಒಟ್ಟು ಚೇತರಿಕೆ ಸಂಖ್ಯೆ ೨೧,೬೩೯ ಕ್ಕೆ ತಲುಪಿದೆ.