ದ.ಕ. ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ೧೧ ಮಂದಿ ಮೃತ್ಯು

ಮಂಗಳೂರು, ಮೇ ೨೭- ಕೊರೊನಾ ಸೋಂಕಿಗೆ ದ.ಕ. ಜಿಲ್ಲೆಯಲ್ಲಿ ಬುಧವಾರ ೧೧ ಮಂದಿ ಕೋವಿಡ್‌ಗೆ ಮೃತಪಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ ೮೮೪ಕ್ಕೇರಿದೆ. ಬುಧವಾರ ೭೫೬ ಮಂದಿ ಕೊರೋನ ಸೋಂಕಿನಿಂದ ಗುಣಮುಖರಾಗುವುದರೊಂದಿಗೆ ಈವರೆಗೆ ಗುಣಮುಖರಾದವರ ಸಂಖ್ಯೆ ೬೧,೫೬೧ಕ್ಕೇರಿದೆ. ಸದ್ಯ ಜಿಲ್ಲೆಯಲ್ಲಿ ೧೦,೦೯೯ ಸಕ್ರಿಯ ಪ್ರಕರಣವಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಈವರಗೆ ೮,೩೫,೧೫೨ ಮಂದಿಯ ದ್ರವ ಪರೀಕ್ಷೆ ಮಾಡಲಾಗಿದೆ. ಆ ಪೈಕಿ ೭,೬೨,೬೦೮ ಮಂದಿಯ ವರದಿ ನೆಗೆಟಿವ್ ಬಂದಿದೆ. ಒಟ್ಟು ೭೨,೫೪೪ ಮಂದಿ ಕೊರೋನ ಸೋಂಕಿಗೊಳಗಾಗಿದ್ದಾರೆ. ಮಾಸ್ಕ್ ನಿಯಮ ಉಲ್ಲಂಸಿದ ೫೬,೭೩೯ ಮಂದಿಯಿಂದ ೫೯,೨೨,೮೩೦ ರೂ. ದಂಡ ವಸೂಲು ಮಾಡಲಾಗಿದೆ. ಮೃತಪಟ್ಟವರಲ್ಲಿ ಮಂಗಳೂರಿನ ೯, ಬಂಟ್ವಾಳ ಮತ್ತು ಪುತ್ತೂರಿನ ತಲಾ ಒಬ್ಬರು ಸೇರಿದ್ದಾರೆ. ಅಲ್ಲದೆ ಬುಧವಾರ ಜಿಲ್ಲೆಯಲ್ಲಿ ೭೨೯ ಮಂದಿಗೆ ಕೊರೋನ ಸೋಂಕು ದೃಢಪಟ್ಟಿವೆ. ಜಿಲ್ಲೆಯ ೫ ಕಡೆಗಳಲ್ಲಿ ಬುಧವಾರ ಕಂಟೈನ್ಮೆಂಟ್ ವಲಯವನ್ನಾಗಿ ಘೋಷಣೆ ಮಾಡಲಾಗಿದೆ. ಮಂಗಳೂರು ತಾಲೂಕಿನ ೪ ಮತ್ತು ಬಂಟ್ವಾಳ ತಾಲೂಕಿನ ೧ ಕಡೆಗಳಲ್ಲಿ ಕಂಟೈನ್ಮೆಂಟ್ ವಲಯ ಘೆಷಣೆ ಮಾಡಲಾಗಿದೆ. ಜಿಲ್ಲೆಯಲ್ಲಿ ಬುಧವಾರ ೨ ಬ್ಲ್ಯಾಕ್ ಂಗಸ್ ಪ್ರಕರಣ ಪತ್ತೆಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ೨೫ ಬ್ಲ್ಯಾಕ್ ಂಗಸ್ ಸಕ್ರಿಯ ಪ್ರಕರಣಗಳು ಇದೆ. ಈ ಪ್ರಕರಣದಲ್ಲಿ ಈಗಾಗಲೆ ಇಬ್ಬರು ಮೃತಪಟ್ಟಿದ್ದಾರೆ. ಬುಧವಾರ ಪತ್ತೆಯಾದ ೨ ಪ್ರಕರಣಗಳಲ್ಲಿ ವೆನ್ಲಾಕ್‌ನಲ್ಲಿ ಒಬ್ಬರು ಮತ್ತು ಖಾಸಗಿ ಆಸ್ಪತ್ರೆಯೊಂದರಲ್ಲಿ ಒಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ವೈಟ್ ಹಾಗೂ ಯೆಲ್ಲೊ ಫಂಗಸ್ ಪ್ರಕರಣಗಳು ಕಾಲಿಟ್ಟಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.