ದ್ವೈತ ಸಿದ್ಧಾಂತ ಮಹಾಮುನಿ ಶ್ರೀ ವೇದೇಶ ತೀರ್ಥರು

ಹಿರೇಮಣ್ಣೂರ,- ಧ್ರುವಕರಾರ್ಚಿತ ಚನ್ನಕೇಶವನ ವಾಸಸ್ಥಾನ. ಭವ್ಯ ದೇವಸ್ಥಾನ. ಗುರು ಮಧ್ವಾಚಾರ್ಯರ ಸಾಕ್ಷಾತ್ ಶಿಷ್ಯರಾದ ಶ್ರೀ ಮಾಧವ ತೀರ್ಥರ ಸನ್ನಿಧಾನ. ವಿದ್ವನ್ಮಣಿಗಳ ತವರೂರು., ಪಂಚ ಗ್ರಾಮದ ಊರು, ಮಣ್ಣೂರು, ಊರಲ್ಲಿ ತಕ್ಕ ಬ್ರಾಹ್ಮಣ್ಯ, ವೈಧಿಕರು, ಗೃಹಸ್ಥರು, ಸಿರಿವಂತರು.

ಊರಲ್ಲಿ ದೊಡ್ಡ ಚಿನಿ ವಾಲರ ಮನೆತನ. ಭಾರೀ ಶ್ರೀಮಂತರು. ಮನೆ ತುಂಬಾ ಬೆಳ್ಳಿ, ಬಂಗಾರ, ಅಪರಿಮಿತ ಐಶ್ವರ್ಯ, ಸುವರ್ಣದ ವ್ಯಾಪಾ ರ,. ಇಂತಹ ಮನೆತನಕ್ಕೆ ಹಿರಿಯರು ಭಾಗಪ್ಪಯ್ಯನವರು ಮನೆಯ ಮುಖ್ಯ ಯಜಮಾ ನರು. ಬಹಳ ಸದಾಚಾರಿಗಳು, ಭಕ್ತಿವಂತರು, ಸುಸಂಸ್ಕøತರು, ಉದಾರ ಸ್ವಭಾವದವರು. ಹರಿ ಗುರುಗಳಲ್ಲಿ ವಿಶ್ವಾಸ, ಬ್ರಾಹ್ಮಣರಲ್ಲಿ ಶ್ರದ್ದೆ, ಹೀಗಾಗಿ ಮನೆಗೆ ಬರ ಹೋಗುವ ಜನರಿಗೆ ಕೊರತೆಯಿರಲಿಲ್ಲ.

ಭಾಗಪ್ಪಯ್ಯನವರಿಗೆ ಕೃಷ್ಣಪ್ಪಯ್ಯ, ಯಾದಪ್ಪಯ್ಯರೆಂದು ಇಬ್ಬರು ತಮ್ಮಂದಿರು. ಇಬ್ಬರೂ ಸದಾಚಾರಿಗಳು. ಮೂರು ಜನರು ಕೂಡಿಯೇ ಇರುತ್ತಿ ದ್ದರು. ಯಾದಪ್ಪಯ್ಯನವರು ಸುವರ್ಣ ವ್ಯಾಪಾರಕ್ಕಾಗಿ ಪಟ್ಟ ಣಕ್ಕೆ ಹೋಗುವುದು, ವ್ಯಾಪಾರ ಮಾಡುವುದು ಮುಂತಾದ ಕಾರ್ಯ ನಿರ್ವಹಿಸುತ್ತಿದ್ದರು. ಕೃಷ್ಣಪ್ಪಯ್ಯನವರು ಹೊಲ ಮನೆಯ ಕಾರ್ಯ ಮಾಡು ತ್ತಿದ್ದರು. ಭಾಗಪ್ಪಯ್ಯನವರು ಎಲ್ಲ ಮೇಲ್ವಿಚಾರಣೆ ವಹಿಸಿದ್ದರು.

ಕೃಷ್ಣಪ್ಪ, ಯಾದಪ್ಪನವರ ವಿವಾಹ ವೈಭವದಿಂದ ಜರುಗಿತು. ಕೆಲವು ವರ್ಷ ಕಳೆ ಯುವಷ್ಟರಲ್ಲಿಯೇ ಕೃಷ್ಣಪ್ಪ ಯ್ಯನವರಿಗೆ ಪುತ್ರ ಸಂತಾ ನವಾಯಿತು. ಮಗುವಿಗೆ ಶ್ರೀನಿವಾಸನೆಂದು ನಾಮಕರಣ ಮಾಡಿದರು. ಕೆಲವೇ ದಿನಗಳಲ್ಲಿ ಕೃಷ್ಣಪ್ಪಯ್ಯನವರ ಆರೋಗ್ಯ ಕೆಡತೊಡಗಿತು. ದೇಹ ರೋಗ ಪೀಡಿತವಾಯಿತು. ಅನೇಕ ದಿನಗಳ ಆರೈಕೆಯಾದರೂ ಗುಣವಾಗಲಿಲ್ಲ. ಕೆಲವೇ ದಿನಗಳಲ್ಲಿ ದೇಹತ್ಯಾಗ ಮಾಡಿದರು. ಎಲ್ಲರಿಗೂ ಬಹಳ ದು:ಖವಾಯಿತು. ಭಾಗಪ್ಪ ಯ್ಯನವರ ಮೇಲೆ ಈ ವಿಷಯ ಬಹಳ ಪರಿಣಾಮ ಬೀರಿತು. ಮನೆ ತುಂಬಾ ಐಶ್ವರ್ಯ, ಸತಿ ಶಿರೋಮಣಿ ಮಡದಿ, ಮುದ್ದು ಮಗು ಎಲ್ಲವನ್ನೂ ಬಿಟ್ಟು ವೈಕುಂಠ ವಾಸಿಯಾದದ್ದು, ಆತ್ಮ ನಿರೀಕ್ಷಣೆಗೆ ಹಚ್ಚಿತು. ಆದ ದು:ಖ ವೈರಾಗ್ಯಕ್ಕೆ ಪ್ರೇರೇಪಿಸಿತು. ಶ್ರೀ ಹರಿಯ ಮುಂದೆ ಮನುಷ್ಯನ ಆಟ ನಡೆಯದು. ಹರಿ ಚಿತ್ತವೇ ಸತ್ಯ. ನರ ಚಿತ್ತಕ್ಕೆ ಬಂದದ್ದು ಲವಲೇಶ ನಡೆಯದು. ಹರಿಯ ಒಲುಮೆಯೇ ಜೀವನದ ಗುರಿ. ಅವನ ಅನುಗ್ರಹ ಪಡೆಯುವುದೇ ಶ್ರೇಷ್ಠ ಮಾರ್ಗ. ಸಂಪತ್ತಿನ ಮೋಹ ದು:ಖಕ್ಕೆ ಮೂಲ. ಹರಿಚಿತ್ತ ತಿಳಿದರು, ವೈರಾಗ್ಯ ತಾಳಿದರು. ಸಂಸಾರದ ಜವಾ ಬ್ದಾರಿಯನ್ನು ಯಾದಪ್ಪನವರಿಗೆ ಒಪ್ಪಿಸಿದರು. ಸಂಸಾರ ಬೇಡವಾಯಿತು. ಗುರುಗಳನ್ನು ಹುಡುಕಿದರು. ಅಪರೋಕ್ಷ ಜ್ಞಾನಿಗಳಾದ ಶ್ರೀ ರಘೂತ್ತಮ ತೀರ್ಥರ ಹತ್ತಿರ ಬಂದು ಗುರುಗಳ ಅಡಿಯಲ್ಲಿ ಒರಗಿ ಉದ್ಧರಿಸಿರಿ ಎಂದು ಬೇಡಿಕೊಂಡರು. ಅಪರೋಕ್ಷ ಜ್ಞಾನಿಗಳಾದ ಶ್ರೀ ರಘೂತ್ತಮ ತೀರ್ಥರು ಭಾಗಪ್ಪಯ್ಯನವರ ಯೋಗ್ಯತೆ ಅರಿತರು. ಅನುಗ್ರಹ ಮಾಡಲು ಅಪೇಕ್ಷಿಸಿದರು. ಸನ್ಯಾಸ ನೀಡಲು ನಿರ್ಧರಿಸಿದರು.

ವೈರಾಗ್ಯ ಪಡೆದ ಭಾಗಪ್ಪಯ್ಯನವರು ಆಶ್ರಮ ಸ್ವೀಕರಿಸಿದರು. ರಘೂತ್ತಮ ತೀರ್ಥರಲ್ಲಿ ವೇದಾಂತ ಅಧ್ಯಯನ ಪ್ರಾರಂಭವಾಯಿತು. ಅವರಿಗೆ ಶ್ರೀ ವೇದೇಶತೀರ್ಥರೆಂದು ನಾಮಕರಣವಾಯಿತು. ಏಳೆಂಟು ವರ್ಷಗಳಲ್ಲಿ ವೇದಾಂತದ ಉದ್ಗ್ರಂಥಗಳನ್ನೆಲ್ಲ ಅಧ್ಯಯನ ಮಾಡಿದರು. ವಿಕ್ರಮ ಸಂವತ್ಸರದಲ್ಲಿ ಸುಧಾ ಮಂಗಲ ನೆರವೇರಿಸಿದರು. ವಿದ್ಯಾಪೀಠದ ಕಾರ್ಯಭಾರ ಹೊತ್ತು ಮಣ್ಣೂ ರಿನಲ್ಲಿಯೇ ವಾಸ ಮಾಡಿ ಹಗ ಲಿರುಳು ಜಪ-ತಪ, ಪೂಜೆ, ಪಾಠ-ಪ್ರವಚನಗಳಲ್ಲಿ ತತ್ಪರರಾದರು.

ಶ್ರೀ ವೇದೇಶತೀರ್ಥರು ಅನೇ ಕ ಗ್ರಂಥಗಳನ್ನು ರಚಿಸಿದರು. ತತ್ವೋದ್ಯೋತ ಟಿಪ್ಪಣೆ, ಪ್ರಮಾಣ ಪದ್ಧತಿ, ಟಿಪ್ಪಣೆ, ಛಾಂದೋಗ್ಯ ಭಾಷ್ಯೆ ಟಿಪ್ಪಣೆ, ಕಾಠಕೋಪನಿಷತ್ತು ಟಿಪ್ಪಣೆ, ತಲವಕಾರ ಉಪನಿಷತ್ ಟಿಪ್ಪಣೆ ಮೊದಲಾದ ಗ್ರಂಥ ಗಳನ್ನು ರಚಿಸಿದ್ದಾರೆ. ಅನವರತ ಪಾಠ ಪ್ರವಚನ, ಶ್ರವಣ, ಮನನ ಮಾಡಬೇಕು ಎಂಬ ಸಂದೇಶ ನೀಡಿ ಶ್ರೀ ವೇದೇಶತೀರ್ಥರು ಕಾರ್ತಿಕ ಶುದ್ಧ ಷಷ್ಠಿ 1625 ರಲ್ಲಿ ಮಣ್ಣೂರಿನಲ್ಲಿ ವೃಂದಾವನ ಪ್ರವೇಶ ಮಾಡಿದರು. ಕಾರ್ತಿಕ ಶುದ್ಧ ಪಂಚಮಿಯಂದು ಶ್ರೀ ವೇದೇಶತೀರ್ಥರ ಆರಾಧನೆ ನಡೆಯಲಿದೆ

ಇವರ ಸೇವೆಯಿಂದ ಹುಚ್ಚರ ಹುಚ್ಚು ಬಿಟ್ಟಿದೆ. ಭೂತ ಪಿಶಾಚಿಗಳ ಬಾಧೆ ತೊಲಗಿದೆ. ರೋಗ ನಿವೃತ್ತವಾಗಿದೆ. ಐಶ್ವರ್ಯ ದೊರೆತಿದೆ. ಸಂತಾನ, ಸಂಪತ್ತು ಸಿಕ್ಕಿದೆ. ಆಪತ್ತು ದೂರಾಗಿದೆ. ಇಂದಿಗೂ ಸಾವಿ ರಾರು ಭಕ್ತರು ಇವರ ಸೇವೆ ಮಾಡಿ ಫಲ ಪಡೆಯುತ್ತಿದ್ದಾರೆ. ಇವರ ಹೆಸರಿನಿಂದಲೇ ಮಣ್ಣೂ ರಿನಲ್ಲಿ ಶ್ರೀ ವೇದೇಶತೀರ್ಥ ವಿದ್ಯಾಪೀಠ ಪ್ರಾರಂಭವಾಗಿ 28 ವರ್ಷಗಳು ಕಳೆದಿವೆ. ಪಂ. ಅನಂತಾಚಾರ್ಯ ಅಕಮಂಚಿ ಗುರುಗಳು ವೇದ ಅಧ್ಯಯನ ಪಾಠ ಪ್ರವಚನ ನಡೆಸಿಕೊಂಡು ಬರುತ್ತಿದ್ದಾರೆ. ಇವರ ಸೇವೆ ಕಂಡು ಶ್ರೀ ಉತ್ತರಾದಿ ಶ್ರೀಗಳು ಈ ಅಭಿವೃದ್ದಿ ಕಾರ್ಯ ಹೀಗೆ ಮುಂದುವರೆದು ಸಾಮಾಜಿಕ ಹಾಗೂ ಧಾರ್ಮೀಕ ಕಾರ್ಯ ಗಳು ನಿರಂತರ ಸಾಗಲಿ ಎಂದು ಪಂ. ಅನಂತಾಚಾರ್ಯರಿಗೆ ಸದಾ ಅಭಯ ಹಸ್ತ ನೀಡುತ್ತಲಿದ್ದಾರೆ.ಸುಮಾರು 60 ವಿದ್ಯಾರ್ಥಿಗಳು ಇಲ್ಲಿ ಶಾಸ್ತ್ರಾಧ್ಯಯನ ಮಾಡುತ್ತಿದ್ದಾರೆ.

ಲೇಖನ : ಕೆ. ಕೆ. ಕುಲಕರ್ಣಿ ವಿಜಯಪುರ