ದ್ವೇಷ ಮತ್ತು ಭಯೋತ್ಪಾದನೆಗೆ ಬಜರಂಗದಳ ಆಗ್ರಹ

ರಾಯಚೂರು, ಜ.೧೮- ದೇಶದಲ್ಲಿ ಜಿಹಾದಿ ಶಕ್ತಿಗಳು ದ್ವೇಷ ಮತ್ತು ಭಯೋತ್ಪಾದನೆಯ ವಾತಾವರಣವನ್ನು ಸೃಷ್ಟಿಸುತ್ತಿದ್ದು, ಕೆಲವೊಮ್ಮೆ ಯದ್ ಮೂಲಕ ಹಿಂದೂ ಸಮಾಜವನ್ನು ಭಯಭೀತಗೊಳಿಸುವ ಸಂಚು ಮಾಡಲಾಗುತ್ತಿದೆ ಎಂದು ಅಗ್ರಹಿಸಿ ವಿಶ್ವ ಹಿಂದೂ ಪರಿಷತ್ನ ಭಜರಂಗದಳ ದ ಜಿಲ್ಲಾ ಘಟಕದ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ತಮ್ಮ ಬೇಡಿಕೆಗಳನ್ನು ವಿವರಿಸಿತ್ತ ದ್ವೇಷವನ್ನು ಹರಡುವ ಮತ್ತು ಸುಳ್ಳು ಬಲಿಪಶು ಕಾರ್ಡ್ ಆಡುವ ಮೂಲಕ ಧರ್ಮ ಗುರುಗಳು ಮತ್ತು ನಾಯಕರನ್ನು ನಿಯಂತ್ರಿಸಲು ಕಠಿಣ ಕಾನೂನು ಜಾರಿಗಾಗಿ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು, ದಾಳಿಯಲ್ಲಿ ಭಾಗಿಯಾಗಿರುವ ಅಪ್ರಾಪ್ತರನ್ನು ವಯಸ್ಕರಿಗೆ ಸಮಾನವಾಗಿ ಪರಿಗಣಿಸಬೇಕು, ಜಿಹಾದಿ ಸಿದ್ಧಾಂತವನ್ನು ತಡೆಯಲು ಅಗತ್ಯವಾದ ಕಠಿಣ ಕಾನೂನನ್ನು ರೂಪಿಸಬೇಕು, ಮದರಸಗಳ ನಿಯಂತ್ರಣಕ್ಕೆ ಪರಿಣಾಮಕಾರಿ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಯೋಜಕ ಮಲ್ಲಿಕಾರ್ಜುನ್ ಎಚ್ ಕೆ, ನಗರ ಸಂಯೋಜಕ ಶರಣಬಸವ, ಸಹ ಕಾರ್ಯದರ್ಶಿ ವಿಜಯಕುಮಾರ್ ಹೂಗಾರ್, ರವಿಕುಮಾರ್, ರಾಕೇಶ್ ಪಾಟೀಲ್, ವೀರೇಶ್, ಬಸವರಾಜ್, ಶ್ರೀಕಾಂತ್ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.