ದ್ವೇಷ ಭಾಷಣ ಸಕಾಲಿಕ ಕ್ರಮಕ್ಕೆ ವಿಳಂಬ:ಸುಪ್ರೀಂ ಬೇಸರ

ನವದೆಹಲಿ,ಮಾ.೩೦- ದ್ವೇಷದ ಭಾಷಣ ಮಾಡುವವರ ವಿರುದ್ಧ ಸಕಾಲಿಕ ಕ್ರಮ ತೆಗೆದುಕೊಳ್ಳಲು ರಾಜ್ಯ ಸರ್ಕಾರ ದುರ್ಬಲವೇ ಅಥವಾ ಶಕ್ತಿ ಹೀನವೇ ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.
ದ್ವೇಷದ ಭಾಷಣ ಮಾಡುವವರ ವಿರುದ್ಧ ಸಕಾಲದಲ್ಲಿ ಕ್ರಮ ಕೈಗೊಳ್ಳಬೇಕು.ಇದನ್ನು ತಡೆಯಲು ಕ್ರಮಕೊಳ್ಳದ ಬಗ್ಗೆ ನ್ಯಾಯಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ದ್ವೇಷ ಭಾಷಣ ಮಾಡಿದ ಮಂದಿಯ ವಿರುದ್ದ ಕ್ರಮ ಕೈಗೊಳ್ಳದ ಕಾರಣ ಮಹಾರಾಷ್ಟ್ರದ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ನೇತೃತ್ವದ ಪೀಠ ದ್ವೇಷ ಭಾಷಣ ಮಾಡುವ ಮಂದಿಯ ವಿರುದ್ದ ಕ್ರಮ ಕೈಗೊಳ್ಳದ ಸರ್ಕಾರಗಳ ವಿರುದ್ದ ಚಾಟಿ ಬೀಸಿದೆ.
ಸುಪ್ರೀಂಕೋರ್ಟ್ ಈ ವಿಷಯದಲ್ಲಿ ಸಮಗ್ರ ಪರಿಗಣನೆಯ ಅಗತ್ಯವಿದೆ ಮತ್ತು ಇತರ ಸಮುದಾಯಗಳ ಪ್ರಮುಖ ವ್ಯಕ್ತಿಗಳು ಮಾಡಿದ ಗಂಭೀರ ಮತ್ತು ಕೆಟ್ಟ ದ್ವೇಷದ ಭಾಷಣಗಳನ್ನು ನ್ಯಾಯಾಲಯವು ಗಮನಿಸದ ಹೊರತು ದ್ವೇಷದ ಭಾಷಣವನ್ನು ನಿಲ್ಲಿಸುವ ಉದ್ದೇಶ ಈಡೇರುವುದಿಲ್ಲ ಎಂದು ಸಾಲಿಸಿಟರ್ ಜನರಲ್ ಮೆಹ್ತಾ ಹೇಳಿದ್ದಾರೆ.
“ಭಾರತ ಜಾತ್ಯತೀತ ದೇಶ. ಧರ್ಮವನ್ನು ರಾಜಕೀಯದಿಂದ ಸಂಪೂರ್ಣವಾಗಿ ಬೇರ್ಪಡಿಸಿದರೆ ಮಾತ್ರ ಸಾದ್ಯ ಎಂದಿದ್ದಾರೆ.
ಹಿಂದೂ ಸಂಘಟನೆಯ ಪರವಾಗಿ ವಾದ ಮಂಡಿಸಿದ ಅಬ್ದುಲ್ಲಾ ಅವರು ಮಹಾರಾಷ್ಟ್ರದಲ್ಲಿ ರ್ಯಾಲಿಗಳನ್ನು ಆಯೋಜಿಸಿದ್ದಾರೆ ಮತ್ತು ದ್ವೇಷದ ಭಾಷಣಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ದೇಶದ ಮೂಲೆ ಮೂಲೆಗಳಲ್ಲಿ ನಡೆಯುವ ದ್ವೇಷದ ಭಾಷಣಗಳನ್ನು ಸುಪ್ರೀಂ ಕೋರ್ಟ್ ಹೇಗೆ ನಿಭಾಯಿಸುತ್ತದೆ ಎಂದು ನ್ಯಾಯಮೂರ್ತಿ ನಾಗರತ್ನ ಅವರು ಕೇಂದ್ರ ಸರ್ಕಾರ ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ಅವರನ್ನು ಪ್ರಶ್ನಿಸಿದ್ದಾರೆ.
ಧರ್ಮದ ಹೆಸರಿನಲ್ಲಿ ಯಾವುದೇ ಮನವಿ ಮಾಡಬಾರದು ಎಂದು ಕಡ್ಡಾಯಗೊಳಿಸಿದಾಗ, ಇದೆಲ್ಲವೂ ನಿಲ್ಲುತ್ತದೆ. ಧರ್ಮ ಮತ್ತು ರಾಜಕೀಯದ ನಡುವೆ ಆಳವಾದ ಸಂಬಂಧವಿದೆ.ಒಂದು ಸಮುದಾಯದ ನಾಯಕ ಮಾಡಿದ ಉದ್ದೇಶಪೂರ್ವಕ ದ್ವೇಷದ ಭಾಷಣಗಳಿಂದ ದೇಶದ ಅತ್ಯುನ್ನತ ನ್ಯಾಯಾಲಯ ಕ್ರಮ ಕೈಗೊಳ್ಳಲಿ ಸಾದ್ಯವಿಲ್ಲ. ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ..