ಭಾಲ್ಕಿ : ಮಾ.28:ಶರಣರು ರಚಿಸಿದ ವಚನ ಸಾಹಿತ್ಯ ಚೆನ್ನಾಗಿ ಓದಿ ಅರ್ಥಮಾಡಿಕೊಂಡು ಪರೋಪಕಾರಯಾಗಿ ಬಾಳಿ ಜೀವನದಲ್ಲಿ ದ್ವೇಶ ಭಾವನೆ ಬೆಳೆಸಿಕೊಳಬೇಡಿ ಎಂದು ನೆರೆಯ ತೆಲಂಗಾಣದ ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಮತ್ತು ಚಿಂಚೋಳಿ ತಾಲ್ಲೂಕಿನ ದೇಗುಲಮಡಿ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ಹೇಳಿದರು ಮಾಡಿದರು.
ಭಾಲ್ಕಿ ತಾಲ್ಲೂಕಿನ ಸಿದ್ದೇಶ್ವರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ 76ನೇ ಜಾತ್ರಾ ಮಹೋತ್ಸವದಲ್ಲಿ ಮಾತನಾಡಿದ ಅವರು ಗುರು ಹಿರಿಯರ ತೊರಿಸಿ ಕೊಟ್ಟ ಮಾರ್ಗದಲ್ಲಿ ನಡೆಯಿರಿ ಅಲ್ಲದೇ ಹಿರಿಯರ ಸೇವೆ ಮಾಡಿ ಜೀವನ ಪಾವನಗೊಳಿಸಿಕೊಳಿ. ಸತ್ಯ ಮಾರ್ಗದಲ್ಲಿ ನಡೆಯಬೇಕು. ಆದರ್ಶ ವ್ಯಕ್ತಿತ್ವ ರೂಪಿಸಿಕೊಳ್ಳಿ, ಪ್ರತಿಯೊಬ್ಬರೂ ಕೆಲಸ ಮಾಡಿ ಬದಕು ಕಟ್ಟಿಕೊಳ್ಳಿ, ತಮ್ಮ ಕುಟುಂದ ಒಳ ಜಗಳಗಳು ತಮ್ಮ ಕುಟುಂಬದಲ್ಲಿಯೇ ಪರಿಹರಿಸಿಕೋಳ್ಳಬೇಕು ವೈಮನಸ್ಸಿನಿಂದ ಬದಕಬೇಡಿ ಪ್ರತಿಯೊಬ್ಬರೂ ದೇವರ ಧ್ಯಾನ ಮಾಡಿ ಎಂದು ಸಲಹೆ ನೀಡಿದರು. ಭಕ್ತರಿಗೆ ಸತ್ಯ ಮತ್ತು ಮುಕ್ತಿಯ ಮಾರ್ಗವನ್ನು ತೋರಿಸುವವನ್ನೆ ಗುರು ಎಂದು ಹೇಳಿದರುತಾವೇಲ್ಲರೂ ಶ್ರೀ ಸಿದ್ದಲಿಂಗೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕು ಎಂದರು
ಮೊದಲಿಗೆ ಶ್ರೀ ಸಿದ್ದಲಿಂಗೇಶ್ವರ ದೇವರಿಗೆ ಬಸವಲಿಂಗ ಅವಧೂತರು ಪೂಜೆ ಸಲ್ಲಿಸಿದರು.
ಮುಖಂಡರಾದ ಸಂತೋಷ ತರನಳೆ, ಶಶಿಧರ ಸೀತಾ, ವೀರಶೆಟ್ಟಿ ಖಂಡ್ರೆ, ರಾಜಕುಮಾರ ಕನಕಟೆ, ಸಚೀನ್ ತರನಳೆ, ವಿಶ್ವನಾಥ ಪರ್ಮಾ, ಚಂದ್ರಕಾಂತ ಸ್ವಾಮಿ, ಶಿವಕುಮಾರ ತರನಳೆ, ರಮೇಶ ಪಾಟೀಲ್, ಅನಿಲ ಪರ್ಮಾ ಮೊದಲಾದವರು ಇದ್ದರು.