ದ್ವೀತಿಯ ಪಿಯು ಉತ್ತಮ ಫಲಿತಾಂಶಕ್ಕೆ ಡಿಡಿಪಿಐ ಕರೆ

ಕೋಲಾರ ,೧೩:ಮುಂಬರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕೋಲಾರ ಜಿಲ್ಲೆ ಟಾಪ್ ಹತ್ತು ಸ್ಥಾನದಲ್ಲಿ ನೋಡಲು ಉಪನ್ಯಾಸಕರ ಸತತ ಪ್ರಯತ್ನದಿಂದ ಚಿನ್ನದ ಜಿಲ್ಲೆ ಕೋಲಾರದ ವಿದ್ಯಾರ್ಥಿಗಳ ಸಾಧನೆಯಾಗಬೇಕು ಎಂದು ಡಿಡಿಪಿಯು ರಾಮಚಂದ್ರಪ್ಪ ಹೇಳಿದರು.
ನಗರದ ನೂತನ ಸರ್ಕಾರಿ ಪಿಯು ಕಾಲೇಜಿನ ಸಾವಿತ್ರಿ ಬಾಪುಲೆ ವೇದಿಕೆಯಲ್ಲಿ ಅರ್ಥಶಾಸ್ತ್ರ ಅಧ್ಯಯನ ಕೇಂದ್ರದಿಂದ ನಡೆದ ದ್ವಿತೀಯ ಪಿಯುಸಿ ವಿಷಯಾಧಾರಿತ ಕಾರ್ಯಾಗಾರ ಮತ್ತು ಸಂವಾದ ಅರ್ಥಶಾಸ್ತ್ರ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ ವರ್ಷದಲ್ಲಿ ಕೋಲಾರ ಜಿಲ್ಲೆ ೧೪ನೇ ಸ್ಥಾನವನ್ನು ಗಳಿಸಿದ್ದು, ಮುಂದೆ ಜಿಲ್ಲೆಯನ್ನು ಟಾಪ್ ಹತ್ತರಲ್ಲಿ ನೋಡುವ ಅಸೆಯಾಗಿದೆ ಎಂದರಲ್ಲದೆ, ಇನ್ನೂ ಐದನೇ ಸ್ಥಾನದಲ್ಲಿ ಕೋಲಾರ ಜಿಲ್ಲೆ ನಿಂತರೆ, ಇನ್ನೂ ಸಿಕ್ಕಪಟ್ಟೆ ಖುಷಿಯಾಗುತ್ತದೆ ಎಂದರು.
ವಿಶ್ವದ ಪ್ರತಿಯೊಂದು ದೇಶವು ಸಹ ಅಭಿವೃದ್ಧಿ ಹೊಂದಲು ಅರ್ಥ ವ್ಯವಸ್ಥೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ ಪ್ರಗತಿಗೆ ಅರ್ಥ ವ್ಯವಸ್ಥೆಯ ಕೊಡುಗೆಯಾಗುತ್ತದೆ ಎಂದರು.
ವಿದ್ಯಾರ್ಥಿಗಳಲ್ಲಿ ಅರ್ಥ ವ್ಯವಸ್ಥೆಯ ಅರ್ಥಶಾಸ್ತ್ರವನ್ನು ಅರ್ಥೈಸುವ ಅಧ್ಯಯನವನ್ನು ಶಿಕ್ಷಕರು ಮಾಡುವ ಮೂಲಕ ಉತ್ತಮ ಅಂಕ ಪಡೆಯುತ್ತಿರುವ ವಿದ್ಯಾರ್ಥಿಗಳ ಯಶಸ್ಸು ಉಪನ್ಯಾಸಕರಿಗೆ ಸಲ್ಲುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅರ್ಥಶಾಸ್ತ್ರ ಅಧ್ಯಯನ ಕೇಂದ್ರದ ಗೌರವಾಧ್ಯಕ್ಷ ಪಿ.ಎಸ್.ಮುನಿರತ್ನಂ, ಅರ್ಥಶಾಸ್ತ್ರ ಅಧ್ಯಯನ ಕೇಂದ್ರದ ಅಧ್ಯಕ್ಷ ಟಿ.ಚಂದ್ರಪ್ಪ, ಜಿಲ್ಲಾ ಕಾರ್ಯನಿರತ ಪರ್ತಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್, ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಎಂ.ಬಾಲಕೃಷ್ಣ, ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಪರಶುರಾಮ್ ಎನ್ ಉಂಕಿ, ಪ್ರಭಾರಿ ಪ್ರಾಂಶುಪಾಲೆ ದ್ರಾಕ್ಷಾಯಿಣಿ ಎ, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಟಿ.ಕೆ.ನಟರಾಜ್, ಅರ್ಥಶಾಸ್ತ್ರ ಅಧ್ಯಯನ ಕೇಂದ್ರದ ಕಾರ್ಯದರ್ಶಿ ಆರ್.ವೆಂಕಟೇಶ್,ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಟಿ.ಜಯರಾಮ್, ನಂಗಲಿ ಶ್ರೀ ವರಸಿದ್ದಿ ವಿನಾಯಕ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಜಿ.ನೌಷಾದ್ ಆಲಿ, ಮುಡಿಯನೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಶ್ರೀನಿವಾಸರೆಡ್ಡಿ, ಮೈಲಾಂಡಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಎನ್.ರಾಮಮೂರ್ತಿ,ಬಂಗಾರಪೇಟೆ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಡಾ.ಎನ್.ಬೋಡಿರೆಡ್ಡಿ, ಕೋಲಾರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೆ.ಆನಂದಕುಮಾರ್, ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹೆಚ್.ಆರ್.ಶಂಕರಪ್ಪ ಇದ್ದರು