ದ್ವೀತಿಯ ಪಿಯುಸಿ-ಉಚಿತ ಇಂಗ್ಲಿಷ್ ತರಬೇತಿ ಆರಂಭ

ಮಾನ್ವಿ,ಆ.೦೭ – ದ್ವೀತಿಯ ಪಿಯುಸಿಯ ೨ ನೇ ಪೂರಕ ಪರೀಕ್ಷೆಯ ಸಿದ್ದತೆಯಲ್ಲಿರುವ ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ಇಂಗ್ಲಿಷ್ ವಿಷಯದಲ್ಲಿ ಅನುತೀರ್ಣರಾದ ವಿದ್ಯಾರ್ಥಿಗಳಿಗಾಗಿ ಉಚಿತವಾಗಿ ತರಗತಿಯನ್ನು ನಡೆಸಲಾಗುತ್ತಿದ್ದು ಆಸಕ್ತ ವಿದ್ಯಾರ್ಥಿಗಳು ಕೂಡಲೇ ನೊಂದಣಿ ಮಾಡಿಕೊಳ್ಳಬಹುದು ಎಂದು ಇಂಗ್ಲಿಷ್ ಉಪನ್ಯಾಸಕ ಉಮರ್ ದೇವರಮನಿ ತಿಳಿಸಿದ್ದಾರೆ.
ದ್ವೀತಿಯ ವರ್ಷದ ಪಿಯುಸಿ ಪೂರಕ ಪರೀಕ್ಷೆಯೂ ಇದೇ ಆಗಷ್ಟ್ ೨೧ ರಿಂದ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಆಗಷ್ಟ್ ೧೦ ರಿಂದ ಉಚಿತ ತರಗತಿಗಳು ಆರಂಭವಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ಉಪನ್ಯಾಸಕ ಉಮರ್ ದೇವರಿಮನಿ ೯೭೩೮೮೪೯೪೪೯ ಇವರನ್ನು ಸಂಪರ್ಕಿಸಬಹುದಾಗಿದೆ.