ದ್ವಿ ಪಾತ್ರದ ಮೂಲಕ ನಟಿ ಮಲ್ಲಿಕಾ ಶೆರಾವತ್ ಬಾಲಿವುಡ್ ಗೆ ಮರುಪ್ರವೇಶಿಸುತ್ತಿದ್ದಾರೆ

ನಟಿ ಮಲ್ಲಿಕಾ ಶೆರಾವತ್ ಆರು ವರ್ಷಗಳ ನಂತರ ಬಾಲಿವುಡ್ ಗೆ ವಾಪಸಾಗುತ್ತಿದ್ದಾರೆ. ಅವರು ಹಾರರ್ ತ್ರಿಲ್ಲರ್ ನಾಗಮತೀ ಫಿಲ್ಮ್ ನಲ್ಲಿ ಓರ್ವ ರಾಜಕುಮಾರಿಯ ರೂಪದಲ್ಲಿ ಕಂಡು ಬರಲಿದ್ದಾರೆ .
ತನ್ನ ರಾಜ್ಯವನ್ನು ಒಂದು ಸರ್ಪದ ಶಾಪದಿಂದ ಉಳಿಸುವ ಪ್ರಯತ್ನವನ್ನು ಅವರು ಮಾಡುತ್ತಾರೆ. ತಮಿಳು ಫಿಲ್ಮ್ ನಿರ್ದೇಶಕ ವೀಸಿ ವಾದಿಉದಯಾನ್ ಅವರ ಬಾಲಿವುಡ್ ನ ಮೊದಲ ಎಂಟ್ರಿಯ ಈ ಫಿಲ್ಮ್ ನ ವರ್ಕಿಂಗ್ ಮುಂಬೈ ಸಮೀಪದ ಕರ್ಜತ್ ನಲ್ಲಿ ಆರಂಭವಾಗಿದೆ.
ಮಲ್ಲಿಕಾ ಶೆರಾವತ್ ಈ ದಿನಗಳಲ್ಲಿ ವೆಬ್ ಶೋದಲ್ಲಿ ಕೆಲಸ ಮಾಡುತ್ತಿದ್ದಾರೆ .೨೦೧೫ ರಲ್ಲಿ ಬಂದ ’ಡರ್ಟಿ ಪಾಲಿಟಿಕ್ಸ್’ ಫಿಲ್ಮ್ ನ ಅನಂತರ ಅವರ ಯಾವುದೇ ಫಿಲ್ಮ್ ಬಂದಿರಲಿಲ್ಲ.
ಆರು ವರ್ಷಗಳ ನಂತರ ಮತ್ತೆ ಹಿಂದಿ ಫಿಲ್ಮ್ ನ ಸೆಟ್ಟ್ ಗೆ ಮರಳಿ ಬಂದಿದ್ದಾರೆ. ಈ ಫಿಲ್ಮ್ ನಲ್ಲಿ ಮಲ್ಲಿಕಾ ಬೇರೆ ಬೇರೆ ಎರಡು ಲುಕ್ ನಲ್ಲಿ ಕಂಡು ಬರಲಿದ್ದಾರೆ. ಇದು ೩ ಯುಗಗಳ ಅರ್ಥಾತ್ ೧೯೦೦- ೧೯೪೭ -೧೯೭೦ ಈ ವರ್ಷಗಳಲ್ಲಿ ನಡೆದ ಘಟನೆಗಳಾಗಿವೆ. ಮೂಲ ರೂಪದಿಂದ ಹಿಂದಿಯಲ್ಲಿ ಶೂಟಿಂಗ್ ನಡೆಸುತ್ತಿರುವ ಈ ಫಿಲ್ಮನ್ನು ತಮಿಳು ತೆಲುಗು ,ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್ ಮಾಡಲಾಗುವುದು . ಕರ್ಜತ್ ಮತ್ತು ಮುಂಬಯಿಯ ಶೂಟಿಂಗ್ ನಂತರ ರಾಜಸ್ಥಾನ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಕೂಡ ಒಂದು ಶೆಡ್ಯೂಲ್ ಇರುವುದು . ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ಫಿಲ್ಮ್ ಗಾಗಿ ಮಲ್ಲಿಕಾ ಶೆರಾವತ್ ಕುದುರೆ ಸವಾರಿ ಮತ್ತು ತಲವಾರ್ ಯುದ್ಧದ ತರಬೇತಿ ಪಡೆದಿದ್ದಾರೆ.

ದಿಶಾ ಪಟಾನೀ ೭೨೦ ಕಿಕ್ ಕೊಟ್ಟಾಗ…

ಶೀರ್ಷಿಕೆ ಸರಿಯಾಗಿ ಗಮನಿಸಿ ,ಇದು ಕಿಸ್ ಅಲ್ಲ ಕಿಕ್!
ನಟಿ ದಿಶಾ ಪಟಾನೀ ಫಿಟ್ನೆಸ್ ನ್ನು ಮುಂದಿಟ್ಟು ಸದಾ ಹೊಸ ವರ್ಕ್ ಔಟ್ಸ್ ಕಲಿಯುತ್ತಲೇ ಇರುವವರು. ಇತ್ತೀಚೆಗೆ ಅವರು ಒಂದು ವೀಡಿಯೋ ಶೇರ್ ಮಾಡಿದ್ದಾರೆ. ಅದರಲ್ಲಿ ಅವರು ಗುದ್ದು ಮತ್ತು ಕಿಕ್ ಪ್ರಾಕ್ಟೀಸ್ ಮಾಡುತ್ತಿರುವುದು ಕಾಣಬಹುದು. ತಾನು ಎಷ್ಟು ಗಟ್ಟಿ ಇದ್ದೇನೆ ಎನ್ನುವುದನ್ನು ಫ್ಯಾನ್ಸ್ ಗಳಿಗೆ ತಿಳಿಸುವುದಕ್ಕಾಗಿ ಈ ವೀಡಿಯೋ ಶೇರ್ ಮಾಡಿದ್ದಾರೆ.


ಇದರಲ್ಲಿ ಅವರು ೭೨೦ ಕಿಕ್ ಪರ್ಫಾರ್ಮ್ ಮಾಡಿದ್ದಾರೆ. ಇದರ ಕ್ಯಾಪ್ಟನ್ ನಲ್ಲಿ ಬರೆದಿದ್ದಾರೆ- ಕೊನೆಗೂ ತಲುಪಿದ್ದೇನೆ ೭೨೦ ಕಿಕ್.
ದಿಶಾ ಪಟಾನಿ ಮೋಹಿತ್ ಸೂರಿ ಅವರ ಏಕ್ ವಿಲನ್ ೨ ಇದರಲ್ಲಿದ್ದಾರೆ. ಬ್ಲಾಕ್ಬಸ್ಟರ್ ಮಲಂಗ್ ನ ನಂತರ ಮೋಹಿತ್ ಸೂರಿ ಅವರ ಜೊತೆಗೆ ದಿಶಾ ಪಟಾನಿ ಅವರ ಎರಡನೇ ಫಿಲ್ಮ್ ಇದಾಗಿದೆ.

’ಟೀಕೂ ವೆಡ್ಸ್ ಶೇರೂ’ ಫಿಲ್ಮ್ ನ ಫಸ್ಟ್ ಲುಕ್ ರಿಲೀಸ್ ಮಾಡಿದ ಕಂಗನಾ

ಕಂಗನಾ ರನಾವತ್ ಅವರು ಅವನೀತಾ ಕೌರ್ ಮತ್ತು ನವಾಜುದ್ದೀನ್ ಸಿದ್ದಿಕಿ ಇವರ ಫಸ್ಟ್ ಲುಕ್ ಶೇರ್ ಮಾಡಿದ್ದಾರೆ .
ಇದು ಅವರ ಬರಲಿರುವ ಹೊಸ ಫಿಲ್ಮ್ ’ಟೀಕೂ ವೆಡ್ಸ್ ಶೇರೂ’ ಇದರದ್ದು. ಫಿಲ್ಮ್ ಸೋಮವಾರದಿಂದ ಫ್ಲೋರ್ ಗೆ ಬಂದಿದೆ. ಫಿಲ್ಮ್ ನಲ್ಲಿ ನವಾಜ್ ಅವರು ಶಿರಾಜ್ ಖಾನ್ ಆಫಗಾನಿ ಉರ್ಫ್ ಶೇರೂ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಕಂಗನಾ ೩ ಪೋಸ್ಟರ್ ಶೇರ್ ಮಾಡಿದ್ದಾರೆ .


ಮೂರನೇ ಪೋಸ್ಟರ್ ನಲ್ಲಿ ನವಾಜುದ್ದಿನ್ ಮತ್ತು ಅವನೀತಾ ಅವರಿಬ್ಬರೂ ಜೊತೆಯಾಗಿ ಕೂತಿರುವ ದೃಶ್ಯವಿದೆ. ನವಾಜುದ್ದೀನ್ ಹಳದಿ ಬಣ್ಣದ ಶೇರ್ವಾನಿ ಧರಿಸಿದರೆ ಅವನೀತಾ ಗುಲಾಬಿ ಬಣ್ಣದ ಸೂಟ್ ನಲ್ಲಿ ಮದುಮಗಳ ರೂಪದಲ್ಲಿದ್ದಾರೆ .ಕಂಗನಾ ಕ್ಯಾಪ್ಷನ್ ಬರೆದಿದ್ದಾರೆ –
ಒಬ್ಬ ನಿರ್ಮಾಪಕರ ರೂಪದಲ್ಲಿ ನನ್ನ ಪಯಣದ ಆರಂಭದಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರಾಪ್ತಿಯಾಗುತ್ತಿರುವುದು ಅತ್ಯಂತ ಪ್ರಮುಖ ಸಂಗತಿಯಾಗಿದೆ .ನಿಮ್ಮೆಲ್ಲರ ಜೊತೆ ಮಣಿಕರ್ಣಿಕಾ ಫಿಲಂಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಮೊದಲ ಪ್ರೊಡಕ್ಷನ್ ವೆಂಚರ್ ನ ಮೊದಲ ಲುಕ್ ಮಾಡುತ್ತಿದ್ದೇನೆ. ಟೀಕೂ ವೆಡ್ಸ್ ಶೇರೂ ಇದು ನನ್ನ ಹೃದಯದ ಒಂದು ಭಾಗ ಆಗಿದೆ .ಇದು ನಿಮಗೆಲ್ಲ ಇಷ್ಟವಾಗಬಹುದು ಎಂದು ನಂಬಿದ್ದೇನೆ. ಶೀಘ್ರವೇ ಸಿನಿಮಾ ಟಾಕೀಸುಗಳಲ್ಲಿ ಸಿಗೋಣ ” ಅಂದಿದ್ದಾರೆ.