
ವಿಜಯಪುರ:ಮಾ.10: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಸಂಗೀತ ವಿಭಾಗದ ವತಿಯಿಂದ ದ್ವಿಶತಕಂಠ ಗಾಯನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ವಿವಿಯ 32 ವಿಭಾಗಗಳಿಂದ 200 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡು 5 ವಿವಿಧ ಗೀತೆಗಳ ತರಬೇತಿಯನ್ನು ನೀಡಿ ದ್ವಿಶತಕಂಠ ಗಾಯನ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ಗಾಯನಕ್ಕೆ ಡಾ.ಹರೀಶ್ ಹೆಗಡೆ ಹಾಗೂ ಸಂಗೀತ ಹಿರೇಮಠ, ವಿನಯ್ ಕುಲಕರ್ಣಿ ತರಬೇತಿ ನೀಡಿದ್ದರು.
ವಿವಿಯ ಕುಲಪತಿ ಪೆÇ್ರ ಬಿ.ಕೆ ತುಳಸಿಮಾಲ ಮಾತನಾಡಿ, ಸಾಂಘಿಕ ಶಕ್ತಿ ಇದ್ದರೆ ಎಂತಹದನ್ನು ಸಾಧಿಸಬಹುದು ಎಂಬುದಕ್ಕೆ ಈ ಕಾರ್ಯಕ್ರಮ ಉದಾಹರಣೆ ಯಾಗಿದೆ ಎಂದು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಕುಲಸಚಿವ ಪೆÇ್ರ. ಬಿ. ಎಸ್. ನಾವಿ, ಮೌಲ್ಯಮಾಪನ ಕುಲಸಚಿವ ಪೆÇ್ರ. ಕೆ ರಮೇಶ್, ಆರ್ಥಿಕ ಅಧಿಕಾರಿ ರಾಮಣ್ಣ ಅಥಣಿ, ಪೆÇ್ರ. ವಿಷ್ಣು ಶಿಂಧೆ, ಸಂಗೀತ ವಿಭಾಗದ ಸಂಯೋಜಕÀ ಪೆÇ್ರ ಜಿ.ಬಿ.ಸೋನಾರ್, ಪೆÇ್ರ. ಓಂಕಾರಗೌಡ ಕಾಕಡೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.