ದ್ವಿಭಾಷೆಯಲ್ಲಿ ಟೆಂಪರ್

ಕನ್ನಡ ಹಾಗೂ ತೆಲುಗು ಸೇರಿ 2 ಭಾಷೆಗಳಲ್ಲಿ ನಿರ್ಮಾಣವಾಗಿರುವ, ಮಾಸ್ ಲವ್‍ಸ್ಟೋರಿ ಹೊಂದಿರುವ “ಟೆಂಪರ್ ” ಚಿತ್ರದ ಲಿರಿಕಲ್ ಹಾಡು ಬಿಡುಗಡೆಯಾಗಿದೆ.

ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷದಿಂದ ಸಾಹಿತಿ, ಸಂಗೀತ ಸಂಯೋಜಕ ಮಂಜುಕವಿ ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ

ಚಿತ್ರದ ಮೂಲಕ ಆರ್ಯನ್‍ಸೂರ್ಯ ಹಾಗೂ ಕಾಶಿಮಾ ಮೊದಲಬಾರಿಗೆ ನಾಯಕ-ನಾಯಕಿಯಾಗಿ ಬಣ್ಣಹಚ್ಚುತ್ತಿದ್ದಾರೆ.

ಬಿ.ಮೋಹನಬಾಬು ಹಾಗೂ ವಿ.ವಿನೋದ್‍ಕುಮಾರ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

ಲಿರಿಕಲ್ ಹಾಡಿನ‌ ಬಿಡುಗಡೆ ಸಮಾರಂಭದಲ್ಲಿ ಹಲವು ಗಣ್ಯರು ಆಗಮಿಸಿ ಶುಭ ಹಾರೈಸಿದರು

ನಿರ್ದೇಶಕ ಮಂಜುಕವಿ ಮಾತನಾಡಿ ನಾಯಕನಿಗೆ ಚಿಕ್ಕವನಾದಾಗಿನಿಂದ ಯಾವುದೇ ವಿಷಯಕ್ಕಾದರೂ ಶೀಘ್ರವೇ ಕೋಪಗೊಳ್ಳುವಂತಹ ಗುಣವಿರುತ್ತದೆ. ಕಾರ್ ಗ್ಯಾರೇಜ್ ಇಟ್ಟುಕೊಂಡಿರುವ ಆತನಿಗೆ ತನ್ನ ಗೆಳೆಯರೇ ಪ್ರಪಂಚ, ಆ ಸಮಯದಲ್ಲಿ ದೊಡ್ಡ ಮನೆತನದ ಯುವತಿಯ ಮೇಲೆ ನಾಯಕನಿಗೆ ಪ್ರೀತಿ ಚಿಗುರುತ್ತದೆ, ಈ ಸಮಯದಲ್ಲಿ ತನ್ನ ಕುಟುಂಬ ಹಾಗೂ ಪ್ರೇಯಸಿಯನು ಆತ ಹೇಗೆ ಕಾಪಾಡಿಕೊಳ್ಳುತ್ತಾನೆ ಎನ್ನುವುದೇ ಚಿತ್ರದ ಸಾರಾಂಶ.

ಮೈಸೂರು, ನಂಜನಗೂಡು, ಶ್ರೀರಂಗಪಟ್ಟಣ, ಮಡಿಕೇರಿ, ಮಂಡ್ಯ, ಮೂಡಿಗೆರೆ ಹಾಗೂ ಚಿಕ್ಕಮಗಳೂರು ಸುತ್ತಮುತ್ತ 50 ದಿನಗಳ ಕಾಲ ಚಿತ್ರದ ಶೂಟಿಂಗ್ ನಡೆಸಲಾಗಿದೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದು ಇದೇ ತಿಂಗಳು ಚಿತ್ರದ ಟೀಸರ್ ಕೂಡ ರಿಲೀಸ್ ಮಾಡುತ್ತಿದ್ದೇವೆ ಎಂದು ಹೇಳಿದರು.

ನಾಯಕಿ ಕಾಶಿಮಾ ಚಿತ್ರದಲ್ಲಿ ಊರಗೌಡನ ಮಗಳು. ಮೆಡಿಕಲ್ ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿದ್ದೇನೆ. ತಂದೆ ತಾಯಿಯ ಮುದ್ದಿನ ಮಗಳಾದ ನಾನು ಗ್ಯಾರೇಜ್‍ನಲ್ಲಿ ಕೆಲಸ ಮಾಡುವ ನಾಯಕನನ್ನು ಲವ್‍ಮಾಡಿದ ನಂತರ ಏನಾಗುತ್ತೆ, ನನ್ನ ಲೈಫ್‍ನಲ್ಲಿ ನಾಯಕನ ಎಂಟ್ರಿ ಆದಾಗ ಏನೆಲ್ಲ ಬದಲಾವಣೆ ಆಗುತ್ತದೆ ಎನ್ನುವುದೇ ಕಥೆ ಎಂದು ಹೇಳಿದರು.

ಬಲ ರಾಜವಾಡಿ,ಯತಿರಾಜ್,ಧನು ಯಲಗಚ್ , ಮಜಾಟಾಕೀಸ್ ಪವನ್‍ಕುಮಾರ್ ಚಿತ್ರದಲ್ಲಿದ್ದಾರೆ‌ ಚಿತ್ರದಲ್ಲಿ 5 ಹಾಡುಗಳಿದ್ದು ಆರ್.ಹರಿಬಾಬು ಸಂಗೀತ ನೀಡಿದ್ದಾರೆ

ಆರ್.ಕೆ.ಶಿವಕುಮಾರ್ ಕ್ಯಾಮರಾ ಚಿತ್ರಕ್ಕಿದೆ