ದ್ವಿಭಾಷಾ ಬಾಂಧವ್ಯಕ್ಕೆ ಬಳ್ಳಾರಿ ಉತ್ತಮ ಮಾದರಿ:ಡಾ.ಮಂಡಲಿ ಬುದ್ಧಪ್ರಸಾದ್

ಬಳ್ಳಾರಿ, ಮಾ.15: ಗಡಿಭಾಗದ ದ್ವಿಭಾಷಾ ಬಾಂಧವ್ಯ ಆರೋಗ್ಯಕರವಾಗಿರಬೇಕು, ಘರ್ಷಣೆ, ಸಂಘರ್ಷಗಳಿಂದ ಜನಜೀವನ ನಷ್ಟವನ್ನು ಅನುಭವಿಸಬೇಕು. ದುಃಖಕ್ಕೆ ಈಡಾಗಬೇಕಾಗುವುದು ಎಂದು ಮಾತೃಭಾಷೆ ಮನೆಯಲ್ಲಿದ್ದು, ಪ್ರಾಂತ್ಯಭಾಷೆ ಪರಸ್ಪರ ಸ್ನೇಹದಲ್ಲಿರಬೇಕು. ಇದಕ್ಕೆ ಮಾದರಿಯಾಗಿದೆ ಬಳ್ಳಾರಿ ಪ್ರಾಂತ್ಯ ಎಂದು ಆಂಧ್ರ ಸರ್ಕಾರದ ಮಾಜಿ ಉಪಸಭಾಪತಿಗಳಾದ ಡಾ. ಮಂಡಲಿ ಬುದ್ಧಪ್ರಸಾದ್
ಅಭಿಪ್ರಾಯಪಟ್ಟರು.
ನಗರದ ಶ್ರೀ ಬಸವರಾಜೇಶ್ವರಿ ಪಬ್ಲಿಕ್ ಶಾಲೆಯ ಶರಣ ಸಭಾಂಗಣದಲ್ಲಿ ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ 2021ರ ಯುಗಾದಿ ಪುರಸ್ಕಾರ ಸಮಾರಂಭದಲ್ಲಿ ಜ್ಯೋತಿ ಬೆಳಗಿ, ಕಾರ್ಯಕ್ರಮ ಉದ್ಘಾಟಿಸಿ, ಕನ್ನಡ-ತೆಲುಗು ಭಾಷಾ ಬಾಂಧವ್ಯ ಬೆಸೆದ ಬಳ್ಳಾರಿ ರಾಘವ ಜೋಳದರಾಶಿ ದೊಡ್ಡನಗೌಡ, ನಾಟಕ ಪಿತಾಮಹ ಧರ್ಮವರಂ ಕೃಷ್ಣಾಚಾರ್ ಮುಂತಾದ ಗಮಕ ಕಲಾವಿದರು ನಮಗೆ ಮಾದರಿಯಾಗಿದ್ದಾರೆ. ಈ ಬೆಸುಗೆಯನ್ನು ಭದ್ರಪಡಿಸುವಂತೆ ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್ ಮಾದರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ, ವಾಸ್ತು ತಜ್ಞ, ಜ್ಯೋತಿಷ್ಯ ಭಾಸ್ಕರ್ ಪಂಡಿತ ಮಠಂ ಗುರುಪ್ರಸಾದ್‍ರ 2021-22ರ ಶ್ರೀ ಫ್ಲವನಾಮ ಸಂವತ್ಸರದ ಉಮಾಮಹೇಶ್ವರ ಪಂಚಾಂಗವನ್ನು ಲೋಕಾರ್ಪಣೆ ಮಾಡಿದ ಕಲ್ಯಾಣ ಮಹಾಸ್ವಾಮಿಗಳು, ಸಾಂಸ್ಕೃತಿಕವಾದ ಐಕ್ಯತೆ ಬೆಳೆಯಲು ಕವಿ, ಸಾಹಿತಿ, ಕಲಾವಿದರನ್ನು ಗೌರವಿಸುವುದರಿಂದ ಸಾಧ್ಯವೆಂದು ಆಶೀರ್ವಚನೆ ನೀಡಿದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಅಪಾಯದಿಂದ ಪಾರಾಗಲು, ವಿಧಿ ನಿಯಮವನ್ನು ತಪ್ಪಿಸಲು ಸಾಧ್ಯವಿಲ್ಲ. ಜ್ಯೋತಿಷ್ಯ, ವೈದ್ಯ, ಸ್ವಾಮಿಗಳೆಲ್ಲರೂ ಕಷ್ಟದಲ್ಲಿ, ದುಃಖದಲ್ಲಿ, ನೋವಿನಲ್ಲೂ ಒಳ್ಳೆಯದನ್ನೇ ಹೇಳುತ್ತಾಎ. ಮಠಕ್ಕೆ ನಡೆದುಕೋ ಎನ್ನುತ್ತಾರೆ. ನಡೆದುಕೊಂಡ ಕಾಲಾವಧಿಯಲ್ಲಿ ಗ್ರಹಚಲನೆಯಾಗಿರುತ್ತದೆ. ಆಗ ಸಹಜವಾಗಿ ನಾನು ನಡೆದುಮಕೊಂಡಿದ್ದರಿಂದ ಗುಣವಾದೆ ಎಂದು ತಿಳಿಯುತ್ತಾರೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಕೆ.ಸಿ.ಕೊಂಡಯ್ಯ, ಜ್ಯೋತಿಷ್ಯ ದಿಕ್ಸೂಚಿಯಂತೆ ತಾತ್ಕಾಲಿಕ ನಡೆಯನ್ನು ತಿದ್ದಿಕೊಳ್ಳಲು ಸಹಾಯವಾಗುತ್ತದೆ ಎಂದರು. ಕಾರ್ಯಕ್ರಮದ ವಿಶೇಷವೆಂದರೆ, ಕಲೆ, ಸಾಹಿತ್ಯ, ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಥಮ ಬಾರಿಗೆ ಯುಗಾದಿ ಪುರಸ್ಕಾರದಲ್ಲಿ 19 ಜನ ಸಾಧಕರನ್ನು, ಕಲಾಭೂಷಣ ಬಿ.ಭೀಮಪ್ಪ ಚೆಟ್ಟಿಯವರ ಸ್ಮರಣಾರ್ಥ 6 ಪ್ರಶಸ್ತಿಗಳನನ್ನು, ನಾಟ್ಯಕಲಾ ಪ್ರಪೂರ್ಣ ಬಳ್ಳಾರಿ ಟಿ.ರಾಘವರ ಹೆಸರಿನಲ್ಲಿ 9 ಜನ ಕಲಾವಿದರಿಗೆ, ಸಾಂಸ್ಕೃತಿಕ ಸಾರ್ವಭೌಮ ಗಮಕ ಕಲಾನಿಧಿ ಜೋಳದರಾಶಿ ದೊಡ್ಡನಗೌಡರ ಹೆಸರಿನ ಪ್ರಶಸ್ತಿ 3 ಜನರನ್ನು, ರಂಗ ಕೋಗಿಲೆ ನಾಡೋಜ ಸುಭದ್ರಮ್ಮ ಮನ್ಸೂರರ ಹೆಸರಿನಲ್ಲಿ ಪ್ರಶಸ್ತಿಯನ್ನು ಇಬ್ಬರು ಕಲಾವಿದೆಯರಿಗೆ, ಕರ್ನಾಟಕಾಂಧ್ರ ದ್ವಿಭಾಷಾ ರತ್ನ ಜೋಳದರಾಶಿ ಗುತ್ತಿ ಚಂದ್ರಶೇಖರರೆಡ್ಡಿಯವರ ಹೆಸರಿನ ಪ್ರಶಸ್ತಿಯನ್ನು 5 ಸಾಧಕರಿಗೆ, ಅನ್ನಮಾಚಾರ್ಯ, ಪುರಂದರ, ತ್ಯಾಗರಾಜರ ಹೆಸರಿನ 3 ಪ್ರಶಸ್ತಿಗಳು, ನಾಟ್ಯ ಕ್ಷೇತ್ರ ಪ್ರಶಸ್ತಿಯಾಗಿ 6 ಸಾಧಕ ನೃತ್ಯ ಪಟುಗಳಿಗೆ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ 8 ಜನ ಶಿಕ್ಷಕಿಯರಿಗೆ, ಹೆಚ್ಚು ಅಂಕ ಪಡೆದ ಎಸ್.ಎಸ್.ಎಲ್.ಸಿ.ಯ 6 ವಿದ್ಯಾರ್ಥಿಗಳಿಗೆ, ಪಿ.ಯು.ಸಿ.ಯ ಕಲೆ, ವಾಣಿಜ್ಯ, ವಿಜ್ಞಾನ ವಿಭಾಗದ 9 ವಿದ್ಯಾರ್ಥಿಗಳಿಗೆ ಹೀಗೆ ಒಟ್ಟು 88 ಸಾಧಕರಿಗೆ ಶಾಲು ಹೊದಿಸಿ ಸನ್ಮಾನಿಸಿ, ಸ್ಮರಣಿಕೆಗಳನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮಕ್ಕೆ ಮೊದಲು ಶ್ರೀ ಲಕ್ಷ್ಮಿ ಕಳಾಕ್ಷೇತ್ರದ ವಿದ್ಯಾರ್ಥಿನಿಯರು ನೃತ್ಯ ಪ್ರದರ್ಶನ ಮಾಡಿದರು. ಶ್ರೀಮತಿ ಜಿ.ನಳಿನಿ ಪ್ರಾರ್ಥನೆ ಮಾಡಿದರು. ಬಳ್ಳಾರಿ ಕಲ್ಚರಲ್ ಆಕ್ಟಿವಿಟೀಸ್ ಅಸೋಸಿಯೇಷನ್‍ನ ಅಧ್ಯಕ್ಷರಾದ ಶೀಲಾ ಬ್ರಹ್ಮಯ್ಯನವರು ಪ್ರಸ್ತಾವಿಕ ನುಡಿಗಳೊಂದಿಗೆ ಸರ್ವರನ್ನು ಸ್ವಾಗತಿಸಿ, ವರದಿ ಮಂಡಿಸಿದರು. ಕಾರ್ಯದರ್ಶಿ ಎಸ್.ಯಶ್ವಂತ್‍ರಾಜ್ ರವರು ವಂದನಾರ್ಪಣೆ ಮಾಡಿದರು. ಕಾರ್ಯಕ್ರಮ ನಿರ್ವಹಣೆಯನ್ನು ಕೆ.ಬಿ.ಸಿದ್ದಲಿಂಗಪ್ಪ ಮತ್ತು ಎಸ್.ಸತ್ಯನಾರಾಯಣ ಮಾಡಿದರು. ಅಭಿಮಾನಿಗಳು ಶೀಲಾ ಬ್ರಹ್ಮಯ್ಯ ನವರು ರೂಪಿಸಿ ಯಶಸ್ವಿ ಕಾರ್ಯಕ್ರಮಕ್ಕೆ ಅವರನ್ನು ಸನ್ಮಾನಿಸಿ ಅಭಿನಂದಿಸಿದರು.