ದ್ವಿದಳ ಧಾನ್ಯಗಳ ಸಂಸ್ಕರಣಾ ಘಟಕಕ್ಕೆ ಕೆ.ಕೆ.ಆರ್.ಡಿ.ಬಿ. ವತಿಯಿಂದ 3 ಕೋಟಿ ರೂ.ಅನುದಾನ :ರೇವೂರ

ಕಲಬುರಗಿ:ಮಾ. 26 : ರೈತ ಕಲ್ಯಾಣಕ್ಕಾಗಿ ನಮ್ಮ ಸರಕಾರ ಸದಾ ಬದ್ದವಾಗಿದೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ದತ್ತಾತ್ರೇಯ ಸಿ ಪಾಟೀಲ್ ರೇವೂರು ಅವರು ಹೇಳಿದರು.
ಭಾನುವಾರದಂದು ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ, ಕಲಬುರಗಿ ( ಹಿಂದಿನ ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ) ರೈತರ ತರಬೇತಿ ಕೇಂದ್ರದ ಕಟ್ಟಡ ಹಾಗೂ ದ್ವಿದಳ ಧಾನ್ಯಗಳ ಸಂಸ್ಕರಣಾ ಘಟಕದ ಶಂಕು ಸ್ಥಾಪನೆ ನೇರವೇರಿಸಿ ಉದ್ಫಾಟಿಸಿ ಅವರು ಮಾತನಾಡಿದರು.
ದ್ವಿದಳ ಧಾನ್ಯಗಳ ಸಂಸ್ಕರಣಾ ಘಟಕಕ್ಕೆ ಕೆ.ಕೆ.ಆರ್.ಡಿ.ಬಿ. ವತಿಯಿಂದ 3 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ
ರೈತರ ಅನುಕೂಲಕ್ಕಾಗಿ ದ್ವಿದಳ ಧಾನ್ಯಗಳ ಸಂಸ್ಕರಣಾ ಘಟಕ್ಕೆ ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ದಿ ಪಡಿಸಲು ಇನ್ನೂ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.
ರೈತ ಉತ್ಪಾದಕರ ಸಂಸ್ಕೆಗಳು ಹಾಗೂ ಸಣ್ಣ ಉದ್ಯಮದಾರರುಗಳಿಗೆ ದ್ವಿದಳ ಧಾನ್ಯಗಳ ರಪ್ತು ಆಧಾರಿತ ಉತ್ಪಾದನೆ ಸಂಸ್ಕøಣೆ ಹಾಗೂ ರೈತರ ಆದಾಯವನ್ನು ದ್ವಿಗುಣಗೊಳಿಸುವುದು ಮತ್ತು ಜೀವನ ಮಟ್ಟ ಸುಧಾರಿಸುವ ಬಗ್ಗೆ ವಿವಿಧ ತರಬೇತಿಗಳನ್ನು ಏರ್ಪಡಿಸುವುದರ ಇದg ಮುಖ್ಯ ಉದ್ದೇಶವಾಗಿದೆ ಎಂದರು.
ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಬೆಳೆಯುವ ವಿಶಿಷ್ಟವಾದ ಭೌಗೋಳಿಕ ಸೂಚ್ಯಂಕ ಹೊಂದಿದ ತೊಗರಿ ಬೆಳೆಯನ್ನು ಭೀಮಾ ಪಲ್ಸ್‍ಸ್ ಬ್ರ್ಯಾಂಡ್ ನಡಿ ಮಾರಾಟ ಮಾಡಲು ಸರ್ಕಾರ ಘೋಷಣೆ ಮಾಡಿದೆ ನಮ್ಮ ಸರ್ಕಾರ ಡಬ್ಬಲ್ ಇಂಜನ್ ಸರ್ಕಾರ ಸಂಸ್ಕರಣಾ ಘಟಕ ಕಟ್ಟಡ ನಿರ್ಮಾಣಕ್ಕೆ ಬಜೆಟ್‍ನಲ್ಲಿ ಈಗಾಗಲೇ 10 ಕೋಟಿ ರೂ ಬಿಡುಗಡೆ ಮಾಡಿದ್ದಾರೆ ಕೇಂದ್ರ ಸರ್ಕಾರ 5 ರಿಂದ 6 ಕೋಟಿ ಕಲ್ಯಾಣ ಕರ್ನಾಟ ಬೋರ್ಡನಿಂದ 3 ಕೋಟಿ ರಾಜ್ಯ ಸರ್ಕಾರದಿಂದ 1 ಕೋಟಿ ಬಿಡುಗಡೆ ಮಾಡಿದೆ ಎಂದು ಹೇಳಿದರು.
ರೈತರ ಆದಾಯ ಎರಡು ಪಟ್ಟು ಹೆಚ್ಚಿಸುವುದರಲ್ಲಿ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋಧಿಜೀಯವರು ರೈತರಿಗಾಗಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಯೋಜನೆಗಳು ಜಾರಿಗೆ ತಂದಿದೆ. ಕಿಸಾನ್ ಸನ್ಮಾನ ಯೋಜನೆಯಡಿ ನೇರವಾಗಿ ರೈತರ ಆಕೌಂಟ್ ಬ್ಯಾಂಕ್ ಖಾತೆ ಜಮಾಮಾಡಲಾಗುತ್ತಿದೆ ಎಂದರು. ರೈತರ ಮನೆ ಬಾಗಿಲಿಗೆ ಮುಟ್ಟಿಸುವ ಕೆಲಸಗಳನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದರು.
ರೈತರ ಮಕ್ಕಳಿಗೆ ಹಾಗೂ ಕಾರ್ಮಿಕ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಧನ ಸಹಾಯ ನೀಡುತ್ತಿದ್ದೇವೆ. ಕೋಲ್ಡ್ ಸ್ಟೋರಜ್ ಸ್ಥಾಪಿಸುತ್ತಿದ್ದೇವೆ ಅವರಿಗೆ ಒಳ್ಳೆಯ ಬೆಲೆಯನ್ನು ಸಿಗುವ ಸಲುವಾಗಿ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದರು.
ಅದೇ ರೀತಿಯಾಗಿ ಜಫರಾಬಾದ ರಿಂಗ್ ರಸ್ತೆಯಲ್ಲಿ 5 ಎಕರೆ ಸ್ಥಳವನ್ನು ಖರೀದಿ ಮಾಡಿ ರೇಷ್ಮೆ ಮಾರುಕಟ್ಟೆ ಮಾಡುವುದಕ್ಕೆ ಸರ್ಕಾರ ಅನುದಾನ ನೀಡಿದೆ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾದ ಬೊಮ್ಮಾಯಿ ಅವರು ಈಗಾಗಲೇ ಅನುದಾನ ಬಿಡುಗಡೆ ಮಾಡಿದ್ದಾರೆ. ಎಂ.ಎಸ್.ಕೆ. ಮೀಲ್ ರಸ್ತೆಯಲ್ಲಿ ಕಣ್ಣಿ ಮಾರ್ಕೇಟ್ ಪಕ್ಕದಲ್ಲಿ ತರಕಾರಿ ಮಳಿಗೆಯ ಕಟ್ಟಡಗಳನ್ನು ನಿರ್ಮಾಣ ಮಾಡಲಗುತ್ತಿದೆ. ಹೇಳಿದರು.
ದ್ವಿದಳ ಧಾನ್ಯಗಳ ಸಂಸ್ಕರಣಾ ಘಟಕಕ್ಕೆ ಸರಕಾರದಿಂದ ರೂ. 4.44 ಕೋಟಿ ಮಂಜೂರಾತಿ ನೀಡಿರುತ್ತಾರೆ ಅದರಲ್ಲಿ ರೂ. 1.77 ಕೋಟಿ ಅನುದಾನ ಈಗಾಗಲೇ ಬಿಡುಗಡೆ ಮಾಡಿದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯ 3 ಕೋಟಿ ಅನುದಾನ ನೀಡಿರುತ್ತೇವೆ ಎಂದರು
ಭಾರತ ಸರ್ಕಾರದ APEDA ವಾಣಿಜ್ಯ ಇಲಾಖೆಯ ಡಾ. ಎಂ. ಅಂಗಮುತ್ತು ಅವರು ಮಾತನಾಡಿ, ತೊಗರಿ ಬೇಳೆ ಅಂತರಾಷ್ಟ್ರೀಯ ಮಟ್ಟದ ವ್ಯಾಪರ ಮಾಡುವ ಕುರಿತು ರೂಪುರೇಷಗಳ ಬಗ್ಗೆ ಮಾತನಾಡಿದರು
ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವದ್ಧಿ ಮಂಡಳಿ ನಿಯಮಿತ ವ್ಯವಸ್ಥಾಪಕ ನಿರ್ದೇಶಕ ಅಂತೋನಿ ಮರಿಯಾ ಇಮ್ಯಾನುಯಲ್, ಎಂ. ಅವರು ಮಾತನಾಡಿ, 2018ರಲ್ಲಿ ದ್ವಿದಳ ದಾನ್ಯಗಳ ಕಡಲೆ ಬೆಳೆಯುತ್ತಿರುವ ದ್ವಿದಳ ಮಂಡಳಿಯು ಮರು ನೇಮಕ ಮಾಡಲಾಗಿದೆ ದ್ವಿದಳ ಧಾನ್ಯಗಳ ರಫ್ತು ಆಧಾರಿತ ಉತ್ಪಾದನೆ ಸಂಸ್ಕರಣೆ ಹಾಗೂ ಆದಾಯವನ್ನು ದ್ವಿಗುಣಿಸಬೇಕೆಂದರು ಇದಕ್ಕಾಗಿ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತದೆ ಎಂದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಕಾರ್ಯದರ್ಶಿ ಅನಿರುದ್ಧ್ ಶ್ರಾವಣ ಅವರು ಮಾತನಾಡಿದರು.
ವೇದಿಕೆ ಮೇಲೆ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷ ಧರ್ಮಣ್ಣ ದೊಡ್ಡಮನಿ, ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ನೀರಾವರಿ ಯೋಜನೆಗಳ ವಲಯ ಹರ್ಷವರ್ಧನ ಗುಂಡಪ್ಪ ಗುಗಳೆ, ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ ನಿರ್ದೇಶಕ ಪ್ರವೀಣ ತೆಗನೂರ, ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿರ್ದೇಶಕರು ಪ್ರದೀಪ ಕಾಡಾದಿ, ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ ರಾಜಶೇಖರ ಗೌನಳ್ಳಿ (ಬಳಬಟ್ಟಿ) ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಅವಿನಾಶ ಕುಲಕರ್ಣಿ, ರಾಯಚೂರ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ. ಎಂ. ಹನುಂಮತಪ್ಪ ಧಾರವಾಡ ನಿವೃತ ಕುಲಪತಿ ಸಿ.ಎ. ಪಾಟೀಲ, ಬೆಂಗಳೂರು APEDA ಪ್ರಧಾನ ವ್ಯವಸ್ಥಾಪಕ ಆರ್. ರವೀಂದ್ರ, ಕೃಷಿ ಸಮಾಜ ಜಿಲ್ಲಾ ಅಧ್ಯಕ್ಷ ಸಿದ್ರಾಮಪ್ಪ ಧಂಗಾಪೂರ, ರೈತ ಮುಖಂಡರು ಉಪ ಕೃಷಿನಿರ್ದೇಶಕಿ ಅನುಸೂಯ ಹೂಗಾರ ಸೇರಿದಂತೆ ಗಣ್ಯರು ಸಮಾರಂಭದಲ್ಲಿ ಭಾಗವಹಿಸಿದರು.
ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ನಿಯಮಿತ ಅಧ್ಯಕ್ಷರು ವಿದ್ಯಾಸಾಗರ ಎ. ಶಹಾಬಾದಿ ಸ್ವಾಗತಿಸಿದರು. ಸಹಾಯಕ ಕೃಷಿ ನಿರ್ದೇಶಕಿ (ಕೇಂದ್ರ ಮದ್ದುಮತಿ ಡಿ ಪಾಟೀಲ ಕಾರ್ಯಕ್ರಮ ನಿರೂಪಿಸಿದರು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಸಮ್ಮದ್ ಪಟೇಲ್ ವಂದಿಸಿದರು.