ದ್ವಿತೀಯ ವರ್ಷ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

ರಾಯಚೂರು.ಜ.೦೧- ತಾರಾನಾಥ್ ಶಿಕ್ಷಣ ಸಂಸ್ಥೆಯ ಎಲ್‌ವಿಡಿ ಮಹಾವಿದ್ಯಾಲಯದಿಂದ ಬಸವರಾಜ್ ಸ್ವಾಮಿ ದ್ವಿತೀಯ ದರ್ಜೆ ಸಹಾಯಕರು ಇವರಿಗೆ ಬೀಳ್ಕೊಡುವ ಸಮಾರಂಭ.
ಇಂದು ರಾಯಚೂರು ನಗರದ ಪ್ರತಿಷ್ಠಿತ ತಾರಾನಾಥ ಶಿಕ್ಷಣ ಸಂಸ್ಥೆಯ ಎಲ್‌ವಿಡಿ ಮಹಾವಿದ್ಯಾಲಯದಲ್ಲಿ ನಿವೃತ್ತಿಯನ್ನು ಹೊಂದುತ್ತಿರುವ ಬಸವರಾಜ ಸ್ವಾಮಿ, ದ್ವಿತೀಯ ದರ್ಜೆ ಸಹಾಯಕರು ಇವರಿಗೆ ಬೀಳ್ಕೊಡುವ ಸಮಾರಂಭವನ್ನು ಆಯೋಜಿಸಲಾಗಿತ್ತು.
ಸರಳ ಸಜ್ಜನಿಕೆಯ ವ್ಯಕ್ತಿತ್ವವುಳ್ಳ ಬಸವರಾಜ್ ಸ್ವಾಮಿ ಇವರು ಪತ್ನಿ ಚಂದ್ರಕಲಾ ಹಾಗೂ ಇಬ್ಬರು ಹೆಣ್ಣು ಮಕ್ಕಳು ಅಳಿಯ ಹಾಗೂ ಒಬ್ಬ ಮಗ ಸೊಸೆ ,ಮೊಮ್ಮಕ್ಕಳು ಇವರೊಂದಿಗೆ ತೃಪ್ತಿಕರ ಜೀವನ ನಡೆಸುತ್ತಾ ೧೯೮೩ ರಿಂದ ೨೦೨೨ ರವರೆಗೆ ಸುಧೀರ್ಘವಾಗಿ ೩೯ ವರ್ಷಗಳ ಕಾಲ ನಡೆಸಿ ಇವರು ತಮ್ಮ ಅಮೂಲ್ಯವಾದ ಸಮಯವನ್ನು ತಾರಾನಾಥ್ ಶಿಕ್ಷಣ ಸಂಸ್ಥೆಯ ಸಂಚಾಲಿತ ಕಾಲೇಜುಗಳಾದ ತಾರಾನಾಥ್ ಶಿಕ್ಷಣ ಸಂಸ್ಥೆಯ ಕಚೇರಿಯಲ್ಲಿ, ಕಾನೂನು ಮಹಾವಿದ್ಯಾಲಯದಲ್ಲಿ, ಬಿ ಆರ್ ಬಿ ಮಹಾವಿದ್ಯಾಲಯದಲ್ಲಿ, ಎಸ್‌ಆರ್‌ಪಿಎಸ್ ಪಿಯುಸಿ ಕಾಲೇಜಿನಲ್ಲಿ ಹಾಗೂ ಎಲ್‌ವಿಡಿ ಮಹಾವಿದ್ಯಾಲಯಗಳಲ್ಲಿ ಅತ್ಯುತ್ತಮ ಸೇವೆಯನ್ನು ಸಲ್ಲಿಸಿರುವ ಇವರ ಕಾರ್ಯ ಶ್ಲಾಘನೀಯ.
ತಾರಾನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಪಾರಸಮಲ್ ಸುಖಾಣಿ, ಕಾರ್ಯದರ್ಶಿಗಳಾದ ನಂದಾಪುರ ಶ್ರೀನಿವಾಸರಾವ್ ಹಾಗೂ ಆಡಳಿತ ಮಂಡಳಿಯ ಚೇರಮನ್‌ರಾದ ಪವನ್ ಕುಮಾರ್ ಸುಖಾಣಿ, ಕಾರ್ಯದರ್ಶಿಗಳಾದ ಧವಲ ಹಸಮುಖಲಾಲ್ ಹಾಗೂ ಸರ್ವ ಸದಸ್ಯರುಗಳು ಅಭಿನಂದನಾ ಪತ್ರವನ್ನು ನೀಡುವ ಮೂಲಕ ಶುಭ ಹಾರೈಸಿದರು ಮತ್ತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯರಾದ ಡಾ.ವೆಂಕಟೇಶ ಬಿ ದೇವರು ಇವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಪುರುಷೋತ್ತಮ ಆಚಾರ್ ಇವರು ಪ್ರಾರ್ಥನೆ ಗೀತೆ ಹಾಡಿದರು. ಐಕ್ಯೂ ಎಸಿ ಸಂಚಾಲಕರಾದ ಡಾ ಜಯತೀರ್ಥ ಎನ್‌ಎಸ್ ಇವರು ಸ್ವಾಗತ ಗೀತೆ ನೇರವೇರಿಸಿದರು.
ನಂತರ ಕಾಲೇಜಿನ ಸಿಬ್ಬಂದಿಯ ಪರವಾಗಿ ಬಸವರಾಜ್ ಸ್ವಾಮಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಸವರಾಜ್ ಸ್ವಾಮಿಯವರು ೩೯ ವರ್ಷಗಳ ಸುದೀರ್ಘ ಸೇವೆಯನ್ನು ಸಲ್ಲಿಸಿದ ನಾನು ಈಗ ನಿವೃತ್ತಿಯನ್ನು ಹೊಂದುತ್ತಿದ್ದು, ತಾರಾನಾಥರ ಆಶೀರ್ವಾದ, ಅಷ್ಟೇ ಅಲ್ಲ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳಿಗೆ ಬೋಧಕ ಬೋಧಕೇತರ ಸಿಬ್ಬಂದಿಯ ಸರ್ವ ಸದಸ್ಯರಿಗೂ ಧನ್ಯವಾದಗಳು ತಿಳಿಸಿ, ತಾರಾನಾಥ್ ಶಿಕ್ಷಣ ಸಂಸ್ಥೆಗೆ ಯಾವತ್ತೂ ಚಿರಋಣಿ ಎಂದು ಹೇಳುತ್ತಾ ಭಾವುಕರಾಗಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದರು.
ರಾಘವೇಂದ್ರ ಕುಲಕರ್ಣಿ, ಸುಪರಿಂಟೆಂಡೆಂಟ್ ಇವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಿಎನ್ ರಾಘವೇಂದ್ರ ಇವರು ಭಾವಗೀತೆ ಹಾಡುವ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.