ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

ಕಲಬುರಗಿ:ಜ.13: ಮಾತೋಶ್ರೀ ಕಲ್ಯಾಣೀ ಸ್ಮಾರಕ ಶಿಕ್ಷಣ ಸಂಸ್ಥೆ (ರಿ)ಯ ಅಡಿಯಲ್ಲಿ ನಡೆಯುತ್ತಿರುವ ಶ್ರೀಗುರು ಸ್ವತಂತ್ರ ವಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ 2023-24ನೇ ಸಾಲಿನ ಪಿ.ಯು.ಸಿ. ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭವನ್ನು ನೀಲಾಂಬಿಕಾ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಪದವಿಪೂರ್ವ ಶಿಕ್ಷಣ ಇಲಾಖೆ ಕಲಬುರಗಿ, ಉಪನಿರ್ದೇಶಕರಾದ ಪೆÇ್ರ. ಶಿವಶರಣಪ್ಪ ಮುಳೆಗಾಂವ್ ಅವರು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ ಶ್ರೀಗುರು ಕಾಲೇಜಿನ ಸಂಸ್ಥಾಪಕರಾದ ಪೆÇ್ರೀ. ಎ.ವೈ. ನಾಯ್ಕ ಸರ್ ಅವರು ಶ್ರೀ ಗುರು ಪ.ಪೂ.ಕಾಲೇಜನ್ನು ಆರಂಭಿಸಿರುವುದರೊಂದಿಗೆ, ಶೈಕ್ಷಣಿಕ-ಸ್ಪರ್ಧಾತ್ಮಕ ಯುಗದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಶೈಕ್ಷಣಿಕ ಭದ್ರ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ. ಅವರ ನಂತರ ಸಂಸ್ಥೆಯನ್ನು ಶ್ರೀ ನಿತಿನ ನಾಯ್ಕ ಅವರು ಮುನ್ನಡೆಸಿಕೊಂಡು ಹೋಗುತ್ತಿರುವುದು ಹೆಮ್ಮೆಯ ಸಂಗತಿ.
ಭವಿಷ್ಯದ ನಾಗರೀಕರಾದ ನೀವು ದ್ವಿತೀಯ ಪಿ.ಯು.ಸಿ. ಪಾಸಾಗುವುದು ಸುಲಭ… ಆದರೆ ಜೀವನದ ಪರೀಕ್ಷೆಯಲ್ಲಿ ಪಾಸಾಗುವುದು ಕಷ್ಟ…!, ಯಾರು ಧನಾತ್ಮಕವಾದ ಕೌಶಲ್ಯವನ್ನು ಅಳವಡಿಸಿಕೊಂಡು ಮುಂದುವರೆಯುತ್ತಾರೆಯೋ ಅವರು ಜೀವನದ ಪರೀಕ್ಷೆಯಲ್ಲಿಯೂ ಸಹ ಪಾಸಾಗುತ್ತಾರೆ.
ಮುಂದುವರೆದು ಮಾತನಾಡುತ್ತಾ, ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡುವ ಮೂಲಕ ಭವ್ಯ ಭಾರತ ನಿರ್ಮಾಣದಲ್ಲಿ ನೀವೆಲ್ಲರೂ ಪಾಲ್ಗೊಳ್ಳಿರಿ ಎಂದು ಕರೆಯಿತ್ತರು. ಸಾಧನೆಯ ಹಾದಿಯಲ್ಲಿ ಶಕ್ತಿ ಹೀನರಾದವರಿಗೆ ದೇವರೂ ಸಹ ಕೈಹಿಡಿಯುವುದಿಲ್ಲ, ಯಾರೂ ಶಕ್ತಿವಂತರಾಗಿರುತ್ತಾರೋ ಅವರು ಯಶಸ್ಸು ಸಾಧಿಸುತ್ತಾರೆ, ಅದಕ್ಕಾಗಿ ಶಕ್ತಿಯೇ ಜೀವನ ಎಂಬ ತತ್ವವನ್ನು ಅರಿತು ಮುನ್ನುಗ್ಗಬೇಕು ಹಾಗೂ ತಂದೆ ತಾಯಿಗಳ ಶ್ರಮ ಮತ್ತು ತ್ಯಾಗಕ್ಕೆ ಗೌರವ ಕೊಡಬೇಕೆಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶ್ರೀ ವಿದ್ಯಾಸಾಗರ ಎಂ.ಗೋಗಿ, ಅವರು ಮಾತನಾಡುತ್ತಾ ನೀವು ಕಲಿತ ಜ್ಞಾನ/ವಿದ್ಯೆಯನ್ನು ಸಂದರ್ಭಕ್ಕನುಸಾರವಾಗಿ ಉಪಯೋಗಿಸಿಕೊಂಡು ನೀವು ಉತ್ತಮ ಬದುಕು ರೂಪಿಸಿಕೊಂಡು, ನಿಮ್ಮ ತಂದೆ ತಾಯಿಗಳ ಹಾಗೂ ನಿಮ್ಮ ಕನಸು ನನಸಾಗಿಸಲು ಸದಾ ಸ್ಪರ್ಧಾತ್ಮಕ ಪ್ರಯತ್ನ ಮಾಡಬೇಕೆಂದು ನುಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ನಳಿನಿ ಎ.ನಾಯ್ಕ ಅವರು ವಹಿಸಿ, ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳಾದ ನೀವು ಏಕಾಗ್ರತೆಯಿಂದ ಓದಿ, ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ತರಬೇಕು. ಅದಕ್ಕೆ ಪೂರಕವಾದ ಎಲ್ಲಾ ರೀತಿಯ ಶೈಕ್ಷಣಿಕ ಸಹಕಾರ ಸೌಲಭ್ಯ ನೀಡುವುದಾಗಿ ಭರವಸೆಯಿತ್ತರು.
ಕಾರ್ಯದರ್ಶಿಗಳಾದ ನಿತಿನ್ ಎ.ನಾಯ್ಕ, ಆಡಳಿತಾಧಿಕಾರಿಗಳಾದ ನೆಹಾ ನಿತಿನ ನಾಯ್ಕ, ಆಡಳಿತ ಮಂಡಳಿಯ ಸದಸ್ಯರಾದ ಗುರುರಾಜ ಎ.ನಾಯ್ಕ ಹಾಗೂ ಭೋಧಕ-ಭೋಧಕೇತರ ಸಿಬ್ಬಂದಿಗಳು ವಿದ್ಯಾರ್ಥಿಗಳು, ಪಾಲಕರು/ಪೆÇೀಷಕರು ಪಾಲ್ಗೊಂಡಿದ್ದರು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು.