ದ್ವಿತೀಯ ಪಿ.ಯು.ಸಿ. ಫಲಿತಾಂಶ ಸಂಡೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದಎಸ್.ವಿ. ನಾನಾವಟೆ ಪಿ.ಯು. ಕಾಲೇಜ್


ಸಂಜೆವಾಣಿ ವಾರ್ತೆ
ಸಂಡೂರು ಏ:22 : 2023ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು. ಪರೀಕ್ಷೆಯಲ್ಲಿ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಎಸ್.ವಿ.ನಾನಾವಟೆ ಪಿ.ಯು. ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಮೆಹತಾಬ್ ಬಿ ಎನ್ನುವ ವಿದ್ಯಾರ್ಥಿನಿಯು 600ಕ್ಕೆ 573 ಅಂಕಗಳನ್ನು ಪಡೆದು (95.50%) ಪಡೆಯುವುದರ ಮೂಲಕ ತಾಲೂಕಿಗೆ ಪ್ರಥಮ ಸ್ಥಾನ ವನ್ನು ಪಡೆದಿದ್ದಾಳೆ. ಅದೇ ರೀತಿ ವಾಣಿಜ್ಯ ವಿಭಾಗದಲ್ಲಿ ಪ್ರಭಂಜನ್ ಇ ಎನ್ನುವ ವಿದ್ಯಾರ್ಥಿಯು 600ಕ್ಕೆ 586 ಅಂಕಗಳನ್ನು ಪಡೆದು (97.66%) ಪಡೆಯುವುದರ ಮೂಲಕ ತಾಲೂಕಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾನೆ. ಎಂದು ಸಂಸ್ಥೆಯ ಕಾರ್ಯದರ್ಶಿಗಳಾದ ಚಿದಂಬರ್ ಎಸ್.ನಾನಾವಟೆ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಕುಮಾರ್ ಎಸ್.ನಾನಾವಟೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂದುವರೆದು ಅವರು ಪ್ರತಿ ವರ್ಷದಂತೆ ಈ ವರ್ಷವೂ ಸಹ ನಮ್ಮ ಕಾಲೇಜಿನ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಬಂದಿರುವುದು ಹರ್ಷವೆನಿಸುತ್ತದೆ. ಇದಕ್ಕೆ ಕಾರಣರಾದ ಎರಡು ವಿಭಾಗದ ಉಪನ್ಯಾಸಕ ಹಾಗೂ ಉಪನ್ಯಾಸಕಿಯರಿಗೂ ಮತ್ತು ಪ್ರಾಮಾಣಿಕವಾಗಿ ವಿದ್ಯಾಭ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಾಲೂಕಿಗೆ ಪ್ರಥಮ ಸ್ಥಾನವನ್ನು ತರುವುದರ ಜೊತೆಗೆ ನಮ್ಮ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಇವರೆಲ್ಲರಿಗೂ ಧನ್ಯವಾದಗಳು ಎಂದು ಹರ್ಷದಿಂದ ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ವಿಜ್ಞಾನ ವಿಭಾಗದ ಉಪಪ್ರಾಚಾರ್ಯರಾದ ಜಯಪ್ರಕಾಶ್ ಎಸ್.ಎನ್.ರವರು ಮಾತನಾಡುತ್ತಾ.. ಒಟ್ಟು 101 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗಿದ್ದು ಇದರಲ್ಲಿ ಅಗ್ರಶ್ರೇಣಿಯಲ್ಲಿ 36 ಪ್ರಥಮ ಶ್ರೇಣಿಯಲ್ಲಿ 44, ದ್ವಿತೀಯ ಶ್ರೇಣಿಯಲ್ಲಿ 12, ತೃತೀಯ ಶ್ರೇಣಿಯಲ್ಲಿ 01 ಮತ್ತು 08 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು ವಿಜ್ಞಾನ ವಿಭಾಗದ ಕಾಲೇಜಿನ ಶೇ. ಫಲಿತಾಂಶ 92.07% ಆಗಿರುತ್ತದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ವಾಣಿಜ್ಯ ವಿಭಾಗದ ಉಪ ಪ್ರಾಚಾರ್ಯರಾದ ಆನಂದ ರಾವ್ ಎಸ್. ಮಾತನಾಡುತ್ತಾ ಒಟ್ಟು 62 ವಿದ್ಯಾರ್ಥಿಗಳು ಹಾಜರಾಗಿದ್ದು. ಇದರಲ್ಲಿ ಅಗ್ರಶ್ರೇಣಿಯಲ್ಲಿ 12, ಪ್ರಥಮಶ್ರೇಣಿಯಲ್ಲಿ 28, ದ್ವಿತೀಯ ಶ್ರೇಣಿಯಲ್ಲಿ 12, ತೃತೀಯ ಶ್ರೇಣಿಯಲ್ಲಿ 3 ವಿದ್ಯಾರ್ಥಿಗಳು ಹಾಗೂ 7 ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು ವಾಣಿಜ್ಯ ವಿಭಾಗದ ಕಾಲೇಜಿನ ಶೇಕಡಾ ಫಲಿತಾಂಶ 88.70% ಆಗಿರುತ್ತದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕ/ಕಿಯರು ಹಾಗೂ ವಿದ್ಯಾಥಿಗಳಿಗೆ ಸಿಹಿ ತಿನಿಸಿ ಸಂಭ್ರಮಿಸಿದರು ಹಾಗೂ ಆಡಳಿತ ಮಂಡಳಿಯವರು ಅಭಿನಂದನೆಗಳನ್ನು ತಿಳಿಸಿದರು.