ದ್ವಿತೀಯ ಪಿ.ಯು.ಸಿ ಫಲಿತಾಂಶ: ಎಕ್ಸಲೆಂಟ್ ವಿದ್ಯಾರ್ಥಿಗಳ ಸಾಧನೆ

ವಿಜಯಪುರ,ಏ.11:ಪ್ರಸಕ್ತ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ನಗರದ ಎಕ್ಸಲೆಂಟ್ ಪಿ. ಯು. ವಿಜ್ಞಾನ ಕಾಲೇಜಿನ ಫÀಲಿತಾಂಶ ಶೇ. 99.83 ರಷ್ಟಾಗಿದೆ. ಪರೀಕ್ಷೆಗೆ ಕುಳಿತ 602 ವಿದ್ಯಾರ್ಥಿಗಳಲ್ಲಿ 306 ತೇರ್ಗಡೆಯಾಗಿದ್ದಾರೆ. ಶೇ 90 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರೆ. ಈ ಪೈಕಿ 148 ಡಿಸ್ಟಿಂಕ್ಷನ್, 145 ಪ್ರಥಮ ಹಾಗೂ ಇಬ್ಬರು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ. ಪ್ರತೀಕ್ಷಾ ಜೆ. ವಾಲಿ ಹಾಗೂ ಸ್ಮಿತಾ ಎಮ್. ಅವಟಿ 600ಕ್ಕೆ 592ಅಂಕಗಳನ್ನು ಪಡೆದು ರಾಜ್ಯಕ್ಕೆ 7ನೇ ರ್ಯಾಂಕ್ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸ್ನೇಹಾ ಯಕ್ಕುಂಡಿ 591 ಅಂಕಗಳನ್ನು ಪಡೆದು ರಾಜ್ಯಕ್ಕೆ 8ನೇ ರ್ಯಾಂಕ್ ಹಾಗೂ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾಳೆ. ಕಿರಣಕುಮಾರ ಬೆಳಗಲಿ (588) ಹಾಗೂ ಪ್ರಜ್ವಲ್ ಸುರಗಿಹಾಳ (588) ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ಸಚಿನ ಬಜಂತ್ರಿ (586), ತೇಜಸ್ವಿನಿ ಸೋಲಾಪುರ (585), ಪೃಥ್ವಿ ಬಿರಾದಾರ (585),ಲಕ್ಷ್ಮಣ ನಾಯಕ (584), ಪೂಜಾ ಅವರಾದಿ(583), ಚೈತ್ರಾ ಹೆಬ್ಬಿ (583), ಭವಾನಿ ತಿಪ್ಪಣ್ಣವರ (583), ಸಿಂಧು ಮಾಲಿಪಾಟೀಲ (582), ಪಲ್ಲವಿ ಬಾಗೇವಾಡಿ (581), ರಾಮಲಿಂಗ ಪೂಜಾರಿ (581), ಆಕಾಶ ಚೌರಿ (581), ಪ್ರಭುಗೌಡ ಪಾಟೀಲ (581), ಅರ್ಪಿತಾ ಪತ್ತಾರ (581), ವರದಾ ನೀರಮಣಿಗಾರ (581), ಪೂರ್ಣಿಮಾ ಭೈರಗೊಂಡ, (580), ಶ್ರವಣಕುಮಾರ ಮಠಪತಿ (580), ಅಮೋಘ ಹೊನ್ನುಂಗರ (579), ಮುತ್ತು ಹೊರಪೇಟಿ (579), ರಶ್ಮಿ ತೆಲಸಂಗ (579), ಸಂಗೀತಾ ಕುಂಬಾರ (579) ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಜೀವಶಾಸ್ತ್ರದಲ್ಲಿ 100, ಗಣಿತದಲ್ಲಿ 34, ಗಣಕ ವಿಜ್ಞಾನದಲ್ಲಿ 23, ರಸಾಯನ ಶಾಸ್ತ್ರದಲ್ಲಿ 16, ಭೌತಶಾಸ್ತ್ರದಲ್ಲಿ 9 ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ಪಡೆದು ಅದ್ಭುತ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಚೇರಮನ್ ಬಸವರಾಜ ಕೌಲಗಿ, ಪ್ರಧಾನ ಕಾರ್ಯದರ್ಶಿ ಶಿವಾನಂದ ಕೆಲೂರ, ಪ್ರಾಚಾರ್ಯ ಶ್ರೀಕಾಂತ ಕೆ.ಎಸ್., ಆಡಳಿತಾಧಿಕಾರಿ ಪರಶುರಾಮ ಭಾವಿಕಟ್ಟಿ ಹಾಗೂ ಸಿಬ್ಬಂದಿ ವರ್ಗ ಹರ್ಷ ವ್ಯಕ್ತ ಪಡಿಸಿದ್ದಾರೆ.