ದ್ವಿತೀಯ ಪಿ.ಯು.ಸಿ ಪ್ರಾಯೋಗಿಕ ಪರೀಕ್ಷೆಗಳ ಮುಂದೂಡಿಕೆ


ಧಾರವಾಡ,ಎ.26: ಕೋರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮತ್ತು ಪಾಲಕರ, ವಿದ್ಯಾರ್ಥಿಗಳ, ಹಾಗೂ ಉಪನ್ಯಾಸಕರ ಅಲ್ಲದೆ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯವರು ಮನವಿ ಮೇರೆಗೆ ಕಾಲೇಜುಮಟ್ಟದಲ್ಲಿ ಇದೇ ದಿರಂದು ನಡೆಯಬೇಕಿದ ಪ್ರಾಯೋಗಿಕ ಪರೀಕ್ಷೆಗಳನ್ನು ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಮುಂದೂಡಿ ಆದೇಶವನ್ನು ಹೊರಡಿಸಿದ್ದಾರೆ ಎಂದು ವಿಧಾನ ಪರಿಷತ್ತ ಸದಸ್ಯರಾದ ಎಸ್.ವ್ಹಿ ಸಂಕನೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಲೇಜುಗಳಲ್ಲಿ ನಡೆಯುವ ಪ್ರಾಯೋಗಿಕ ಪರೀಕ್ಷಗಳನ್ನು 2020-21 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪರೀಕ್ಷೆಗಳನ್ನು ಆಯಾ ಕಾಲೇಜು ಹಂತದಲ್ಲೆ ತಾತ್ವಿಕ ಪರೀಕ್ಷೆ ಮುಗಿದ ಎರಡು ದಿನಗಳ ನಂತರ ಪ್ರಾರಂಭಿಸಲು ಆದೇಶಿಸಿದ್ದಾರೆ.