ದ್ವಿತೀಯ ಪಿಯು ಫಲಿತಾಂಶವಾಣಿಜ್ಯ ವಿಭಾಗದಲ್ಲಿ ಬೆಸ್ಟ್ ಕಾಲೇಜಿಗೆ 9ನೇ ಱ್ಯಾಂಕ್


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.22:  ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ (ಬೆಸ್ಟ್) ಬಳ್ಳಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಪಡೆದುಕೊಂಡಿರುತ್ತಾರೆ. ಇದರಲ್ಲಿ 289 ಡಿಸ್ಟಿಂಕ್ಷನ್,  203 ಪ್ರಥಮ ದರ್ಜೆ ಮತ್ತು 52 ದ್ವಿತೀಯ ದರ್ಜೆ ಹೊಂದಿರುತ್ತಾರೆ. ವಿಜ್ಞಾನ ವಿಭಾಗದಲ್ಲಿ ಸ್ನೇಹ .ಜೆ 585/600 (ರಾಜ್ಯ ಮಟ್ಟದಲ್ಲಿ 11ನೇ ರ್ಯಾಂಕ್), ಅಕ್ಷತಾ- 580, ಹರೀಶ್ ಸಜ್ಜನ್- 578, ವಿಕಾಸ್-577, ಅರ್ಪಿತಾ ಎಸ್-577, ಹಾರಿಕ ಎಸ್-577 , ಹಾಗೂ ವಾಣಿಜ್ಯ ವಿಭಾಗದಲ್ಲಿ ಹನುಮೇಶ್.ಎ 589/600(ರಾಜ್ಯಮಟ್ಟದಲ್ಲಿ 9ನೇ ರ್ಯಾಂಕ್), ಉದಯ ರಾಘವೇಂದ್ರ-568, ಬಿ ಸಾಯಿ ಸಂಕೇತ್-567 ಅತಿಹೆಚ್ಚು ಅಂಕಗಳನ್ನು ಪಡೆದುಕೊಂಡು ಅತ್ಯುತ್ತಮ ಪ್ರತಿಭೆ ತೋರಿಸಿದ್ದಾರೆ, ಗಣಕ ವಿಜ್ಞಾನದಲ್ಲಿ 21 ವಿದ್ಯಾರ್ಥಿಗಳು, ಗಣಿತಶಾಸ್ತ್ರದಲ್ಲಿ 05, ಭೌತಶಾಸ್ತ್ರದಲ್ಲಿ 03, ರಸಾಯನಶಾಸ್ತ್ರದಲ್ಲಿ 03, ಹಿಂದಿಯಲ್ಲಿ 02, ಸಂಸ್ಕೃತದಲ್ಲಿ 04, ಲೆಕ್ಕಶಾಸ್ತ್ರದಲ್ಲಿ 02, ಅರ್ಥಶಾಸ್ತ್ರ 02, ವ್ಯವಹಾರ ಅಧ್ಯಯನ 02, ಇಷ್ಟು ವಿದ್ಯಾರ್ಥಿಗಳು 100 ಕ್ಕೆ 100 ಅಂಕಗಳನ್ನು ಗಳಿಸಿರುತ್ತಾರೆ ಎಂದು ಕಾಲೇಜಿನ ಪ್ರಾಚಾರ್ಯರಾದ ಕೆ. ವೆಂಕಟೇಶ್ವರರಾವ್ ತಿಳಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳನ್ನು ಬೆಸ್ಟ್ ಸಂಸ್ಥೆಯ ಅಧ್ಯಕ್ಷರಾದ ಕೋನಂಕಿ ರಾಮಪ್ಪನವರು ಹಾಗೂ ಉಪಾಧ್ಯಕ್ಷರಾದ ಕೋನಂಕಿ ತಿಲಕ್‍ಕುಮಾರ್, ಕಾರ್ಯದರ್ಶಿಗಳಾದ  ಮನ್ನೆ ಶ್ರೀನಿವಾಸುಲು, ಕಾಲೇಜು ಪ್ರಾಚಾರ್ಯರಾದ ಕೆ. ವೆಂಕಟೇಶ್ವರರಾವ್, ಉಪ ಪ್ರಾಚಾರ್ಯರಾದ ಜಿ. ಶ್ರೀನಿವಾಸರೆಡ್ಡಿ ಮತ್ತು ಸಿಬ್ಬಂದಿವರ್ಗದವರು ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.