ದ್ವಿತೀಯ ಪಿಯು ಪರೀಕ್ಷೆ 10 ಡಿಸ್ಟಿಕ್ಷನ್, 30 ಪ್ರಥಮ ಸ್ಥಾನ

ಜೇವರ್ಗಿ ; ನವಭಾರತ ಕಾಲೇಜಿಗೆ ಶೇ. 96.75 ಫಲಿತಾಂಶ
ಕಲಬುರಗಿ ; ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಶಹಾಪೂರ ಮುಖ್ಯರಸ್ತೆಯಲ್ಲಿರುವ ಆಲ್-ನೂರ್ ಎಜುಕೇಷನ್ ಮತ್ತು ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿರುವ ನವಭಾರತ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮತ್ತು ಆಟ್ರ್ಸ್ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 98.75 ಫಲಿತಾಂಶದಿಂದ ಅಪೂರ್ವ ದಾಖಲೆ ನಿರ್ಮಿಸಿದೆ.
ಈ ಬಾರಿ 10 ವಿದ್ಯಾರ್ಥಿಗಳು ಡಿಸ್ಟಿಕ್ಷನ್, 30 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 3 ವಿದ್ಯಾರ್ಥಿಗಳು ದ್ವೀತಿಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕಾಲೇಜು ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯ ಮುಖ್ಯಸ್ಥರು ಹಾಗೂ ಕಾಲೇಜಿನ ಸಿಬ್ಬಂದಿ ವರ್ಗದ ವೃಂದದವರು ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿಗಳ ಮುಂದಿನ ವಿದ್ಯಾಭ್ಯಾಸ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದರು.
ನಮ್ಮ ಹುಡುಗ ಪ್ರಾಥಮಿಕ ಶಿಕ್ಷಣವನ್ನು ಕನ್ನಡ
ಮಾಧ್ಯಮದಲ್ಲಿ ನಮ್ಮೂರಿನ ಸರಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ್ದನು. ಹೇಳುಳುವಷ್ಟು ಓದುವುದರಲ್ಲಿ ಅಷ್ಟೇನು ಪ್ರತಿಭಾವಂತ ಇರಲಿಲ್ಲ. ಆದರೆ, ಮುಂದಿನ ವಿದ್ಯಾಭ್ಯಾಸಕ್ಕಾಗಿ ನವಭಾರತ ಕಾಲೇಜಿನ ಶಿಕ್ಷಣ ಸೂಕ್ತವಾಗಿದೆ ಎಂದು ಕೇಳಿದ್ದೇ. ನಾನು ನನ್ನ ಮಗನಿಗೂ ಕೂಡಾ ದ್ವೀತಿಯ ವಿಜ್ಞಾನ ವಿಭಾಗದಲ್ಲಿ ಸೇರಿಸಿದೆ. ಕಾಲೇಜಿನ ನುರಿತ ಎಲ್ಲಾ ಪ್ರಾಚಾರ್ಯರ ಶ್ರಮ ಹಾಗೂ ನನ್ನ ಮಗನ ಶ್ರದ್ಧೆಯಿಂದ ಅವನು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಲು ಸಾದ್ಯವಾಗಿದೆ. ನಮ್ಮಂಥ ಮದ್ಯಮ ವರ್ಗದ ಕುಟುಂಬದ ಮಕ್ಕಳಿಗೆ ಉತ್ತಮ, ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಕಾಲೇಜಿನ ಆಡಳಿತ ಮಂಡಳಿ ಹಾಗೂ ಸರ್ವ ಪ್ರಾಚಾರ್ಯರ ವೃಂದಕ್ಕೆ ಕೃತಜ್ಞತೆಗಳು ಸಲ್ಲಿಸುತ್ತೆನೆ

  • ಶಂಕರ್ ಡಿ. ತಳಕೇರಿ
    ಪಾಲಕರು, ಚಿನಮಳ್ಳಿ.

ನಮ್ಮ ಕಾಲೇಜಿನಲ್ಲಿ ಸೇರುವ ಪ್ರತಿಯೊಬ್ಬ ವಿದ್ಯಾರ್ಥಿಗಳ ಮನಸ್ಸಲ್ಲಿರುವ ಭಯವನ್ನು ತೆಗೆದುಹಾಕುವ ಮೂಲಕ ಶ್ರದ್ಧೆಯಿಂದ ಓದುವುದು ಹವ್ಯಾಸ ಬೆಳೆಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಲಹೆ ನೀಡುತ್ತೇವೆ. ಯಾಕೆಂದರೆ, ನಮ್ಮ ಕಾಲೇಜು ಸೇರುವ ಪ್ರತಿಶತ ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿ ಓದಿ ಬಂದಿರುತ್ತಾರೆ.ಅದಕ್ಕಾಗಿ, ಅವರಿಗೆ ಅರ್ಥವಾಗುವಂತೆ ಎಲ್ಲಾ ಭಾಷೆಯಲ್ಲಿ ಪಾಠವನ್ನು ಅನುವಾದ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಓದಲು ಸಹಕಾರಿಯಾಗಿದೆ. ವಿದ್ಯಾರ್ಥಿಗಳು ಸಹ ಶ್ರದ್ಧೆ, ಭಕ್ತಿಯಿಂದ ಹಗಲು ರಾತ್ರಿ ಎನ್ನದೆ ಓದಿ ಸತತ ಪ್ರಯತ್ನದಿಂದ ಪ್ರಸ್ತುತ ಸಾಲಿನಲ್ಲಿ ನಮ್ಮ ನವಭಾರತ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಲು ಸಾದ್ಯವಾಗಿದೆ.

  • ಚೇತನ್ ರಾಠೋಡ
    ಪ್ರಾಚಾರ್ಯರು, ನವಭಾರತ ಕಾಲೇಜು, ಜೇವರ್ಗಿ