ಗಳೂರು.ಏ.೨೨;-: ತಾಲೂಕಿನ ಗೂಗುದ್ದು ಗ್ರಾಮದ ಹಣ್ಣಿನ ವ್ಯಾಪಾರ ಮಾಡುವ ಈಶಪ್ಪ. ಸರಿತಮ್ಮ ದಂಪತಿಯ ಮಗಳಾದ ಈ. ಸಹನ ಮೊರಾರ್ಜಿ ದೇಸಾಯಿ ವಸತಿಯುತ ವಿಜ್ಞಾನ ಪದವಿ ಪೂರ್ವ ಕಾಲೇಜು ಅವರಗೊಳ್ಳ ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ಡಿಸ್ಟಿಂಕ್ಷನ್ ಪಡೆದಿದ್ದಾಳೆ ವಿದ್ಯಾರ್ಥಿನಿ ಪೋಷಕರು ರೈತಪಿ ಕೆಲಸಗಳನ್ನು ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಈಶಪ್ಪ ಸರಿತ ಮಗಳು ಹೆಚ್ಚಿನ ರೀತಿಯಲ್ಲಿ ವಿದ್ಯಾಭ್ಯಾಸ ಮಾಡಲಿ ಎಂದು ಕನಸುಗಳನ್ನು ಕಟ್ಟಿಕೊಂಡು ಹಗಲು ರಾತ್ರಿ ಕಷ್ಟಪಟ್ಟು ಮಗಳನ್ನು ಈ ರೀತಿಯಾಗಿ ವಿದ್ಯಾಭ್ಯಾಸವನ್ನು ಮಾಡಿಸಿರುವುದು ಸಂತೋಷಕರವಾದಂತ ವಿಷಯವಾಗಿದೆ.ಕನ್ನಡ -98 ಇಂಗ್ಲಿಷ್ -85 ಭೌತಶಾಸ್ತ್ರ -92 ರಾಸಾಯನಿಕ ಶಾಸ್ತ್ರ 93 ಗಣಿತ-98 ಜೀವಶಾಸ್ತ್ರ 97 ಒಟ್ಟು ಆರು ನೂರಕ್ಕೆ563 ಅಂಕಗಳನ್ನು ಗಳಿಸಿ ಕಾಲೇಜಿಗೆ ತಾಲೂಕಿಗೆ ಮತ್ತು ಗ್ರಾಮಕ್ಕೆ ಕೀರ್ತಿ ತಂದಿದ್ದಾಳೆ.ಈ ವಿದ್ಯಾರ್ಥಿನಿಗೆ ಊರಿನ ಗ್ರಾಮಸ್ಥರು ಸಂಬಂಧಿಕರು ಹಿತೈಷಿಗಳು ಸ್ನೇಹಿತರು ಇನ್ನು ಹೆಚ್ಚಿನ ರೀತಿಯಲ್ಲಿ ಮುಂದಿನ ವಿದ್ಯಾಭ್ಯಾಸ ಮಾಡಲಿ ಎಂದು ಹಾರೈಸಿದ್ದಾರೆ.