ದ್ವಿತೀಯ ಪಿಯುಸಿ ಸಾಧಕರ ಸನ್ಮಾನ ಆಸಕ್ತಿಯ ಕೋರ್ಸ್ ಆಯ್ಕೆ ಮಾಡಿಕೊಳ್ಳಿ: ಡಾ. ಗೌರೆ ಸಲಹೆ

ಬೀದರ್: ಸೆ.26:ಜೀವನದಲ್ಲಿ ಸಾಧನೆಗೆ ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕೋರ್ಸ್ ಆಯ್ಕೆ ಮಾಡಿಕೊಳ್ಳಬೇಕು ಎಂದು ಭೀಮಣ್ಣ ಖಂಡ್ರೆ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಶೈಕ್ಷಣಿಕ ನಿರ್ದೇಶಕ ಡಾ. ಸಂಜಯ್ ಗೌರೆ ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.

ಸಾಯಿ ಸ್ಫೂರ್ತಿ ಪದವಿಪೂರ್ವ ವಿಜ್ಞಾನ ಕಾಲೇಜು ಹಾಗೂ ಭೀಮಣ್ಣ ಖಂಡ್ರೆ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ನಗರದ ಸಾಯಿ ಸ್ಫೂರ್ತಿ ಪದವಿಪೂರ್ವ ವಿಜ್ಞಾನ ಕಾಲೇಜಿನಲ್ಲಿ ನಡೆದ ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಸಾಧಕರ ಸನ್ಮಾನ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಿಯುಸಿ ನಂತರ ಎಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಅನೇಕ ವೃತ್ತಿಪರ ಕೋರ್ಸ್‍ಗಳು ಇವೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಾಯಿ ಸ್ಫೂರ್ತಿ ಪದವಿಪೂರ್ವ ವಿಜ್ಞಾನ ಕಾಲೇಜು ಪ್ರಾಚಾರ್ಯ ಚಂದ್ರಶೇಖರ ಬಿರಾದಾರ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಸಂಯಮ, ಸಮಯಪ್ರಜ್ಞೆಯೊಂದಿಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ನುಡಿದರು.

ಸಾಯಿ ದೀಪ ಎಜುಕೇಷನ್ ಟ್ರಸ್ಟ್ ನಿರ್ದೇಶಕ ಪಂಢರಿನಾಥ ಸಾನೆ ಕಾರ್ಯಕ್ರಮ ಉದ್ಘಾಟಿಸಿದರು. ಅಂಬಿಕಾ ಎಸ್. ಮಚಕೂರೆ, ಪ್ರಗತಿ ಎಂ, ಗಜಾನಂದ ಕೊಳ್ಳೆ, ಪ್ರೊ. ಉಮಾಕಾಂತ ಮಠಪತಿ, ಉಪನ್ಯಾಸಕರಾದ ಆಂಜನೇಯ ಮಾಲ್ಗಿ, ಅಮರ, ಅಮೀತ್, ಪೂಜಾ, ಸುನೀತಾ, ಪೂಜಾಶ್ರೀ ಉಪಸ್ಥಿತರಿದ್ದರು. ದಿವ್ಯಾ ಮಠದ ನಿರೂಪಿಸಿದರು. ಲಕ್ಷ್ಮಿಕಾಂತ ವಂದಿಸಿದರು.