ದ್ವಿತೀಯ ಪಿಯುಸಿ ಪರೀಕ್ಷೆ-ಇತಿಹಾಸಕ್ಕೆ ೪೪ ಭೌತಶಾಸ್ತ್ರಕ್ಕೆ ೫೫ ಮಂದಿ ಗೈರು

ಕೋಲಾರ,ಮೇ,೧- ಜಿಲ್ಲೆಯ ಆರು ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ-೨ರ ಎರಡನೇ ದಿನದ ಪರೀಕ್ಷೆ ಯಶಸ್ವಿಯಾಗಿ ನಡೆದಿದ್ದು, ಇಂದಿನ ಇತಿಹಾಸ ವಿಷಯಕ್ಕೆ ೪೪ ಹಾಗೂ ಭೌತಶಾಸ್ತ್ರ ವಿಷಯಕ್ಕೆ ೫೫ ಮಂದಿ ಗೈರಾಗಿದ್ದಾರೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರಪ್ಪ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಇತಿಹಾಸ ಪರೀಕ್ಷೆಗೆ ಒಟ್ಟು ೪೮೧ ಮಂದಿ ಹೆಸರು ನೋಂದಾಯಿಸಿದ್ದು, ೪೩೭ ಮಂದಿ ಹಾಜರಾಗುವ ಮೂಲಕ ೪೪ ಮಂದಿ ಗೈರಾಗಿದ್ದಾರೆ ಹಾಗೂ ಭೌತಶಾಸ್ತ್ರ ವಿಷಯಕ್ಕೆ ೭೧೦ ಮಂದಿ ಹೆಸರು ನೋಂದಾಯಿಸಿದ್ದು, ೬೫೫ ಮಂದಿ ಹಾಜರಾಗುವ ಮೂಲಕ ೫೫ ಮಂದಿ ಗೈರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಪಿಯುಸಿ ಪರೀಕ್ಷೆ-೨ ಕ್ಕೆ ಪ್ರತಿತಾಲ್ಲೂಕಿಗೆ ಒಂದರಂತೆ ಆರು ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದ್ದು, ಯಾವುದೇ ಗೊಂದಲಗಳಿಗೆ ಅವಕಾಶವಾಗಿಲ್ಲ ಮತ್ತು ಎಲ್ಲೂ ಅವ್ಯವಹಾರಗಳು ನಡೆದ ಬಗ್ಗೆ ವರದಿಯಾಗಿಲ್ಲ ಎಂದು ತಿಳಿಸಿದ್ದಾರೆ.
ಇತಿಹಾಸ ಹಾಜರಾತಿ ವಿವರ-
ಕೋಲಾರದ ಸರ್ಕಾರಿ ಬಾಲಕರ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಇತಿಹಾಸ ವಿಷಯಕ್ಕೆ ೬೬ ಮಂದಿ ನೋಂದಾಯಿಸಿದ್ದು, ೬೧ ಮಂದಿ ಹಾಜರಾಗಿದ್ದಾರೆ ಮತ್ತು ೫ ಮಂದಿ ಗೈರಾಗಿದ್ದಾರೆ. ಶ್ರೀನಿವಾಪುರ ಬಾಲಕರ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ ೩೧ ಮಂದಿ ನೋಂದಾಯಿಸಿದ್ದು, ೨೮ ಮಂದಿ ಪರೀಕ್ಷೆಗೆ ಹಾಜರಾಗಿ ೩ ಮಂದಿ ಗೈರಾಗಿದ್ದಾರೆ.
ಮುಳಬಾಗಿಲು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ೭೮ ಮಂದಿ ಹೆಸರು ನೋಂದಾಯಿಸಿದ್ದು, ೬೬ ಮಂದಿ ಹಾಜರಾಗಿ ೧೨ ಮಂದಿ ಗೈರಾಗಿದ್ದಾರೆ. ಮಾಲೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ೭೯ ಮಂದಿ ನೋಂದಾಯಿಸಿದ್ದು, ೭೩ ಮಂದಿ ಹಾಜರಾಗಿ ೬ ಮಂದಿ ಗೈರಾಗಿದ್ದಾರೆ.
ಬಂಗಾರಪೇಟೆ ಬಾಲಕಿಯರ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ ೧೦೧ ಮಂದಿ ಹೆಸರು ನೋಂದಾಯಿಸಿದ್ದು, ೮೯ ಮಂದಿ ಹಾಜರಾಗಿದ್ದಾರೆ ಮತ್ತು ೧೨ ಮಂದಿ ಗೈರಾಗಿದ್ದಾರೆ. ಕೆಜಿಎಫ್ ಉರಿಗಾಂ ಪದವಿ ಪೂರ್ವ ಕಾಲೇಜಿನ ಕೇಂದ್ರದಲ್ಲಿ ೧೨೬ ಮಂದಿ ಹೆಸರು ನೋಂದಾಯಿಸಿದ್ದು, ೧೨೦ ಮಂದಿ ಹಾಜರಾಗಿದ್ದಾರೆ ಮತ್ತು ೬ ಮಂದಿ ಗೈರಾಗಿದ್ದಾರೆ ಎಂದು ಪಿಯು ಡಿಡಿ ರಾಮಚಂದ್ರಪ್ಪ ತಿಳಿಸಿದ್ದಾರೆ.
ಭೌತಶಾಸ್ತ್ರ ಹಾಜರಿ ವಿವರ-
ಕೋಲಾರದ ಸರ್ಕಾರಿ ಬಾಲಕರ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಭೌತಶಾಸ್ತ್ರ ವಿಷಯಕ್ಕೆ ೩೧೭ ಮಂದಿ ನೋಂದಾಯಿಸಿದ್ದು, ೨೯೧ ಮಂದಿ ಹಾಜರಾಗಿದ್ದಾರೆ ಮತ್ತು ೨೬ ಮಂದಿ ಗೈರಾಗಿದ್ದಾರೆ. ಶ್ರೀನಿವಾಪುರ ಬಾಲಕರ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ ೫೪ ಮಂದಿ ನೋಂದಾಯಿಸಿದ್ದು, ೪೮ ಮಂದಿ ಪರೀಕ್ಷೆಗೆ ಹಾಜರಾಗಿ ೬ ಮಂದಿ ಗೈರಾಗಿದ್ದಾರೆ.
ಮುಳಬಾಗಿಲು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ೬೬ ಮಂದಿ ಹೆಸರು ನೋಂದಾಯಿಸಿದ್ದು, ೫೯ ಮಂದಿ ಹಾಜರಾಗಿ ೭ ಮಂದಿ ಗೈರಾಗಿದ್ದಾರೆ. ಮಾಲೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ೧೦೨ ಮಂದಿ ನೋಂದಾಯಿಸಿದ್ದು, ೯೭ ಮಂದಿ ಹಾಜರಾಗಿ ೫ ಮಂದಿ ಗೈರಾಗಿದ್ದಾರೆ.
ಬಂಗಾರಪೇಟೆ ಬಾಲಕಿಯರ ಪದವಿ ಪೂರ್ವ ಕಾಲೇಜು ಕೇಂದ್ರದಲ್ಲಿ ೫೦ ಮಂದಿ ಹೆಸರು ನೋಂದಾಯಿಸಿದ್ದು, ೪೯ ಮಂದಿ ಹಾಜರಾಗಿದ್ದಾರೆ ಮತ್ತು ಒಬ್ಬ ವಿದ್ಯಾರ್ಥಿ ಗೈರಾಗಿದ್ದಾರೆ. ಕೆಜಿಎಫ್ ಉರಿಗಾಂ ಪದವಿ ಪೂರ್ವ ಕಾಲೇಜಿನ ಕೇಂದ್ರದಲ್ಲಿ ೧೨೧ ಮಂದಿ ಹೆಸರು ನೋಂದಾಯಿಸಿದ್ದು, ೧೧೧ ಮಂದಿ ಹಾಜರಾಗಿದ್ದಾರೆ ಮತ್ತು ೧೦ ಮಂದಿ ಗೈರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಇದೇ ಮೊದಲ ಬಾರಿಗೆ ಪ್ರತಿ ಪರೀಕ್ಷಾ ಕೊಠಡಿಯಲ್ಲೂ ಸಿಸಿ ಕ್ಯಾಮರಾ ಅಳವಡಿಸಿದ್ದು ವೆಬ್ ಕಾಸ್ಟಿಂಗ್ ಮಾಡಲಾಗಿದೆ.