ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ

ಹುಬ್ಬಳ್ಳಿ, ಏ16: ಅಂಜುಮನ್-ಎ-ಇಸ್ಲಾಂನ ಅಂಗ ಸಂಸ್ಥೆಯಾದ ಹಳೇ ಹುಬ್ಬಳ್ಳಿಯ ಆಂಗ್ಲೊ ಉರ್ದು ಬಾಲಕಿಯರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಸಂಸ್ಥೆಗೆ ಕೀರ್ತಿ ತಂದಿದ್ದಾರೆ. 5 ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್, 62 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿ ಹಾಗೂ 37 ವಿದ್ಯಾರ್ಥಿನಿಯರು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾರೆ.
ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯರಾದ ಶಫೀನ್ ಬಹಾದ್ದೂರ ಶೇ. 88.16, ಹಬೀಬಾ ಪ್ಯಾರೆ ಶೇ. 81. 33, ಬಿಬಿ ತಸ್ಕಿನ್ ಬೆಂಗೇರಿ ಶೇ. 80.66, ಸಾನಿಯಾ ಚೌಧರಿ ಶೇ. 80 ಹಾಗೂ ತನಾಝ ಪಠಾಣ ಶೇ. 80 ಅಂಕ ಪಡೆದಿದ್ದಾರೆ.
ಕಲಾ ವಿಭಾಗದ ಬಿಬಿ ಸಕೀನಾ ಕಿಲ್ಲೇದಾರ್ ಶೇ. 86.66, ಸಾನಿಯಾ ಸವನೂರ್ ಶೇ. 83, ರಹಮತ್‍ಬಿ ಬೂದಿಹಾಳ ಶೇ. 81.33, ಮಹೆನೂರ್ ಬಂಕಾಪೂರ ಶೇ. 80 ಹಾಗೂ ಶಿರೀನ ಶೇಖ್ ಶೇ. 80 ಅಂಕಗಳನ್ನು ಪಡೆದಿದ್ದಾರೆ.